'ನಮ್ಮ ಬೆಂಬಲಕ್ಕೆ ಕಾಶ್ಮೀರಿಗಳು ಬಂದಿದ್ದಾರೆ' ಎಂದ ಅಫ್ರಿದಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮೊಹಾಲಿ, ಮಾರ್ಚ್ 23 : 'ಪಾಕಿಸ್ತಾನದಲ್ಲಿನ ಅಭಿಮಾನಿಗಳಿಗಿಂತ ಭಾರತದಲ್ಲೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ' ಎಂದು ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿದ್ದ ಪಾಕಿಸ್ತಾನದ ನಾಯಕ ಶಾಹೀದ್ ಅಫ್ರಿದಿ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಶಾಹಿದ್ ಅಫ್ರಿದಿ ಮತ್ತೊಂದು ದ್ವಂದ್ವ ಹೇಳಿಕೆಯನ್ನು ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಹಿಂದಿನ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಕಿಡಿಕಾರಿದ್ದರು.[ಕಿವೀಸ್ ವಿರುದ್ಧ ಸೋಲು: ನಿವೃತ್ತಿಗೆ ಅಫ್ರಿದಿ ನಿರ್ಧಾರ]

ಟಾಸ್ ಗೆ ಬಂದ ಅಫ್ರಿದಿ ಹೇಳಿದ್ದೇನು?: ಮಾರ್ಚ್ 22 ರಂದು ಮೊಹಾಲಿಯಲ್ಲಿ ಪಾಕ್ ಮತ್ತು ಕಿವೀಸ್ ತಂಡ ನಡುವಣ ಪಂದ್ಯದ ವೇಳೆ ಟಾಸ್ ಗೆಂದು ಮೈದಾನಕ್ಕೆ ಬಂದ ಅಫ್ರಿದಿಯನ್ನು ಕಂಡು ಪ್ರೇಕ್ಷಕರು ಜೋರಾಗಿ ಉದ್ಗರಿಸಿದರು.

ಅದನ್ನು ಕಂಡು ಅಲ್ಲಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಮೀಜ್ ರಾಜ ಅವರು ಇಲ್ಲಿ ನಿಮಗೆ ಬಹಳಷ್ಟು ಅಭಿಮಾನಿಗಳು ಇದ್ದಂತಿದೆ ಎಂದು ಅಫ್ರಿದಿ ಅವರಿಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಫ್ರಿದಿ ಹೌದು ಇವರೆಲ್ಲರು ಕಾಶ್ಮೀರಿಗಳು, ಪಾಕಿಸ್ತಾನ ತಂಡವನ್ನು ಬೆಂಬಲಿಸಲು ಬಂದಿದ್ದಾರೆಂದು ವಿವಾದಿತ ಹೇಳಿಕೆ ನೀಡಿದರು.

ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಕಾಶ್ಮೀರಕ್ಕಾಗಿ ಸುಮಾರು ವರ್ಷಗಳಿಂದ ಇಂದಿನ ವರೆಗೂ ಹಾವು ಮುಂಗಸಿಯಂತೆ ಕಾದಾಡುತ್ತಿರುವ ಬೆನ್ನಲ್ಲಿಯೇ ಕಾಶ್ಮೀರ ಜನರುಗಳು ಪಾಕಿಸ್ತಾನಕ್ಕೆ ಬೆಂಬಲ ನೀಡಲು ಬಂದಿದ್ದಾರೆ ಅಂತ ಅಫ್ರಿದಿ ಇಂಥ ಹೇಳಿಕೆ ನೀಡಿ ಭಾರತದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಹಿಂದೆ ಭಾರತ ಅಭಿಮಾನಿಗಳನ್ನು ಹೊಗಳಿದ್ದ ಅಫ್ರಿದಿಗೆ ಪಾಕ್ ಕ್ರಿಕೆಟ್ ಮಾಜಿ ಆಟಗಾರರಾದ ಜಾವೆದ್ ಮಿಯಂದಾದ್ ಮತ್ತು ಮೋಹಿಸಿನ್ ಖಾನ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even as the dust settles over his "we got more love in India" comment, Pakistan skipper Shahid Afridi today (March 22) raked up another controversy when he remarked that "a lot of people are here from Kashmir" before the start of their World T20 game against New Zealand at PCA Stadium.
Please Wait while comments are loading...