ನೀರಿನ ಸಮಸ್ಯೆಗೆ ಪಂದ್ಯ ಸ್ಥಳಾಂತರ ಎಷ್ಟು ಸರಿ: ವಿವಿಎಸ್ ಲಕ್ಷ್ಮಣ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಹೈದ್ರಾಬಾದ್, ಏಪ್ರಿಲ್ 07 : ಮಹಾರಾಷ್ಟ್ರದಲ್ಲಿ ಎದುರಾಗಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಯಿಂದ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡುವುದು ಸೂಕ್ತ ಪರಿಹಾರವಲ್ಲ, ಇದು ದೇಶದ ಸಮಸ್ಯೆ ಆಗಿದೆ ಎಂದು ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಕೋಚ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಈ ನೀರಿನ ಸಮಸ್ಯೆ ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರವಲ್ಲ, ದೇಶಾದ್ಯಂತ ನೀರಿನ ಸಮಸ್ಯೆ ಇದೆ. ಇದರಿಂದ ಪಂದ್ಯಗಳನ್ನು ಸ್ಥಳಾಂತರ ಮಾಡುವ ಮೂಲಕ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರವಲ್ಲ ಎಂದು ಲಕ್ಷ್ಮಣ್ ಕೋರ್ಟ್ ಹೇಳಿದ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೇವಲ ಎರಡು ಮೂರು ನಗರಗಳಲ್ಲಿ ನೀರಿನ ಸಮಸ್ಯೆ ಅಲ್ಲ ಈ ಬಾರಿ ವಾತಾವರಣದಲ್ಲಿ ಏರುಪೇರಾಗಿದ್ದು, ಇಡೀ ದೇಶದಲ್ಲಿಯೇ ಮಳೆ ಪ್ರಮಾಣ ಕುಂಠಿತಗೊಂಡಿದ್ದರಿಂದ ಅಂತರ್ಜಲದ ಮಟ್ಟ ಕುಸಿದಿದೆ. [ರಾಜ್ಯದಲ್ಲಿ ಬರ, ಐಪಿಎಲ್ ಪಂದ್ಯಗಳನ್ನು ಶಿಫ್ಟ್ ಮಾಡಿ: ಬಿಜೆಪಿ]

ಕೇವಲ ರೈತರಿಗೆ ಮಾತ್ರವಲ್ಲದೆ ದೇಶದೆಲ್ಲೆಡೆ ಜನರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರ ಪಂದ್ಯಗಳನ್ನು ಸ್ಥಳಾಂತರ ಮಾಡುವುದರಿಂದ ಪರಿಹಾರ ಕಂಡುಕೊಳ್ಳುವುದಲ್ಲ ಎಂದಿದ್ದಾರೆ. [ಕ್ರಿಕೆಟ್‌ಗಿಂತ ಜನರೇ ಮುಖ್ಯ ಎಂದ ಮುಂಬೈ ಹೈಕೋರ್ಟ್]

Shifting IPL 2016 matches not solution for drought: VVS Laxman

ಈ ಐಪಿಎಲ್ ನಡೆಸುವುದರಿಂದ ಬಾರತದಲ್ಲಿ ಅಡಗಿರುವ ಯಂಗ್ ಸ್ಟಾರ್ಸ್ ಆಟಗಾರರ ಪ್ರತಿಭೆಯನ್ನು ಹೊರ ಸಹಾಯಕವಾಗಿದೆ. ಹಾಗೂ ಭಾರತದಲ್ಲಿ ಯುವ ಆಟಗಾರರು ಇಂತಹ ಟೂರ್ನಿಗಳಲ್ಲಿ ಹಲವು ಅನುಭವಗಳನ್ನು ಪಡೆಯುತ್ತಾರೆ ಹೀಗೆಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.[ಹಸ್ಸಿಗೆ ಟೀಂ ಇಂಡಿಯಾ ಕೋಚ್ ಆಗಲು ಆಫರ್ ಸಿಕ್ಕಿತಂತೆ!]

ಐಪಿಎಲ್ ಕ್ರಿಕೆಟ್ ಗಿಂತ ಜನರು ಮುಖ್ಯ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಆದರೆ ಪಂದ್ಯಗಳನ್ನು ಸ್ಥಳಾಂತರ ಮಾಡುವುದು ಸುಲಭವಾದ ಮಾತಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಕೇಳಿದ್ದರು. ಈಗ ಅವರ ಮಾತಿಗೆ ಮತ್ತೊಬ್ಬ ಹಿರಿಯ ಮಾಜಿ ಆಟಗಾರ ಲಕ್ಷ್ಮಣ್ ಅವರು ಸಹ ಧ್ವನಿಗೂಡಿಸಿದ್ದಾರೆ. [ಟೆಸ್ಟ್ ಶ್ರೇಷ್ಠ ಪ್ರದರ್ಶನ: ಲಕ್ಷ್ಮಣ್ ಇನ್ನಿಂಗ್ಸ್ ಗೆ ಸ್ಥಾನ]

ಒಟ್ಟಿನಲ್ಲಿ ಐಪಿಎಲ್ ಆರಂಭಕ್ಕೂ ಮುನ್ನ ವಿಘ್ನ ಎದುರಾಗಿದಂತಾಗಿದೆ. ಬಾಂಬೆ ಹೈಕೋರ್ಟ್, ಬಿಸಿಸಿಐ, ಮುಂಬೈ ಬಿಜೆಪಿ ಘಟಕ, ಹಾಗೂ ಲಕ್ಷ್ಮಣ್ ಇವರುಗಳ ಮಧ್ಯೆ ಐಪಿಎಲ್ ಮಹಾರಾಷ್ಟ್ರದಲ್ಲಿ ನಡೆಸಬೇಕು ಕೆಲವರು ಹೇಳಿದರೆ, ಮತ್ತೆ ಕೆಲವರು ನೀರಿನ ಸಮಸ್ಯೆಯಿಂದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಎಂಬ ವಾದ-ವಿವಾದಗಳ ನಡುವೆ ಪಂದ್ಯಗಳು ನಡೆಸುತ್ತಾರೋ ಇಲ್ಲ ಬೇರೆಡೆಗೆ ಸ್ಥಳಾಂತರ ಮಾಡುತ್ತಾರೋ ಎಂಬುವುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ ಉದ್ಘಾಟನಾ ಪಂದ್ಯ ಮುಂಬೈನಲ್ಲೇ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Amid the furore over water being being used to maintain cricket pitches for IPL games in drought-hit Maharashtra, Sunrisers Hyderabad mentor VVS Laxman today (April 7) said shifting matches is not a solution for what is now a national problem.
Please Wait while comments are loading...