ಭಾರತವನ್ನು ಹೊಗಳಿದ ಅಫ್ರಿದಿ ಮೇಲೆ ಮಿಯಾಂದಾದ್ ಗರಂ

By: ರಮೇಶ್ ಬಿ
Subscribe to Oneindia Kannada

ಕರಾಚಿ, ಮಾರ್ಚ್ 14: 'ಭಾರತದಲ್ಲಿ ಸಿಕ್ಕಷ್ಟು ಪ್ರೀತಿ, ವಿಶ್ವಾಸ ನಮ್ಮ ದೇಶ ಪಾಕಿಸ್ತಾನದಲ್ಲಿ ಸಿಕ್ಕಿಲ್ಲ' ಎಂದು ಪಾಕಿಸ್ತಾನ ತಂಡದ ನಾಯಕ ಶಾಹೀದ್ ಅಫ್ರಿದಿ ಇತ್ತೀಚಿಗೆ ಹೇಳಿಕೆ ನೀಡಿದರು. ಅಫ್ರಿದಿ ಅವರ ಹೇಳಿಕೆಗೆ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ನಾಯಕ ಆಫ್ರಿದಿ ನೀಡಿದ ಹೇಳಿಕೆ ಬಹಳ ಆಶ್ಚರ್ಯವನ್ನುಂಟು ಮಾಡಿದ್ದು, ಒಬ್ಬ ಆಟಗಾರ ತನ್ನ ದೇಶದ ಅಭಿಮಾನಿಗಳ ಮೇಲೆ ತೋರಿಸದ ಪ್ರೀತಿಯನ್ನು ಎದುರಾಳಿ ಅಭಿಮಾನಿಗಳ ಮೇಲೆ ತೋರಿಸಿರುವುದು ನಾಚಿಕೆಯಾಗಬೇಕೆಂದು ಮಾಜಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಜಾವೇದ್ ಮಿಯಾಂದಾದ್ ಅವರು ಪಾಕಿಸ್ತಾನ ಆಜ್ ವಾಹಿನಿಯ ಸಂದರ್ಶನದಲ್ಲಿ ಪಾಕ್ ಆಟಗಾರನ ಹೇಳಿಕೆಗೆ ಗರಂ ಆಗಿ ಮಾತನಾಡಿದ್ದಾರೆ. [ವಿಶ್ವ ಟ್ವೆಂಟಿ20 2016 ಟೂರ್ನಿಗೆ ಫುಲ್ ಗೈಡ್]

Miandad lashes out at Afridi for India love

ಭಾರತದಲ್ಲಿ ಕ್ರಿಕೆಟ್ ಆಡುವುದೆಂದರೆ ತುಂಬ ಇಷ್ಟವಾಗುತ್ತದೆ, ಇಲ್ಲಿ ಅಭಿಮಾನಿಗಳು ತೋರುವ ಪ್ರೀತಿ ವಿಶ್ವಾಸ ನಮ್ಮ ದೇಶದಲ್ಲಿ ಕಂಡಿಲ್ಲವೆಂದು ಪಾಕ್ ಕ್ರಿಕೆಟ್ ತಂಡದ ನಾಯಕ ಆಫ್ರಿದಿ ಭಾರತಕ್ಕೆ ಮತ್ತು ಭಾರತದ ಅಭಿಮಾನಿಗಳನ್ನು ಹೊಗಳಿದ್ದರು. ಅದು ಅವರಿಗೆ ಈಗ ಮುಳುವಾಗಿ ಪರಿಣಮಿಸಿದೆ.[ಸೆಹ್ವಾಗ್ ಆಯ್ಕೆಯ ಫೇವರಿಟ್ 4 ತಂಡ?]

'ನನ್ನ ಪತ್ನಿ ಭಾರತದವಳೇ ಭಾರತದಲ್ಲಿ ಆಡುವುದಕ್ಕೆ ನನಗೆ ಭಯವಿಲ್ಲ ಖುಷಿ ಆಗುತ್ತದೆ' ಎಂದು ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಶೋಯಬ್ ಮಲ್ಲಿಕ್ ಗೂ ಬಿಸಿ ತಟ್ಟಿದೆ.[ಪಾಕ್ ಕ್ರಿಕೆಟ್ ಆಟಗಾರ್ತಿಯರಿಗೆ ಇವರಂದ್ರೆ ಪಂಚಪ್ರಾಣ]

ಶೋಯಬ್ ಮಲ್ಲಿಕ್ ಮತ್ತು ಕ್ಯಾಪ್ಟನ್ ಅಫ್ರಿದಿ ಈ ಇಬ್ಬರು ಆಟಗಾರರ ಹೇಳಿಕೆಗೆ ಪಾಕ್ ಮಾಜಿ ಆಟಗಾರ ಹಾಗೂ ಮುಖ್ಯ ಕೋಚ್ ಮೋಹಿಸಿನ್ ಖಾನ್ ಆಶ್ಚರ್ಯಗೊಂಡು ಯಾವುದೇ ಹಿರಿಯ ಆಟಗಾರರು ಮಾಧ್ಯಮಗಳಿಗೆ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಹೇಳಿಕೆಗಳನ್ನು ನೀಡಬೇಕೆಂದು ಕೋಚ್ ಎಚ್ಚರಿಕೆ ನೀಡಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Shocked and hurt" by Shahid Afridi's comments that Pakistan's cricketers were loved more by Indians than the fans here, former captain Javed Miandad has said that players making such statements should be "ashamed" of themselves.
Please Wait while comments are loading...