ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ಪತ್ರಿಕೆಯಲ್ಲಿ ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು

By Mahesh

ಢಾಕಾ, ಜೂ.30: ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಭಾರಿ ಮುಖಭಂಗ ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅಭಿಮಾನಿಗಳು ಸೋಲಿನ ಕಹಿಯನ್ನು ಇನ್ನೂ ಅರಗಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಬಾಂಗ್ಲಾದೇಶದ ಪ್ರತಿಕೆಯೊಂದು ಎಂಎಸ್ ಧೋನಿ ಹಾಗೂ ಟೀಂ ಇಂಡಿಯಾದ ಪ್ರಮುಖ ಆಟಗಾರರ ಅರ್ಧ ತಲೆ ಬೋಳಿಸಿದ ಚಿತ್ರವನ್ನು ಹಾಕಿ ವಿವಾದ ಎಬ್ಬಿಸಿದೆ.

ಬಾಂಗ್ಲಾ ವಿರುದ್ಧ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ 2-1 ಅಂತರದಲ್ಲಿ ಏಕದಿನ ಸರಣಿ ಕಳೆದುಕೊಂಡಿತ್ತು. ಬಾಂಗ್ಲಾದೇಶದ ವಿಕ್ರಮ, ಯುವ ಪ್ರತಿಭೆ ಮುಸ್ತಫಿಜುರ್ ರನ್ನು ಹೊಗಳುವ ಭರದಲ್ಲಿ 'ಪ್ರೊಥಮ್ ಅಲೋ' ಎಂಬ ಪತ್ರಿಕೆ ತನ್ನ ಸೋಮವಾರದ ಸಂಚಿಕೆಯಲ್ಲಿ ಈ ರೀತಿ ನಾಚಿಕೆಗೇಡಿನ ಕೆಲಸ ಮಾಡಿದೆ. [ಸಚಿನ್ ಭಕ್ತನ ಮೇಲೆ ಬಾಂಗ್ಲಾ 'ಟೈಗರ್ಸ್' ದಾಳಿ]

Bangladesh newspaper insults Indian players with half-shaved head

ಎಡಗೈ ವೇಗಿ 19 ವರ್ಷ ವಯಸ್ಸಿನ ಮುಸ್ತಫಿಜುರ್ ಅವರು 3 ಪಂದ್ಯಗಳಿಂದ 13 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನಲುಬು ಮುರಿದಿದ್ದರು. ಇದನ್ನು ಬಳಸಿಕೊಂಡು ಜಾಹೀರಾತು ವಿನ್ಯಾಸಗೊಳಿಸುವ ಪತ್ರಿಕೆ ಮುಸ್ತಫಿಜುರ್ ಕೈಲಿ ಕಟರ್ ನೀಡಿದೆ. ['ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಭಾರತ ಬಲಿ']

ಕೆಳಗಡೆ ಅರ್ಧ ತಲೆ ಬೋಳಿಸಿಕೊಂಡ ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಎಂಎಸ್ ಧೋನಿ, ಶಿಖರ್ ಧವನ್ ಹಾಗೂ ಆರ್ ಅಶ್ವಿನ್ ನಿಂತಿದ್ದಾರೆ. We've used it. You can use it too." ಎಂಬ ಬ್ಯಾನರ್ ಹಿಡಿದಿದ್ದಾರೆ.

মুস্তাফিজ কাটারফটোশপ ক্যারিকেচার: মাহফুজ রহমান

Posted by Prothom Alo on28 June 2015


ಫೇಸ್ ಬುಕ್ ನಲ್ಲಿ ಹಂಚಲಾಗಿರುವ ಈ ಜಾಹೀರಾತಿಗೆ ಸುಮಾರು 4,000ಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. 350 ಬಾರಿ ಹಂಚಿಕೆಯಾಗಿದ್ದು, 250 ಜನ ಬೆಂಗಾಳಿಯಲ್ಲಿ ಏನೋ ಕಾಮೆಂಟ್ ಮಾಡಿದ್ದಾರೆ. [ಬಾಂಗ್ಲಾದವರು ಹುಲಿಗಳಾದ್ರೆ, ನಾವೇನು ಇಲಿಗಳಾ?]

ಮಾಜಿ ಕ್ರಿಕೆಟರ್ ಅತುಲ್ ವಾಸನ್ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಹಾಗೂ ಆಟಗಾರರಿಗೂ ಅವಮಾನಕರ ಸಂಗತಿ. ಆಟದಲ್ಲಿ ಸೋಲು-ಗೆಲುವು ಇದ್ದದ್ದೇ. ಆಟಗಾರರನ್ನು ಈ ರೀತಿ ಅವಮಾನಿಸುವುದು ಎಷ್ಟು ಸರಿ ಎಂದು ಟೈಮ್ಸ್ ನೌ ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಸಿಸಿಐಯಾಗಲಿ, ಬಿಸಿಬಿಯಿಂದಾಗಲಿ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X