ಶೇನ್ ವಾರ್ನ್, ಪೀಟರ್ಸನ್ ಗೆ ದಂಡ ಹಾಕಿದ ಪೊಲೀಸ್

Posted By:
Subscribe to Oneindia Kannada

ಸಿಡ್ನಿ, ನವೆಂಬರ್ 22: ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟರ್, ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹಾಗೂ ಇಂಗ್ಲೆಂಡಿನ ಮಾಜಿ ಕ್ರಿಕೆಟರ್ ಕೆವಿ ಪೀಟರ್ಸನ್ ಅವರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ.

ಹೊಬಾರ್ಟ್ ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನದಂದು ಈ ಘಟನೆ ನಡೆದಿದೆ ಎಂದು ಶೇನ್ ವಾರ್ನ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ವಿಡಿಯೋ ಕ್ಲಿಪ್ಪಿಂಗ್ ಕೂಡಾ ಹಾಕಿದ್ದಾರೆ.

Shane Warne, Kevin Pietersen fined $300 each by police

ಆದರೆ, ಶೇನ್ ವಾರ್ನ್ ಹಾಗೂ ಕೆವಿನ್ ಪೀಟರ್ಸನ್ ಇಬ್ಬರು ಕಾರಿನಲ್ಲಿ ಚಲಿಸುವಾಗ ಸೀಟು ಬೆಲ್ಟ್ ಹಾಕಿಲ್ಲದ ಕಾರಣ ತಲಾ 300 ಡಾಲರ್ ದಂಡವನ್ನು ತಾಸ್ಮೇನಿಯಾದ ಪೊಲೀಸರು ಹಾಕಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ ಅವರು ವ್ಯಾನ್ ಚಾಲನೆ ಮಾಡುತ್ತಿದ್ದರು. ಅವರ ಜತೆಗೆ ಮುಂದಿನ ಸೀಟಿನಲ್ಲಿ ಮಾಜಿ ವಿಕೆಟ್ ಕೀಪರ್ ಇಯಾನ್ ಹೀಲಿ ಕುಳಿತಿದ್ದರು. ಇಬ್ಬರು ಸೀಟ್ ಬೆಲ್ಟ್ ಹಾಕಿದ್ದರು. ಜತೆಯಲ್ಲಿದ್ದ ಸಹ ಕಾಮೆಂಟೆಟರ್ ಗಳಾದ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಸ್ಲೇಟರ್, ಶೇನ್ ವಾರ್ನ್ ಹಾಗೂ ಕೆವಿನ್ ಪೀಟರ್ಸನ್ ಅವರು ಸೀಟ್ ಬೆಲ್ಟ್ ಹಾಕಿರಲಿಲ್ಲ.

(ಒನ್ಇಂಡಿಯಾ ಸುದ್ದಿ)

ಶೇನ್ ವಾರ್ನ್ ಹಾಕಿರುವ 4 ನಿಮಿಷದ ವಿಡಿಯೋಕ್ಕೆ ಇಲ್ಲಿ ತನಕ 126,935 ವೀಕ್ಷಣೆ ಸಿಕ್ಕಿದೆ. ಆದರೆ, ಕಾನೂನು ಉಲ್ಲಂಘಿಸಿದ್ದಕ್ಕಾಗಿ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Australia Test cricketer and legendary bowler Shane Warne and ex-England cricketer Kevin Pietersen were fined $300 each by Tasmanian police for not wearing seatbelts.
Please Wait while comments are loading...