ಐಪಿಎಲ್ 1ರಿಂದ 10ರಲ್ಲಿ ಆರೇಂಜ್ ಕ್ಯಾಪ್ ಪಡೆದ ಆಟಗಾರರಿವರು

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 21: ಜನಮನ ಸೂರೆಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯು ಇದೀಗ ತನ್ನ 10 ವಸಂತಕ್ಕೆ ಕಾಲಿಟ್ಟಿದೆ.

ಕಳೆದ 9 ಆವೃತ್ತಿಗಳಲ್ಲಿ ಆರು ತಂಡಗಳು ಈ ಲೀಗ್ ಅನ್ನು ಗೆದ್ದುಕೊಂಡಿವೆ. ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಆವೃತ್ತಿಯ ಲೀಗ್ ಅನ್ನು ಗೆದ್ದುಕೊಂಡಿತ್ತು.

ಆನಂತರ, ಡೆಕ್ಕನ್ ಚಾರ್ಜರ್ಸ್ ತಂಡ 2ನೇ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅದಾದ ನಂತರ, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ ಎರಡು ಬಾರಿ ಈ ಲೀಗ್ ಗೆದ್ದಿವೆ.

ಪ್ರತಿ ಐಪಿಎಲ್ ಪಂದ್ಯಾವಳಿಗಳಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳಿಗೆ ಟೂರ್ನಿಯ ಕೊನೆಯಲ್ಲಿ ಆರೇಂಜ್ ಕ್ಯಾಪ್ ನೀಡಿ ಗೌರವಿಸಲಾಗುತ್ತದೆ.

ಹಾಗಾದರೆ, ಕಳೆದ ಒಂಭತ್ತೂ ಆವೃತ್ತಿಗಳಲ್ಲಿ ಹೀಗೆ ಆರೇಜ್ ಕ್ಯಾಪ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿ ಇಲ್ಲಿದೆ. ಮೊದಲ ಆವೃತ್ತಿಯಲ್ಲಿ ಆರೇಂಜ್ ಕ್ಯಾಪ್ ಗೆದ್ದ ಶಾನ್ ಮಾರ್ಷ್ ನಿಂದ ಹಿಡಿದು, ಕಳೆದ ಆವೃತ್ತಿಯಲ್ಲಿ ಈ ಕ್ಯಾಪ್ ಗಳಿಸಿದ ವಿರಾಟ್ ಕೊಹ್ಲಿವರೆಗಿನ ಸಂಕ್ಷಿಪ್ತ ಮಾಹಿತಿ ಇಲ್ಲಿ ನಿಮಗಾಗಿ....

ಕಿಂಗ್ಸ್ ಇಲೆವೆನ್ ಪಂಜಾಬ್

ಕಿಂಗ್ಸ್ ಇಲೆವೆನ್ ಪಂಜಾಬ್

ಮೊದಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಶಾನ್ ಮಾರ್ಷ್ ಅವರು, ಆರೇಂಜ್ ಕ್ಯಾಪ್ ಪಡೆದಿದ್ದರು. ಆ ಆವೃತ್ತಿಯಲ್ಲಿ ಅವರು 11 ಪಂದ್ಯಗಳಿಂದ ಗಳಿಸಿದ್ದು 616 ರನ್ ದಾಖಲಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಪ್ರತಿಭೆ

