ಸೋತ ಪಂದ್ಯದಲ್ಲೂ ದಾಖಲೆ ಬರೆದ ಕ್ಯಾಪ್ಟನ್ ವಾಟ್ಸನ್

Posted By:
Subscribe to Oneindia Kannada

ಸಿಡ್ನಿ, ಫೆ.01: ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವೀರೋಚಿತ ಆಟವಾಡಿದ ಶೇನ್ ವಾಟ್ಸನ್ ಅವರು ಕೊನೆಗೆ ಸೋಲಿನ ಕಹಿ ಉಂಡಿದ್ದಾರೆ. ಆದರೆ, 71 ಎಸೆತಗಳಲ್ಲಿ 124ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ವಾಟ್ಸನ್ ಅವರು ಭಾರತ ವಿರುದ್ಧ ಹೊಸ ದಾಖಲೆ ಬರೆದರು.

ಸಿಡ್ನಿ ಕ್ರಿಕೆಟ್ ಮೈದಾನ (ಎಸ್ ಸಿಜಿ) ದಲ್ಲಿ ಭಾನುವಾರ (ಜನವರಿ 31) ನಡೆದ ಮೂರನೇ ಪಂದ್ಯಕ್ಕೆ ಗಾಯಾಳುವಾಗಿದ್ದ ಅರೋನ್ ಫಿಂಚ್ ಅಲಭ್ಯರಾಗಿದ್ದರು. ನಾಯಕನ ಪಟ್ಟ ಧರಿಸಿದ ಶೇನ್ ವಾಟ್ಸನ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ಇನ್ನಿಂಗ್ಸ್ ಕೊನೆ ತನಕ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
3ನೇ ಟಿ 20 ಪಂದ್ಯದ ಸ್ಕೋರ್ ಕಾರ್ಡ್ | ಟಿ20 ಸರಣಿ ಪೂರ್ಣ ಫಲಿತಾಂಶ

56ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ನೀಡಿದ ಒಂದು ಜೀವದಾನದ ಲಾಭ ಪಡೆದ ವಾಟ್ಸನ್ ಟಿ20ಯಲ್ಲಿ ಮೊದಲ ಬಾರಿಗೆ ನೂರು ರನ್ ಗಡಿ ದಾಟಿದರು. ಇಲ್ಲಿ ತನಕ 81 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

Shane Watson breaks records with 71-ball 124* against India

34ವರ್ಷ ವಯಸ್ಸಿನ ಶೇನ್ ವಾಟ್ಸನ್ ಅವರು ತಮ್ಮ 124ರನ್ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದರು. 174.64ರನ್ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದ ವಾಟ್ಸನ್ ಅವರು ನಾಯಕನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತವನ್ನು ಸರಿಗಟ್ಟಿದರು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡುಪ್ಲೆಸಿಸ್ ಅವರು 119ರನ್ ಗಳಿಸಿ ದಾಖಲೆ ಬರೆದಿದ್ದರು.[ಗ್ಯಾಲರಿ: ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ಇಂಡಿಯನ್ಸ್]

ಇದರ ಜೊತೆಗೆ ಭಾರತದ ವಿರುದ್ದ ಶತಕ ಬಾರಿಸಿದ ಮೊದಲ ನಾಯಕ ಹಾಗೂ ಆಟಗಾರ ಎಂಬ ಸಾಧನೆಯನ್ನು ವಾಟ್ಸನ್ ಅವರು ಮಾಡಿದ್ದಾರೆ. ಈಗ ಭಾರತದ ವಿರುದ್ಧ ಎಲ್ಲಾ ಮಾದರಿಯಲ್ಲೂ ಶತಕ ಗಳಿಸಿದ ಮೊದಲ ಆಟಗಾರ ಎನಿಸಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಹರಾಜು ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಶೇನ್ ವಾಟ್ಸನ್ ಅವರು 2 ಕೋಟಿ ರು ಮೂಲಬೆಲೆ ಹೊಂದಿದ್ದಾರೆ. ವಾಟ್ಸನ್ ಅವರ ಈ ಶತಕ ಅವರಿಗೆ ಹೆಚ್ಚಿನ ಬೇಡಿಕೆ ಹುಟ್ಟಿಸಿದರೆ ಅಚ್ಚರಿಪಡಬೇಕಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shane Watson, Australia's stand-in captain blasted a 71-ball 124 not out to break records against India in the third and final Twenty20 International at the Sydney Cricket Ground (SCG) on Sunday.
Please Wait while comments are loading...