ಚಾಟಿ ಬೀಸಿದ ಮುಂಬೈ ಹೈಕೋರ್ಟ್: ಕ್ರಿಕೆಟ್ ಬೇರೆ ಕಡೆ ಇಟ್ಕಳಿ

Subscribe to Oneindia Kannada

ಮುಂಬೈ, ಏಪ್ರಿಲ್, 13: ಮುಂಬೈ ಹೈಕೋರ್ಟ್ ಕ್ರಿಕೆಟ್ ಮಂಡಳಿಗಳಿಗೆ ಬುಧವಾರ ಸರಿಯಾದ ಚಾಟಿ ಬೀಸಿದೆ. ಬರದ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಸ್ಥಳಾಂತರ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

13 ಐಪಿಎಲ್ ಪಂದ್ಯಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಿ ಎಂದು ತಿಳಿಸಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಹಾಗಾಗಿ ಈ ತೀರ್ಮಾನ ಅನಿವಾರ್ಯ ಎಂದಿರುವ ನ್ಯಾಯಾಲಯ ಏಪ್ರಿಲ್ 30ರವರೆಗಿನ ಪಂದ್ಯಗಳು ನಡೆಯಲು ಅನುವು ಮಾಡಿಕೊಟ್ಟಿದೆ.[ಕ್ರಿಕೆಟ್‌ಗಿಂತ ಜನರೇ ಮುಖ್ಯ ಎಂದ ಮುಂಬೈ ಹೈ ಕೋರ್ಟ್]

cricket

ಇದೇ ವೇಳೆ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸುವುದರಿಂದ ಸಮಸ್ಯೆ ಪರಿಹಾರವಾಗಲ್ಲ. ಮೈದಾನದ ಪಿಚ್ ಗೆ ಬಳಸುತ್ತಿದ್ದ ನೀರನ್ನು ಬರಪೀಡಿತ ಪ್ರದೇಶಗಳಿಗೆ ಒದಗಿಸಿದರೆ ಸ್ವಲ್ಪ ಮಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ನಾವು ಸಂಸ್ಕರಿಸಿದ ನೀರು ಬಳಕೆ ಮಾಡುತ್ತೇವೆ ಎಂದು ಹೇಳಿದ್ದ ಬಿಸಿಸಿಐ ಪಂದ್ಯಗಳ ಸ್ಥಳಾಂತರಕ್ಕೆ ಹಿಂದೇಟು ಹಾಕಿತ್ತು. ಆದರೆ ಇದೀಗ ನ್ಯಾಯಾಲಯ ಕಟ್ಟುನಿಟ್ಟನ ಆದೇಶ ನೀಡಿದೆ.[ರಾಜ್ಯದಲ್ಲಿ ಬರ, ಐಪಿಎಲ್ ಪಂದ್ಯಗಳನ್ನು ಶಿಫ್ಟ್ ಮಾಡಿ: ಬಿಜೆಪಿ]

ಪುಣೆ ಮತ್ತು ಮುಂಬೈನಲ್ಲಿ ಒಟ್ಟು 17 ಪಂದ್ಯಗಳು ನಡೆಯಬೇಕಾಗಿತ್ತು. 9 ಪಂದ್ಯಗಳು ಪುಣೆಯಲ್ಲಿ ಉಳಿದ 8 ಪಂದ್ಯಗಳು ಮುಂಬೈನಲ್ಲಿ ನಡೆಯಬೇಕಾಗಿತ್ತು.
ಮಹಾರಾಷ್ಟ್ರದ ಕ್ರಿಕೆಟ್ ಮೈದಾನಗಳ ನಿರ್ವಹಣೆಗೆ ಸುಮಾರು 60 ಲಕ್ಷ ಲೀಟರ್ ನೀರು ವ್ಯಯಿಸುತ್ತಿರುವುದನ್ನು ಪ್ರಶ್ನಿಸಿ ‘ಲೋಕಸತ್ತಾ' ಎಂಬ ಎನ್ ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಅರ್ಜಿ ಸಲ್ಲಿಕೆ ಮಾಡಿತ್ತು. ಇದನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಆದೇಶ ನೀಡಿದೆ.

ಇನ್ನೊಂದೆ ಪುಣೆ ಮತ್ತು ಮುಂಬೈ ತಂಡಗಗಳು ಬರ ನಿರ್ವಹಣೆ ಉದ್ದೇಶಕ್ಕೆ ತಲಾ 5 ಕೋಟಿ ರು. ನೆರವು ನೀಡುತ್ತೇವೆ ಎಂದು ಹೇಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a landmark judgement, the Bombay High Court on Wednesday asked the BCCI to shift 13 IPL matches scheduled after April 30 to venues outside Maharashtra. At a time when the state was reeling under severe drought conditions, the high court has allowed the board to conduct IPL matches till April 30 in the state.
Please Wait while comments are loading...