ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜೀನಾಮೆ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಮೇ 10 : ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಶಶಾಂಕ್ ಮನೋಹರ್ ಅವರು ಮೇ 10 ಮಧ್ಯಾಹ್ನ ಬಿಸಿಸಿಐ ಚೇರ್ಮನ್ ಹುದ್ದೆಯನ್ನು ತೊರೆದಿದ್ದಾರೆಂದು ತಿಳಿದು ಬಂದಿದೆ.

ಬಿಸಿಸಿಐ ಅಧ್ಯಕ್ಷದಿಂದ ತೊರೆದಿರುವ ಶಶಾಂಕ್ ಮನೋಹರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಬೋರ್ಡ್ (ಐಸಿಸಿ) ಚೇರ್ಮನ್ ಸ್ಥಾನವನ್ನು ತೊರೆಯುವ ಮಾಹಿತಿ ಲಭ್ಯವಾಗಿವೆ. 2015 ಅಕ್ಟೋಬರ್ ನಲ್ಲಿ ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು.

Shashank Manohar quits as BCCI president

ಇನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಜಯ್ ಶಿರ್ಕೆ, ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಜಿ.ಗಂಗರಾಜು ಹಾಗೂ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಈ ಮೂವರು ಪ್ರಬಲ ಪೈಪೋಟಿ ನಡೆಸಿದ್ದಾರೆ. ಇದರಿಂದ ತೀವ್ರ ಕುತೂಹಲ ಕೆರಳಿಸಿದ್ದು ಯಾರು ಅಧ್ಯಕ್ಷರಾಗಲಿದ್ದಾರೆಂದು ಕಾದು ನೋಡಬೇಕಿದೆ. ಇದೇ ಮೇ 14 ರಂದು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shashank Manohar today (May 10) resigned as the president of the Board of Control for Cricket in India (BCCI).
Please Wait while comments are loading...