ಪಾಕ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಶಾಹಿದ್ ಅಫ್ರಿದಿ ಗುಡ್ ಬೈ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಲಾಹೋರ್, ಏಪ್ರಿಲ್ 04 : ವಿಶ್ವ ಟಿ20ಯಲ್ಲಿ ಪಾಕಿಸ್ತಾನದ ಹೀನಾಯ ಪ್ರದರ್ಶನಕ್ಕೆ ನಾಯಕ ಶಾಹಿದ್ ಅಫ್ರಿದಿಗೆ ಕಾರಣ ಎಂದು ಹಲವು ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಅಫ್ರಿದಿ ಅವರು ಭಾನುವಾರ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾಮಾನ್ಯ ಆಟಗಾರನಂತೆ ತಂಡದಲ್ಲಿ ಆಡುವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ನಡೆದ 6ನೇ ಆವೃತ್ತಿಯ ವಿಶ್ವ ಟಿ20 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಕ್ ತಂಡ ಹೀನಾಯವಾಗಿ ಸೋತು ಸೆಮೀಸ್ ಹಂತವನ್ನು ತಲುಪದಯೇ ಟೂರ್ನಿಯಿಂದ ಹೊರ ಬಿದ್ದಿದ್ದರಿಂದ ನಾಯಕ ಅಫ್ರಿದಿ ಮೇಲೆ ಅಭಿಮಾನಿಗಳು ಹಾಗೂ ಪಾಕ್ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ನೈತಿಕ ಹೊಣೆ ಹೊತ್ತು ನಾಯಕತ್ವ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ. [ಭಾರತ ಪರ ಅಭಿಮಾನ ಹೇಳಿಕೆ, ಅಫ್ರಿದಿಗೆ ನೋಟಿಸ್]

Shahid Afridi steps down as Pakistan T20 captain, plans to play on

ನಾನು ಪಾಕ್ ಕ್ರಿಕೆಟ್ ತಂಡದ ನಾಯಕತ್ವದಿಂದ ಇಳಿಯುತ್ತದ್ದೇನೆಂದು ಈ ಮೂಲಕ ಜಗತ್ತಿನ ಎಲ್ಲಾ ನನ್ನ ಅಭಿಮಾನಿಗಳಿಗೆ ತಿಳಿಯ ಪಡಿಸುತ್ತೇನೆ ಎಂದು ಆಲ್ ರೌಂಡರ್ ಅಫ್ರಿದಿ ತಮ್ಮ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ತಮ್ಮ ಈ ನಿರ್ಧಾರವನ್ನು ತಿಳಿಸಿದ್ದಾರೆ.[ಅಫ್ರಿದಿ ಊಟದ ಬಿಲ್ ಕಟ್ಟಿದ್ದು ಯಾರು?]

ನನಗೆ ಇದುವರೆಗೆ ಏಕದಿನ, ಟೆಸ್ಟ್, ಟಿ20 ಈ ಮೂರು ಮಾದರಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲು ಅವಕಾಶವನ್ನು ಮಾಡಿಕೊಟ್ಟ ಪಾಕಿಸ್ತಾನಕ್ಕೆ ಹಾಗೂ ಪಾಕ್ ಕ್ರಿಕೆಟ್ ಚೇರ್ಮನ್ ಶಹರ್ಯರ್ ಖಾನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದ್ದಾರೆ.[ಕಿವೀಸ್ ವಿರುದ್ಧ ಸೋಲು: ನಿವೃತ್ತಿಗೆ ಅಫ್ರಿದಿ ನಿರ್ಧಾರ]

ಇನ್ನು ಮುಂದೆ ಪಾಕ್ ತಂಡದಲ್ಲಿ ಒಬ್ಬ ಆಟಗಾರನಾಗಿ ಮುಂದುವರೆಯಲು ಬಯಸುತ್ತೇನೆ ಆದ್ದರಿಂದ ನನ್ನ ಮುಂದಿನ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಅಭಿಮಾನಿಗಳು ನನಗೆ ತಮ್ಮ ಬೆಂಬಲ ನೀಡಬೇಕೆಂದು ಅಫ್ರಿದಿ ತಮ್ಮ ಅಭಿಮಾನಿಗಳ ಬೆಂಬಲವನ್ನು ಕೇಳಿಕೊಂಡರು.

ಮುಂಬರುವ ಇಂಗ್ಲೆಂಡ್ ವಿರುದ್ಧ 4 ಟೆಸ್ಟ್,5 ಏಕದಿನ ಹಾಗೂ 1 ಟಿ20 ಸರಣಿಗೆ ಪಾಕ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುವುದು ಮುಂದಿರುವ ಪ್ರಶ್ನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Shahid Afridi on Sunday(April 03) announced he is stepping down as the captain of the Pakistan T20 cricket team on his own will but intends to continue playing for the country.
Please Wait while comments are loading...