ಟ್ವೀಟ್ ಮಾಡಿ ಚಿಯರ್ ಗರ್ಲ್ಸ್ ಕಣ್ಣೀರು ಒರೆಸಿದ ಶಾರುಖ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 26 : ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೆಕೆಆರ್ ಪರಾಭವಗೊಂಡಿದ್ದರಿಂದ ಚಿಯರ್ ಗರ್ಲ್ಸ್ ಹತಾಶೆಗೊಂಡು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಬಾಲಿವುಡ್ ನಟ ಶಾರೂಖ್ ಖಾನ್ ಟ್ವಿಟ್ಟರ್ ಮೂಲಕ ಚಿಯರ್ ಗರ್ಲ್ಸ್ ಗಳನ್ನು ಸಮಾಧಾನ ಪಡಿಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈಗಾಗಲೇ ಎರಡು ಬಾರಿ ಚಾಂಪಿಯನ್ ಆಗಿದೆ, ಆದರೆ, ಈ ಬಾರಿ ಹೈದರಾಬಾದ್ ತಂಡ ನೀಡಿದ 162 ರನ್'ಗಳ ಸಾಧಾರಣ ಗುರಿ ತಲುಪುವಲ್ಲಿ ಗೌತಮ್ ಗಂಭೀರ್ ಬಳಗ ವಿಫಲವಾಯಿತು.

ಇದು ಕೆಕೆಆರ್ ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿದೆ. ಸದಾ ನೃತ್ಯದ ಮೂಲಕ ತಮ್ಮ ತಂಡದ ಆಟಗಾರರನ್ನು ಹಾಗೂ ಪ್ರೇಕ್ಷಕರನ್ನು ಹುರಿದುಂಬಿಸುತ್ತಿದ್ದ ಕೆಕೆಆರ್ ಚಿಯರ್ ಗರ್ಲ್ಸ್ ಕೂಡ ಭಾವುಕರಾಗಿ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.

Shah Rukh Khan thanks KKR cheerleaders for their support

ಸೋಲಿನ ಬಗ್ಗೆ ಟ್ವಿಟರ್'ನಲ್ಲಿ ಪ್ರತಿಕ್ರಿಯಿಸಿರುವ ಕೆಕೆಆರ್ ಮಾಲೀಕ ಶಾರೂಖ್ ಖಾನ್ ನಮ್ಮ ತಂಡದ ಹುಡುಗರು ಚೆನ್ನಾಗಿ ಆಡಿದ್ದಾರೆ. ತಂಡವನ್ನು ಹುರಿದುಂಬಿಸಿ ಬೆಂಬಲಿಸಿದ ಚಿಯರ್ ಗರ್ಲ್ಸ್'ಗಳಿಗೆ ಧನ್ಯವಾದಗಳು. ಲವ್ ಯೂ ಗರ್ಲ್ಸ್' ಎಂದಿದ್ದಾರೆ.

ಮೇ 24 ರಂದು ದೆಹಲಿಯ ಫಿರೋಷಾ ಕೋಟ್ಲಾ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೆಕೆಆರ್ 22 ರನ್ ಅಂತರದಿಂದ ಸೋಲೊಪ್ಪಿಕೊಂಡಿತು. ಇದರಿಂದ ಮೂರನೇ ಬಾರಿ ಚಾಂಪಿಯನ್ ಆಗುವ ಕನಸು ಕಂಡಿದ್ದ ಕೆಕೆಆರ್ ಗೆ ನಿರಾಸೆಯಾಗಿದೆ.

ಕೆಕೆಆರ್ ವಿರುದ್ಧ ಜಯಗಳಿಸಿರುವ ಹೈದರಾಬಾದ್ ಕ್ವಾಲಿಫೈಯರ್ -2 ನಲ್ಲಿ ಮೇ 27 ದೆಹಲಿಯ ಫಿರೋಷಾ ಕೋಟ್ಲಾ ಸ್ಟೇಡಿಯಂನಲ್ಲಿ ಬಲಿಷ್ಠ ತಂಡ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳಲ್ಲಿ ಗೆದ್ದ ತಂಡ ಮೇ 29ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನದೆಯಲಿರುವ ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bollywood star Shah Rukh Khan took to Twitter to thank the the Kolkata Knight Riders’ cheerleaders for their support. Cheerleaders were seen crying after the team suffered the tournament ouster defeat
Please Wait while comments are loading...