ಟೀಂ ಇಂಡಿಯಾ ಕೋಚ್ ಆಗಲು ಸಿದ್ಧ ಎಂದ ಲೆಜೆಂಡ್ ಸ್ಪಿನ್ನರ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 02: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವ ಟಿ20ಯಿಂದ ಹೊರ ಬಿದ್ದ ಮೇಲೆ ಮುಂದಿನ ಸೆಪ್ಟೆಂಬರ್ ತನಕ ಯಾವುದೇ ಟೂರ್ನಿ ಆಡುತ್ತಿಲ್ಲ. ಅಲ್ಲಿ ತನಕ ಟೀಂ ಇಂಡಿಯಾಕ್ಕೆ ಕೋಚ್ ಹುಡುಕಾಟ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವಕಾಶವಿದೆ. ಈ ನಡುವೆ ಶೇನ್ ವಾರ್ನ್ ಕೂಡಾ ನಾನು ರೇಸ್ ನಲ್ಲಿದ್ದೀನಿ ಎಂದು ಹೇಳಿಕೊಂಡಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಜಿಂಬಾಬ್ವೆ ಅಥವಾ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಕ್ಕೆ ಹೊಸ ಕೋಚ್ ನೇಮಕ ಮಾಡಬೇಕಿದೆ. ಭಾರತದ ತಂಡದ ತರಬೇತುದಾರನಾಗಿ ಕಾರ್ಯವಹಿಸಲು ಕಾತರನಾಗಿದ್ದೆನೆ ಎಂದು ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಆಟವಾಗಿ ಉಳಿದಿಲ್ಲ. ಇದು ಒಂದು ಧರ್ಮವಾಗಿ ಮಾರ್ಪಟ್ಟಿದೆ. ಇಷ್ಟೊಂದು ಅಭಿಮಾನಿಗಳ ಪ್ರೋತ್ಸಾಹವಿರುವ ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಸಿದ್ಧನಾಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿಯ ಆಹ್ವಾನಕ್ಕಾಗಿ ಕಾಯುತ್ತಿದ್ದೇನೆ ಎಂದು ಶುಕ್ರವಾರ ಹೇಳಿದ್ದಾರೆ.

Shane Warne hints at coaching Team India

ಭಾರತ ತಂಡ ಸಮತೋಲನದಿಂದ ಕೂಡಿದೆ. ಪ್ರತಿಭಾವಂತರಿಂದ ಕೂಡಿರುವ ತಂಡದ ಕೋಚ್ ಆಗುವುದು ಹೆಮ್ಮೆ ಎನಿಸುತ್ತದೆ. ಒಂದು ವೇಳೆ ಕೋಚ್ ಆಗಲು ಆಹ್ವಾನ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಎಂದು ವಾರ್ನ್ ಹೇಳಿದ್ದಾರೆ. ಇದೇ ವೇಳೆ ವಿಂಡೀಸ್ ವಿರುದ್ಧ ಸೆಮೀಸ್​ನಲ್ಲಿ ಭಾರತ ಸೋತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
46ವರ್ಷ ವಯಸ್ಸಿನ ಶೇನ್ ವಾರ್ನ್ ಅವರು ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯ ಆಡಿ 708 ವಿಕೆಟ್ ಗಳಿಸಿದ್ದಾರೆ. 194 ಏಕದಿನ ಪಂದ್ಯದಲ್ಲಿ 293 ವಿಕೆಟ್ ಪಡೆದಿದ್ದಾರೆ. ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದ ಶೇನ್ ಇದೀಗ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜತೆ ಸೇರಿ ಆಲ್ ಸ್ಟಾರ್ ಲೀಗ್ ಹುಟ್ಟು ಹಾಕಿ ಅಮೆರಿಕದಲ್ಲಿ ಕ್ರಿಕೆಟ್ ರಂಗು ಮೂಡಿಸಿದ ಶೇನ್ ಅವರು ಕಾಮೆಂಟೆಟರ್ ಆಗಿ ಕೂಡಾ ಕಾರ್ಯನಿರ್ವಹಿಸುತ್ತಿದ್ದಾರೆ.
ಟಿ20 ವಿಶ್ವಕಪ್ ಬಳಿಕ ಭಾರತದ ಮೆಂಟರ್ ಆಗಿರುವ ರವಿಶಾಸ್ತ್ರಿ ಅವಧಿ ಮುಕ್ತಾಯವಾಗಲಿದ್ದು, ತಂಡಕ್ಕೆ ಪುರ್ಣಾವಧಿ ಕೋಚ್ ನೇಮಕ ಮಾಡಲು ಬಿಸಿಸಿಐ ಮುಂದಾಗಿದೆ. ಶೇನ್ ವಾರ್ನ್ ಅಲ್ಲದೆ ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಹೆಸರು ಕೂಡಾ ಕೋಚ್ ಸ್ಥಾನಕ್ಕೆ ಪರಿಗಣಿಸಲ್ಪಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia's legend cricketer Shane Warne hinted that he might be willing to put that aside to coach India.
Please Wait while comments are loading...