ಬ್ಯಾಟ್ಸ್ ಮನ್ ಗಳಿಗೆ ನಡುಕ ಹುಟ್ಟಿಸುವ ವೇಗಿ ಬೆಚ್ಚಿ ಬಿದ್ದ ಕ್ಷಣ!

By: ರಮೇಶ ಬಿ
Subscribe to Oneindia Kannada

ಜೋಹಾನ್ಸ್ ಬರ್ಗ್, ಫೆ.08. ವಿಶ್ವದ ಎಲ್ಲಾ ಬ್ಯಾಟ್ಸ್ ಮನ್ ಗಳಿಗೆ ನಡುಕ ಹುಟ್ಟಿಸುವ ದಕ್ಷಿಣ ಆಫ್ರಿಕಾ ತಂಡ ವೇಗಿ ಡೇಲ್ ಸ್ಟೈನ್ ಅವರು ಬೆಚ್ಚಿ ಬಿದ್ದ ಪ್ರಸಂಗ ನಡೆದಿದೆ. ವಿಶ್ವಮಾನ್ಯ ವೇಗಿ, ವಿಶ್ವದ ಅತಿ ವಿಷಕಾರಿ ಹಾವುಗಳಲ್ಲಿ ಒಂದೆನಿಸಿರುವ ಬ್ಲ್ಯಾಕ್ ಮಾಂಬಾ ಜೊತೆ ಮುಖಾಮುಖಿಯಾಗಿದ್ದಾರೆ.

ಇತ್ತೀಚೆಗೆ ಸ್ಟೈನ್ ಅವರು ರಾಷ್ಟ್ರೀಯ ಕ್ರೂಜರ್(Kruger) ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದರು. ಕಾರಿನಲ್ಲಿ ಹೋಗುವ ಮಾರ್ಗ ಮಧ್ಯದಲ್ಲಿ ಹಾವೊಂದು ದಾರಿಯಲ್ಲಿ ಬಿದ್ದಿತ್ತು ಅದನ್ನು ಕಂಡ ಸ್ಟೈನ್ ಯಾವುದೋ ಹಾವು ಒಂದು ಗಾಯಗೊಂಡು ಬಿದ್ದಿದೆ ಎಂದು ಕಾರಿನಿಂದ ಇಳಿದು ನೋಡಲು ಹಾವಿನ ಹತ್ತಿರ ಹೋಗಿದ್ದಾರೆ.

Snake that! Dale Steyn faces down Black Mamba

ಹತ್ತಿರದಿಂದ ನೋಡಿದಾಗ ಇದು ಬ್ಲ್ಯಾಕ್ ಮಾಂಬಾ ಅತ್ಯಂತ ವಿಷಕಾರಿ ಸರ್ಪ ಎಂದು ಸ್ಟೈನ್ ಗೆ ತಿಳಿದು ಬಂದಿದೆ. ಸಾವಿನ ದವಡೆಯಿಂದ ಕೆಲವೇ ಇಂಚುಗಳ ದೂರದಲ್ಲಿದ್ದ ಸ್ಟೈನ್ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ. ಹಾವು ಕೂಡಾ ತಕ್ಷಣ ಹಿಂದೆ ಸರಿದಿದೆ.

32 ವರ್ಷ ವಯಸ್ಸಿನ ಸ್ಟೈನ್ ಅವರು ದಕ್ಷಿಣ ಆಫ್ರಿಕಾ ಪರ 82 ಟೆಸ್ಟ್ ಪಂದ್ಯ, 112 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಸದ್ಯ ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿದ್ದಾರೆ. ಮಾಂಬಾ ಕಡಿತದಿಂದ ಬಚಾವಾಗಿದ್ದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿ ಅದನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When one of the world's most feared fast bowlers came face to face with one of the planet's deadliest snakes, there was only one winner and South Africa's Dale Steyn was happy to concede defeat.
Please Wait while comments are loading...