ಗಂಗೂಲಿ-ದ್ರಾವಿಡ್ ದಾಖಲೆ ಮುರಿದ ಕೌಂಟಿ ಕ್ರಿಕೆಟರ್ಸ್

Posted By:
Subscribe to Oneindia Kannada

ಲಂಡನ್, ಜೂನ್ 07: ಕ್ರಿಕೆಟ್ ದಿಗ್ಗಜರಾದ ಭಾರತದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರ ಅತ್ಯಧಿಕ ರನ್ ಜೊತೆಯಾಟದ ದಾಖಲೆಯನ್ನು ಕೌಂಟಿ ಕ್ರಿಕೆಟರ್ಸ್ ಜೋಡಿ ಮುರಿದಿದೆ.

ಇಂಗ್ಲೀಷ್ ಕೌಂಟಿಯ ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ನಾಟಿಂಗ್​ಹ್ಯಾಮ್ ಶೈರ್ ತಂಡದ ರಿಕಿವೆಸ್ಲೆಸ್ ಹಾಗೂ ಮೈಕಲ್ ಲಂಬ್ ಈ ಸಾಧನೆ ಮಾಡಿದ್ದಾರೆ. [ದ್ರಾವಿಡ್ ಕೋಚಿಂಗ್ ಪಡೆದ ತಂಡದಿಂದ ಆಸೀಸ್ ಪ್ರವಾಸ]

ಈ ಜೋಡಿ 39.2 ಓವರ್​ಗೆ 342ರನ್​ಗಳ ಭರ್ಜರಿ ಜತೆಯಾಟ ಗಳಿಸಿದೆ. ಈ ಮೂಲಕ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ.

Sourav Ganguly-Rahul Dravid's record broken by Riki Wessels-Michael Lumb

ಟ್ರೆಂಟ್ ಬಿಡ್ಜ್ ನಲ್ಲಿ ನಡೆದ ನಾಟ್ಸ್ ಹಾಗೂ ನಾಟಿಂಗ್​ಹ್ಯಾಮ್ ಶೈರ್ ತಂಡದ ನಡುವಿನ ಪ್ರಥಮ ದರ್ಜೆ ಪಂದ್ಯದಲ್ಲಿ ಈ ದಾಖಲೆಯ ಜೊತೆಯಾಟ ಕಂಡು ಬಂದಿದೆ.[ಗಂಗೂಲಿ, ಬಿಸಿಸಿಐ ಅಧ್ಯಕ್ಷ ಹುದ್ದೆ ಬೇಡವೆನ್ನಲು ಕಾರಣವಿದೆ!]

ರಿಕಿವೆಸ್ಲೆಸ್ ಅವರು 97 ಎಸೆತದಲ್ಲಿ 146 ರನ್ ಗಳಿಸಿದರೆ, ಮೈಕಲ್ ಲಂಬ್ ದಾಖಲೆಯ 184 ರನ್​ಚೆಚ್ಚಿದರು. ಇವರಿಬ್ಬರ ಆಟದ ನೆರವಿನಿಂದ ನಾಟಿಂಗ್​ಹ್ಯಾಮ್ ಶೈರ್ ತಂಡ ಎಂಟು ವಿಕೆಟ್ ನಷ್ಟಕ್ಕೆ 445 ರನ್ ಗಳಿಸಿತು.

Michael Lumb

ಈ ಬೃಹತ್ ಸವಾಲು ಬೆನ್ನತ್ತಿದ ನಾಟ್ಸ್ ಕೂಡಾ ಉತ್ತಮ ಪ್ರದರ್ಶನ ನೀಡಿ 425 ರನ್ ​ಗಳಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇಂಗ್ಲೆಂಡಿನಲ್ಲಿ 1999ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ 318 ರನ್​ಗಳ ಜತೆಯಾಟ ಸಾಧಿಸಿ ದಾಖಲೆ ಬರೆದಿದ್ದರು.

ಆದರೆ, ಲಿಸ್ಟ್ ಎ ಪಂದ್ಯಗಳ ಪೈಕಿ ಲಂಬ್ ಹಾಗೂ ವೆಸ್ಲೆಸ್ ಅವರ ದಾಖಲೆ ಜೊತೆಯಾಟ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ. ಕ್ರಿಸ್ ಗೇಲ್ ಹಾಗೂ ಮರ್ಲಾನ್ ಸ್ಯಾಮುಯಲ್ಸ್ ಅವರು ವಿಶ್ವಕಪ್ 2015 ರಲ್ಲಿ ಜಿಂಬಾಬ್ವೆ ವಿರುದ್ಧ 372 ರನ್ ಗಳಿಸಿದ್ದರು. ಆದರೆ, ಅತ್ಯಧಿಕ ರನ್ ಜೊತೆಯಾಟ ಸರೆ(496/4) ಹಾಗೂ ಗೌಸೆಸ್ಟರ್ ಶೈರ್ ವಿರುದ್ಧ 2007ರಲ್ಲಿ ಕಂಡು ಬಂದಿತ್ತು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The ongoing Royal London One-Day Cup between English county teams Nottinghamshire and Northamptonshire went into books on Monday (June 6) as several records were tumbled in the List A game.
Please Wait while comments are loading...