ಶ್ರೇಯಸ್ ಭರ್ಜರಿ ಆಟ, ಇಂಡಿಯಾ 'ಎ' ಪಾಲಾದ ಸರಣಿ

Posted By:
Subscribe to Oneindia Kannada

ಪ್ರಿಟೊರಿಯಾ, ಆಗಸ್ಟ್ 09: ಮುಂಬೈನ ಆಟಗಾರ ಶ್ರೇಯಸ್ ಅಯ್ಯರ್ ಅವರ ಅಮೋಘ ಶತಕದ ನೆರವಿನಿಂದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 'ಎ' ತಂಡವನ್ನು ಸೋಲಿಸಿದ ಭಾರತ 'ಎ' ತಂಡ ಚಾಪಿಯನ್ ಆಗಿ ಹೊರಹೊಮ್ಮಿದೆ.

ಶ್ರೇಯಸ್ ಅಯ್ಯರ್ ಅವರು 131 ಎಸೆತಗಳಲ್ಲಿ ಅಜೇಯ 140ರನ್ ಚೆಚ್ಚಿ, ದಕ್ಷಿಣ ಆಫ್ರಿಕಾ ತಂಡ ಒಡ್ಡಿದ್ದ 268ರನ್ ಟಾರ್ಗೆಟ್ ಸುಲಭವಾಗಿ ಚೇಸ್ ಮಾಡಲು ಸಾಧ್ಯವಾಯಿತು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 7 ವಿಕೆಟ್ ಗಳಿಂದ ಜಯ ದಾಖಲಿಸಿತು.

Shreyas Iyer fires ton as India 'A' lift tri-series title in South Africa

11 ಬೌಂಡರಿ, 4 ಸಿಕ್ಸರ್ ಸಿಡಿಸಿದ ಶ್ರೇಯಸ್ ಅವರಿಗೆ 72ರನ್ ಗಳಿಸಿದ ವಿಜಯ್ ಶಂಕರ್ ಹಾಗೂ ನಾಯಕ ಮನೀಶ್ ಪಾಂಡೆ ಅಜೇಯ 32ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಇದರಿಂದಾಗಿ ಭಾರತ ಎ ತಂಡ, 268ರನ್ ಗುರಿಯನ್ನು 46.5 ಓವರ್ ಗಳಲ್ಲಿ ತಲುಪಿತು.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಹಿರಿಯರ ತಂಡದ ಪರ ಆಡುವ ಫರ್ಹಾನ್ ಬೆಹರ್ದೀನ್ ಅವರು ಅಜೇಯ 101ರನ್ ಗಳಿಸಿದರು. 4 ಬೌಂಡರಿ, 3 ಸಿಕ್ಸರ್ ಸಿಡಿಸಿದರು. ಫರ್ಹಾನ್ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 'ಎ' ತಂಡ 267/7 ಸ್ಕೋರ್ ಮಾಡಿತು. ಭಾರತದ ಪರ ಶಾರ್ದೂಲ್ ಠಾಕೂರ್ 52/3, ಸಿದ್ದಾರ್ಥ್ ಕೌಲ್ 55/2 ಮತ್ತೊಮ್ಮೆ ಮಿಂಚಿದರು.

Shreyas Iyer
Kanndiga Manish Pandey, Karun Nair To Lead India A Teams | Oneindia Kannada

ಅಜೇಯ 93, ಅಜೇಯ 86, ಅಜೇಯ 41, 55 ಹಾಗೂ ಅಜೇಯ 32ರನ್ ಗಳಿಸುವ ಮೂಲಕ ನಾಯಕ ಮನೀಶ್ ಪಾಂಡೆ ಅವರು ಟೀಂ ಇಂಡಿಯಾ ಏಕದಿನ ತಂಡಕ್ಕೆ ಮರಳುವ ಅವಕಾಶವನ್ನು ಹೆಚ್ಚಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಬಳಿಕ ಭಾರತದಲ್ಲಿ ಸುಮಾರು 23 ಅಂತಾರಾಷ್ಟ್ರೀಯ ಪಂದ್ಯಗಳು ನಿಗದಿಯಾಗಿವೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai batsman Shreyas Iyer delivered when it mattered most as India 'A' outplayed South Africa 'A' by seven wickets to retain the tri-series trophy they won four years ago.
Please Wait while comments are loading...