ಕೊಹ್ಲಿಯನ್ನು 'ಡ್ರಾಪ್' ಮಾಡದಂತೆ ತಡೆದಿದ್ದು ಯಾರು?

Posted By:
Subscribe to Oneindia Kannada

ಮೊಹಾಲಿ, ನವೆಂಬರ್ 29: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಅದ್ಭುತ ಲಯದಲ್ಲಿರಬಹುದು. ಆದರೆ, 2012ರಲ್ಲಿ ಅವರನ್ನು ತಂಡದಿಂದ ಕೈಬಿಡಲು ಆಯ್ಕೆದಾರರು ಬಯಸಿದ್ದರು. ಆ ಸಂದರ್ಭದಲ್ಲಿ ಇಬ್ಬರು ದಿಗ್ಗಜರು ಕೊಹ್ಲಿ ಪರ ನಿಲ್ಲಲಿದ್ದಾರೆ ಕೊಹ್ಲಿ ಈ ದಿನ ಫೀಲ್ಡ್ ನಲ್ಲಿರುತ್ತಿರಲಿಲ್ಲ ಎನ್ನಬಹುದು.

2011-12ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಕಳಪೆ ಆಟ ಪ್ರದರ್ಶಿಸಿದ್ದಾಗ ಆಯ್ಕೆದಾರರು ಕೊಹ್ಲಿಯನ್ನು ತಂಡದಿಂದ ಕೈಬಿಡಲು ನಿರ್ಧರಿಸಿದ್ದರು. ಆದರೆ, ನಾಯಕ ಧೋನಿ ಹಾಗೂ ನಾನು ಕೊಹ್ಲಿ ತಂಡದಲ್ಲಿರಲಿ ಎಂದು ಪಟ್ಟು ಹಿಡಿದೆವು ಎಂದು ವೀರೇಂದ್ರ ಸೆಹ್ವಾಗ್ ಅವರು ವೀಕ್ಷಕ ವಿವರಣೆ ಸಂದರ್ಭದಲ್ಲಿ ಹೇಳಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಹಿಂದಿ ವೀಕ್ಷಕ ವಿವರಣೆ ನೀಡುವ ಸಂದರ್ಭದಲ್ಲಿ ಈ ವಿಷಯವನ್ನು ಸೆಹ್ವಾಗ್ ಹೊರ ಹಾಕಿದ್ದಾರೆ.

MS Dhoni and I stopped selectors from dropping Virat Kohli, reveals Virender Sehwag


ಕೊಹ್ಲಿ ಅವರು 10.75 ಸರಾಸರಿಯಲ್ಲಿ ಮೆಲ್ಬೋರ್ನ್ (11, 0 ರನ್) ಹಾಗೂ ಸಿಡ್ನಿ ಟೆಸ್ಟ್ (23, 9 ರನ್) ರನ್ ಪೇರಿಸಿದ್ದರು. ತಂಡದಿಂದ ಹೊರ ಹಾಕಲು ಬಿಸಿಸಿಐ ನಿರ್ಧರಿಸಿತ್ತು. ಆದರೆ, ತಂಡದ ನಾಯಕನಾಗಿದ್ದ ಧೋನಿ ಹಾಗೂ ಉಪನಾಯಕನಾಗಿದ್ದ ನಾನು ಕೊಹ್ಲಿಗೆ ಇನ್ನೊಂದು ಅವಕಾಶ ನೀಡಲು ತೀರ್ವನಿಸಿದ್ದೆವು. '2012ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬದಲು ರೋಹಿತ್ ಗೆ ಅವಕಾಶ ನೀಡಲು ಆಯ್ಕೆಗಾರರು ತೀರ್ವನಿಸಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ.
ಪರ್ತ್ ಟೆಸ್ಟ್ ನಲ್ಲಿ ಆಯ್ಕೆ ಸಮರ್ಥಿಸಿಕೊಂಡ ಕೊಹ್ಲಿ 44 ಹಾಗೂ 75 ರನ್ ಸಿಡಿಸಿದರು. ಬಳಿಕ ಅಡಿಲೇಡ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಮೊದಲ ಶತಕ(112) ಗಳಿಸಿದ್ದು ಈಗ ಇತಿಹಾಸ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India opener Virender Sehwag has revealed that the selectors wanted to drop Virat Kohli and replace him with Rohit Sharma in the Test team.
Please Wait while comments are loading...