ಸೌರವ್ ಗಂಗೂಲಿ ಆಯ್ಕೆಯ ಶ್ರೇಷ್ಠ XIನಲ್ಲಿ ನಾಲ್ವರು ಆಸೀಸ್ !

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 04: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಗುರುವಾರ(ಆಗಸ್ಟ್ 04) ತಮ್ಮ ಆಯ್ಕೆಯ ಸರ್ವ ಶ್ರೇಷ್ಠ XI ಘೋಷಿಸಿದ್ದಾರೆ. ಗಂಗೂಲಿ ಆಯ್ಕೆಯ ತಂಡದಲ್ಲಿ ನಾಲ್ವರು ಆಸ್ಟ್ರೇಲಿಯನ್ನರು ಇರುವುದು ವಿಶೇಷ.

ಲಾರ್ಡ್ಸ್ ಕ್ರಿಕೆಟ್ ಮೈದಾನದ ಅಧಿಕೃತ ಟ್ವಿಟ್ಟರ್ ಕಥೆಯ ಮೂಲಕ ಗುರುವಾರ ವಿಡಿಯೋ ಸಂದೇಶ ನೀಡಿರುವ ಗಂಗೂಲಿ ಅವರು ಸರ್ವಕಾಲಿಕ ಶ್ರೇಷ್ಠ ತಂಡವನ್ನು ಹೆಸರಿಸಿದ್ದಾರೆ. [ಮೆಕಲಮ್ ಆಯ್ಕೆಯ ಶ್ರೇಷ್ಠ ತಂಡದಲ್ಲಿ ಸಚಿನ್ ಗೆ ಸ್ಥಾನ]

Sourav Ganguly reveals his All-Time XI; 2 Indians make the cut

ಕೋಲ್ಕತ್ತಾದ ಎಡಗೈ ಬ್ಯಾಟ್ಸ್ ಮನ್ ಗಂಗೂಲಿ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹಾಗೂ ಇಂಗ್ಲೆಂಡಿನ ಅಲೈಸ್ಟರ್ ಕುಕ್ ಅವರನ್ನು ಆರಂಭಿಕ ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. [ಸಂಗಕ್ಕಾರನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡದಲ್ಲಿ ಒಬ್ಬ ಭಾರತೀಯ]

ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಮೂರನೇ ಕ್ರಮಾಂಕದಲ್ಲಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲು ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯಾದ ಶ್ರೇಷ್ಠ ನಾಯಕ ರಿಕಿ ಪಾಂಟಿಂಗ್ ರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಿಕೊಂಡಿದ್ದರು ಅವರ ಬ್ಯಾಟಿಂಗ್ ಕ್ರಮಾಂಕ 7ನೇ ಸ್ಥಾನದಲ್ಲಿವುದು ಹುಬ್ಬೇರಿಸುವಂತೆ ಮಾಡಿದೆ. ಸ್ಪಿನ್ನರ್ ಗಳಾಗಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ಇದ್ದರೆ, ಅನಿಲ್ ಕುಂಬ್ಳೆಗೆ ಜಾಗ ಒದಗಿಸಿಲ್ಲ. ವೇಗದ ಪಡೆಯಲ್ಲಿ ಗ್ಲೆನ್ ಮೆಗ್ರಾ ಇದ್ದಾರೆ. ಮಿಕ್ಕಂತೆ ಯಾರು ಇದ್ದಾರೆ ನೋಡಿ

ಗಂಗೂಲಿ ಅಯ್ಕೆಯ XI:

1.ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
2. ಅಲೈಸ್ಟರ್ ಕುಕ್ (ಇಂಗ್ಲೆಂಡ್)
3. ರಾಹುಲ್ ದ್ರಾವಿಡ್ (ಭಾರತ)
4. ಸಚಿನ್ ತೆಂಡೂಲ್ಕರ್ (ಭಾರತ)
5. ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
6. ಕುಮಾರ್ ಸಂಗಕ್ಕಾರ (ಶ್ರೀಲಂಕಾ, ವಿಕೆಟ್ ಕೀಪರ್)
7. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ, ನಾಯಕ)
8. ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)
9. ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)
10. ಶೇನ್ ವಾರ್ನ್ (ಆಸ್ಟ್ರೇಲಿಯಾ)
11. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former captain Sourav Ganguly today (August 4) picked his All-Time XI dominated by Australians. There are 2 Indian legends in the team.
Please Wait while comments are loading...