ಚೆನ್ನೈ ಸೂಪರ್ ಕಿಂಗ್ಸ್ ಪ್ರತಿಭೆ

ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕತೆಗಳಲ್ಲೊಬ್ಬರಾದ ಮ್ಯಾಥ್ಯೂ ಹೇಡನ್, ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲೊಬ್ಬರು. ಐಪಿಎಲ್ - 2009ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ 12 ಪಂದ್ಯಗಳಿಂದ 572 ರನ್ ಕಲೆಹಾಕಿದ್ದ ಅವರು, ಆರೇಂಜ್ ಕ್ಯಾಪ್ ಗಳಿಸಿದ್ದರು.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಐಪಿಎಲ್ ನಲ್ಲಿ ಆರೇಂಜ್ ಕ್ಯಾಪ್ ಪಡೆದ ಮೊಟ್ಟ ಮೊದಲ ಭಾರತೀಯ ಆಟಗಾರ. 2010ನೇ ಆವೃತ್ತಿಯಲ್ಲಿ ಅವರು, ಮುಂಬೈ ಇಂಡಿಯನ್ಸ್ ಪರವಾಗಿ, 15 ಪಂದ್ಯಗಳಿಂದ 618 ರನ್ ಗಳಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸಿಡಿಲಬ್ಬರದ ಬ್ಯಾಟ್ಸ್ ಮನ್ ಎಂದೇ ಖ್ಯಾತರಾಗಿರುವ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಅವರು, 2011ರ ಆವೃತ್ತಿಯಲ್ಲಿ ಆರೇಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದರು. ಅದೇ ವರ್ಷ ಆರ್ ಸಿಬಿಗೆ ಸೇರ್ಪಡೆಗೊಂಡಿದ್ದ ಅವರು, ತನ್ನನ್ನು ಖರೀದಿಸಿದ್ದ ಆರ್ ಸಿಬಿ ತಂಡದ ವ್ಯವಸ್ಥಾಪಕ ಮಂಡಳಿಯ ನಿರ್ಧಾರಕ್ಕೆ ಈ ರೀತಿಯ ಸಮರ್ಥನೆ ಕೊಟ್ಟಿದ್ದರು. ಆ ಆವೃತ್ತಿಯಲ್ಲಿ ಅವರು, 15 ಪಂದ್ಯಗಳಿಂದ 608 ರನ್ ಕಲೆಹಾಕಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

2011ರಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದಿದ್ದ ಗೇಲ್, 2012ರಲ್ಲೂ ಅದೇ ಅಬ್ಬರ ಮುಂದುವರಿಸಿದರು. ಆ ವರ್ಷವೂ 15 ಪಂದ್ಯಗಳಿಂದ ಭರ್ಜರಿ 733 ರನ್ ಗಳಿಸಿದ್ದ ಗೇಲ್, ಮತ್ತೆ ಆರೇಂಜ್ ಕ್ಯಾಪ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಆಸ್ಟ್ರೇಲಿಯಾದ ಈ ಬ್ಯಾಟ್ಸ್ ಮನ್, ಆ ವರ್ಷ 17 ಪಂದ್ಯಗಳಿಂದ 733 ರನ್ ಪೇರಿಸಿ ಆರೇಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾದರು.

ಕೋಲ್ಕತಾ ನೈಟ್ ರೈಡರ್ಸ್

ಕೋಲ್ಕತಾ ನೈಟ್ ರೈಡರ್ಸ್

2014ರಲ್ಲಿ ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ ಆರೇಂಜ್ ಕ್ಯಾಪ್ ಗಳಿಸಿದರು. ಈ ಗೌರವ ಪಡೆದ ಮೊದಲ ಕನ್ನಡಿಗ ಆಟಗಾರ ಹೆಗ್ಗಳಿಕೆಯೂ ಅವರದ್ದಾಗಿದೆ. 2014ರ ಆವೃತ್ತಿಯಲ್ಲಿ ಅವರು ಆಡಿದ 16 ಪಂದ್ಯಗಳಿಂದ 660 ರನ್ ಗಳಿಸಿದ್ದರು.

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

2015ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಈ ದೈತ್ಯ ಆಟಗಾರ, ಸನ್ ರೈಸರ್ಸ್ ತಂಡದ ಪರವಾಗಿ ಒಟ್ಟು 14 ಪಂದ್ಯಗಳಿಂದ 562 ರನ್ ಗಳಿಸಿದರು.

ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು

ಕಳೆದ ಆವೃತ್ತಿಯಲ್ಲಿ ಮಿಂಚಿದ ವಿರಾಟ್ ಕೊಹ್ಲಿ, ನಾಲ್ಕು ಬಾರಿ ಶತಕ ಸಿಡಿಸಿದ್ದು ವಿಶೇಷ. ಕಳೆದ ಅವರು ಗಳಿಸಿದ 973 ರನ್, ಐಪಿಎಲ್ ಇತಿಹಾಸದಲ್ಲೇ ಬ್ಯಾಟ್ಸ್ ಮನ್ ಒಬ್ಬ ಗಳಿಸಿದ ಅತಿ ಹೆಚ್ಚು ರನ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Orange Cap which is given to the highest run scorer of a particular season has switched hands several times in the last 9 seasons.
Please Wait while comments are loading...