ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸಿದ ಆಸೀಸ್ ಮಾಧ್ಯಮಕ್ಕೆ ಛೀಮಾರಿ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15 : ಟೀಂ ಇಂಡಿಯಾದ 'ಉಗ್ರ ಪ್ರತಾಪಿ' ನಾಯಕ ವಿರಾಟ್ ಕೊಹ್ಲಿ ಅವರು ಬಾರ್ಡರ್ -ಗವಾಸ್ಕರ್ ಟ್ರೋಫಿಯಲ್ಲಿ ಮೈದಾನದಲ್ಲಿ ತೋರುತ್ತಿರುವ ನಡವಳಿಕೆ, ಹಾವಭಾವದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಡುವೆ ಆಸ್ಟ್ರೇಲಿಯಾದ ಮಾಧ್ಯಮಗಳಿಗೆ ಕೊಹ್ಲಿ ನಡವಳಿಕೆ ಸಹಿಸಲು ಆಗುತ್ತಿಲ್ಲ.

ಫಾಕ್ಸ್ ಸ್ಫೋರ್ಟ್ಸ್ ಆಸ್ಟ್ರೇಲಿಯಾ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಮತ ಸಮೀಕ್ಷೆ ನಡೆಸಿ ಪಾಂಡಾ, ನಾಯಿ, ಬೆಕ್ಕಿನ ಚಿತ್ರದ ಜತೆಗೆ ವಿರಾಟ್ ಕೊಹ್ಲಿ ಚಿತ್ರವನ್ನು ಹಾಕಿದ್ದಾರೆ.

'ಇತ್ತೀಚಿನ ವಿದ್ಯಮಾನಗಳ ನಂತರ ನಾವು ನಮ್ಮ ವಾರದ ವೆಟ್ಟಲ್ ಪ್ರಶಸ್ತಿಗೆ ಹಿಂತಿರುಗುತ್ತಿದ್ದೇವೆ. ಇಲ್ಲಿ ಹಾಕಿರುವ ನಾಲ್ಕು ಚಿತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿ' ಎಂದು ಹಲವು emoticons ನೀಡಲಾಗಿತ್ತು.

ಆದರೆ, ಈ ಫೇಸ್ ಬುಕ್ ಲೈವ್ ಪೋಲ್ ಆರಂಭವಾಗುತ್ತಿದ್ದಂತೆ, ಭಾರತೀಯ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.. ಕಾಮೆಂಟ್ ಮಾಡಿ ಫಾಕ್ಸ್ ಸ್ಫೋರ್ಟ್ ಗೆ ಛೀಮಾರಿ ಹಾಕಿದ್ದಾರೆ. ಮಾರ್ಚ್ 16ರಂದು ರಾಂಚಿಯಲ್ಲಿ ಆಸ್ಟ್ರೇಲಿಯಾದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.


ಮಾಧ್ಯಮ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್

ಮಾಧ್ಯಮ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಚಿತ್ರವನ್ನು ಫೇಸ್ ಬುಕ್ ಲೈವ್ ಗೆ ಬಳಸಿದ್ದ ಫಾಕ್ಸ್ ಮೀಡಿಯಾ ವಿರುದ್ಧ ಕೊಹ್ಲಿ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ.

ಫಾಕ್ಸ್ ಮೀಡಿಯಾ ಫೇಸ್ ಬುಕ್ ಪುಟ

ಫಾಕ್ಸ್ ಮೀಡಿಯಾ ಫೇಸ್ ಬುಕ್ ಪುಟ

ಫಾಕ್ಸ್ ಮೀಡಿಯಾ ಫೇಸ್ ಬುಕ್ ಪುಟದಲ್ಲಿ ಕೊಹ್ಲಿ ಪರ ಕಾಮೆಂಟ್ಸ್ ತುಂಬಿದ್ದು, ಇದು ಬಹಿರಂಗ ಜನಾಂಗೀಯ ನಿಂದನೆ ಎಂದು ಆರೋಪಿಸಲಾಗಿದೆ.

ಎಫ್ ಬಿ ಲೈವ್ ಪೋಲ್ ವ್ಯರ್ಥ

ಎಫ್ ಬಿ ಲೈವ್ ಪೋಲ್ ವ್ಯರ್ಥ

ಫಾಕ್ಸ್ ಮೀಡಿಯಾದ ಎಫ್ ಬಿ ಲೈವ್ ಪೋಲ್ ವ್ಯರ್ಥ ಎಂದು ಅನೇಕರು ಜರೆದಿದ್ದಾರೆ.

ಫಾಕ್ಸ್ ಮೀಡಿಯಾಕ್ಕೆ ಟಾಂಗ್

ಫಾಕ್ಸ್ ಮೀಡಿಯಾಕ್ಕೆ ಟಾಂಗ್

ಫಾಕ್ಸ್ ಮೀಡಿಯಾಕ್ಕೆ ಟಾಂಗ್ ನೀಡಿರುವ ಅನೇಕ ಅಭಿಮಾನಿಗಳು, ಕೊಹ್ಲಿ ಅವರ ಜನಪ್ರಿಯತೆ ಬಗ್ಗೆ ಹಾಡಿ ಹೊಗಳಿದ್ದಾರೆ.

ಸ್ಮಿತ್ ಆಟ ನಮಗೂ ಇಷ್ಟ

ಸ್ಮಿತ್ ಆಟ ನಮಗೂ ಇಷ್ಟ

ಸ್ಮಿತ್, ವಾರ್ನರ್, ಸ್ಟಾರ್ಕ್ ಆಟವನ್ನು ಭಾರತೀಯರು ಮೆಚ್ಚುತ್ತಾರೆ. ಆದರೆ, ಈ ರೀತಿ ಹೀಯಾಳಿಸುವ ಮಟ್ಟಕ್ಕೆ ಹೋಗುವುದು ಸರಿಯಲ್ಲ ಎಂದು ಆಸೀಸ್ ಮಾಧ್ಯಮಕ್ಕೆ ಅನೇಕರು ಬುದ್ಧಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India skipper Virat Kohli's aggressive attitude against Australia in the ongoing Border-Gavaskar Trophy isn't going down well in the Australian media.
Please Wait while comments are loading...