ಚಾಂಪಿಯನ್ಸ್ ಟ್ರೋಫಿ : ಗಂಗೂಲಿ ದಾಖಲೆ ಬದಿಗೊತ್ತಿದ ಧವನ್

Posted By:
Subscribe to Oneindia Kannada

ಲಂಡನ್, ಜೂನ್ 15: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಗಳಿಗೂ ಶಿಖರ್ ಧವನ್ ಗೂ ಅದೇನೋ ಒಳ್ಳೆ ನಂಟಿದೆ. ಧವನ್ ಉತ್ತಮ ಪ್ರದರ್ಶನ ಸೆಮಿಫೈನಲ್ ನಲ್ಲೂ ಮುಂದುವರೆದಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ದಾಖಲೆ ಹೊಂದಿದ್ದ ಸೌರವ್ ಗಂಗೂಲಿ ದಾಖಲೆಯನ್ನು ಶಿಖರ್ ಧವನ್ ಮುರಿದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸೇರಿದಂತೆ 680ರನ್ ಕಲೆ ಹಾಕಿದ್ದಾರೆ.

ವೇಗದ ಸಾವಿರ ರನ್‌ ಸಿಡಿಸಿ ಸಚಿನ್‌ ದಾಖಲೆ ಮುರಿದ ಶಿಖರ್ ಧವನ್

ಇಲ್ಲಿ ತನಕ ಮಾಜಿ ನಾಯಕ, ಎಡಗೈ ಬ್ಯಾಟ್ಸ್ ಮನ್ ಸೌರವ್ ಗಂಗೂಲಿ ಅವರು ಗಳಿಸಿದ್ದ 665ರನ್ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆ ಎನಿಸಿತ್ತು. ಈಗ ಶಿಖರ್ ಧವನ್ ಈ ದಾಖಲೆ ಬದಿಗೊತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟಾಪ್ ಸ್ಕೋರರ್ಸ್ ಗಳ ಪೈಕಿ ವೆಸ್ಟ್ ಇಂಡೀಸ್ ನ ಸ್ಫೋಟಕ ಆರಂಭ್ಇಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. 791ರನ್ ಕಲೆ ಹಾಕಿದ್ದಾರೆ. ಭಾರತೀಯ ಬ್ಯಾಟ್ಸ್ ಮನ್ ಗಳ ಪೈಕಿ ಶಿಖರ್ ಧವನ್ ಮುಂಚೂಣಿಯಲ್ಲಿದ್ದಾರೆ.

ಸಾಧನೆಯ ಶಿಖರ

ಸಾಧನೆಯ ಶಿಖರ

ಇಲ್ಲಿ ತನಕದ ಎಲ್ಲಾ ಚಾಂಪಿಯನ್ಸ್ ಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆದಾರರ ಪೈಕಿ ಶಿಖರ್ ಧವನ್ 680ರನ್ ಗಳಿಸಿ ಅಗ್ರಸ್ಥಾನಕ್ಕೇರಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲೇ ಮೂರು ಶತಕ, ಮೂರು ಅರ್ಧಶತಕ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಸೌರವ್ ಗಂಗೂಲಿ(665ರನ್) ನಂತರದ ಸ್ಥಾನಗಳಲ್ಲಿ ರಾಹುಲ್ ದ್ರಾವಿಡ್ (627), ಸಚಿನ್ ತೆಂಡೂಲ್ಕರ್ (441) ಇದ್ದಾರೆ.

ಭಾರತದ ಆರಂಭಿಕ ಜೋಡಿ- ರೋಹಿತ್ -ಶಿಖರ್ ರಿಂದ ಹೊಸ ದಾಖಲೆ

ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್

ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್

ದೆಹಲಿಯ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಲಯ ಮುಂದುವರೆಸಿ, ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಐಸಿಸಿ ಆಯೋಜನೆಯ ಏಕದಿನ ಟೂರ್ನಮೆಂಟ್ ನಲ್ಲಿ ತ್ವರಿತಗತಿಯಲ್ಲಿ 1,000ರನ್ ಗಳಿಸಿದ್ದಾರೆ. ಶಿಖರ್ (16), ಸಚಿನ್ (18) ಹಾಗೂ ಗಂಗೂಲಿ (20) ಟಾಪ್ ಮೂರು ಸ್ಥಾನದಲ್ಲಿದ್ದಾರೆ.

2013ರಲ್ಲಿ ಸರಣಿ ಶ್ರೇಷ್ಠ

2013ರಲ್ಲಿ ಸರಣಿ ಶ್ರೇಷ್ಠ

2013ರಲ್ಲಿ ಸರಣಿ ಶ್ರೇಷ್ಠ ಎನಿಸಿಕೊಂಡಿದ್ದ ಶಿಖರ್ ಧವನ್ ಅವರು ಈ ಬಾರಿಯೂ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. 2013 ಹಾಗೂ 2017ರ ಎರಡು ಆವೃತ್ತಿಯಲ್ಲೂ 300ಪ್ಲಸ್ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಶಿಖರ್ ಪಾಲಾಗಿದೆ. ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಶ್ರೀಲಂಕಾ ವಿರುದ್ಧ ಬಿ ಗುಂಪಿನ ಲೀಗ್ ಪಂದ್ಯದಲ್ಲಿ 125ರನ್ ಗಳಿಸಿದ್ದು ಸದ್ಯದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಚಾಂಪಿಯನ್ಸ್ ಟ್ರೋಫಿ ಟಾಪ್ ಸ್ಕೋರರ್ಸ್

ಚಾಂಪಿಯನ್ಸ್ ಟ್ರೋಫಿ ಟಾಪ್ ಸ್ಕೋರರ್ಸ್

* ಕ್ರಿಸ್ ಗೇಲ್ -17 ಇನ್ನಿಂಗ್ಸ್-791ರನ್ ಗಳು
* ಮಹೇಲ ಜಯವರ್ದನೆ-21 ಇನ್ನಿಂಗ್ಸ್-742ರನ್ ಗಳು
* ಕುಮಾರ್ ಸಂಗಕ್ಕಾರ -21 ಇನ್ನಿಂಗ್ಸ್-683 ರನ್ ಗಳು
* ಶಿಖರ್ ಧವನ್ -9 ಇನ್ನಿಂಗ್ಸ್ -680 ರನ್ ಗಳು
* ಸೌರವ್ ಗಂಗೂಲಿ- 13 ಇನ್ನಿಂಗ್ಸ್ -665ರನ್ ಗಳು
* ರಾಹುಲ್ ದ್ರಾವಿಡ್ -19 ಇನ್ನಿಂಗ್ಸ್- 627ರನ್ ಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Swashbuckling opening batsman Shikhar Dhawan on Thursday (June 15) became India's highest run-getter in the ICC Champions Trophy, surpassing former skipper Sourav Ganguly's haul of 665 runs.
Please Wait while comments are loading...