ಭಾರತ ಸೇನೆ ನೀಡಿದ ಏಟಿಗೆ ಪಾಕ್ ಕ್ರಿಕೆಟಿಗ ಅಫ್ರಿದಿ ಹೇಳಿದ್ದೇನು?

Written By: Ramesh
Subscribe to Oneindia Kannada

ನವದೆಹಲಿ, ಸೆ. 30 : ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಉಭಯ ದೇಶಗಳು ನೆರೆ ರಾಷ್ಟ್ರಗಳಾಗಿದ್ದು, ಎರಡೂ ರಾಷ್ಟ್ರಗಳು ಶಾಂತಿಯನ್ನು ಕಾಪಾಡಬೇಕು ಎಂದು ಟ್ವಿಟ್ಟರ್ ಮೂಲಕ ಅಫ್ರಿದಿ ಮನವಿ ಮಾಡಿಕೊಂಡಿದ್ದಾರೆ.

shahidafridi

ಪಾಕಿಸ್ತಾನ ಶಾಂತಿಯನ್ನು ಪ್ರೀತಿಸುವ ದೇಶ ಮತ್ತು ಇತರೆ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ. ಹಾಗಾಗಿ ಯುದ್ಧಕ್ಕೆ ಮುಂದಾಗಬೇಡಿ ಎಂದಿದ್ದಾರೆ. ಎಲ್ಲಾ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಪಾಕಿಸ್ತಾನ ಇಚ್ಛಿಸುತ್ತದೆ.

ಉಭಯ ದೇಶಗಳು ಕಾದಾಡುವುದರಿಂದ ಎರಡೂ ದೇಶದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಯುದ್ಧಕ್ಕೆ ಮುಂದಾಗಬೇಡಿ ಎಂದು ಪಾಕಿಸ್ತಾನ ಕ್ರಿಕೆಟಿಗ ಶಾಹೀದ್ ಅಫ್ರಿದಿ ಟ್ವಿಟ್ಟರ್ ಮುಖಾಂತರ ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Pakistan captain Shahid Afridi has said when two neighbours fight both homes are affected.
Please Wait while comments are loading...