ಕಿಂಗ್ ಖಾನ್ ಟಿ-20 ತಂಡದ ಹೆಸರು ಬದಲಾಯಿಸಿದ್ದೇಕೆ?

Subscribe to Oneindia Kannada

ನವದೆಹಲಿ, ಫೆಬ್ರವರಿ, 11: ಕಿಂಗ್ ಖಾನ್ ಶಾರುಕ್ ತಮ್ಮ ತಂಡದ ಹೆಸರನ್ನು ಬದಲಾವಣೆ ಮಾಡಿದ್ದಾರೆ. ನಾವು ಹೇಳ ಹೊರಟಿರುವುದು ಕೋಲ್ಕತ್‌ ನೈಟ್ ರೈಡರ್ಸ್ ಕತೆ ಅಲ್ಲ.

ಶಾರುಖ್ ಖಾನ್ ಸಹ ಮಾಲೀಕತ್ವದ ಟ್ರಿನಿಡಾಡ್ ಮತ್ತು ಟೊಬ್ಯಾಗೋ ಇನ್ನು ಮುಂದೆ ಟ್ರಿಂಬಾಗೋ ನೈಟ್ ರೈಡರ್ಸ್ ಹೆಸರಿನಲ್ಲಿ ಕಣಕ್ಕೆ ಇಳಿಯಲಿದೆ. ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹೊಸ ಹೆಸರಿನಿಂದ ತಂಡ ಆಡಲಿದೆ. ನಾವು ಕ್ರಿಕೆಟ್ ನನ್ನು ಪ್ರೀತಿಸುತ್ತೇವೆ. ಮೊದಲಿನ ಪ್ರೀತಿಯಿಂದಲೆ ನೀವು ನಮ್ಮ ತಂಡವನ್ನು ಸ್ವಾಗತಿಸುತ್ತಿರಿ ಎಂದು ನಂಬಿದ್ದೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ.[ಐಪಿಎಲ್ ನಂತರ ಸಿಪಿಎಲ್ ನಲ್ಲೂ ಕಿಂಗ್ ಖಾನ್ ತಂಡ]

Shah Rukh Khan's Trinidad & Tobago franchise is now 'Trinbago Knight Riders

2015 ರ ಆವೃತ್ತಿಯ ಕೆರೆಬಿನ್ ಪ್ರೀಮಿಯರ್ ಲೀಗ್(ಸಿಪಿಎಲ್) ನಲ್ಲಿ ಟ್ರಿನಿಡಾಡ್ ಮತ್ತು ಟೊಬ್ಯಾಗೋ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಬಾರ್ಬಡಸ್ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿತ್ತು.[ಶಾರುಖ್ ಖಾನ್ ಟೀಂಗೆ ಕೆರಿಬಿಯನ್ ಲೀಗ್ ಕಿರೀಟ]

ಕೋಲ್ಕತ್ತಾ ನೈಟ್ ರೈಡರ್ಸ್ ಬ್ರ್ಯಾಂಡ್ ನ್ನು ಮತ್ತಷ್ಟು ಜನಪ್ರಿಯ ಮಾಡಲು ಹೆಸರು ಬದಲಾವಣೆ ಮಾಡಲಾಗಿದೆ. ಕೆರೆಬಿಯನ್ ನಲ್ಲೂ ನಮ್ಮ ಹೆಸರನ್ನು ಶಾಶ್ವತ ಮಾಡುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಕೆಕೆಆರ್ ನ ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Trinidad & Tobago franchise, which is co-owned by Bollywood superstar Shah Rukh Khan, has been re-branded as Trinbago Knight Riders (TKR) from the previous name of Trinidad and Tobago Red Steel in the HERO Caribbean Premier League (CPL). "It is a great honour to become part of the rich cricketing tradition of Trinidad & Tobago.
Please Wait while comments are loading...