ಟ್ವೀಟ್ ಮಾಡಿ 6ತಿಂಗಳಲ್ಲಿ 30ಲಕ್ಷ ರು ಸಂಪಾದಿಸಿದರೆ ಸೆಹ್ವಾಗ್!

Posted By:
Subscribe to Oneindia Kannada

ಬೆಂಗಳೂರು, ಜನವರಿ 09: ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್, ಟ್ವಿಟ್ಟರ್ ನಲ್ಲಿ ಟ್ರಾಲ್ ಕಿಂಗ್ ಎನಿಸಿಕೊಂಡಿರುವ ವೀರೇಂದರ್ ಸೆಹ್ವಾಗ್ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಲಕ್ಷಾಂತರ ರುಪಾಯಿ ಗಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಸೆಹ್ವಾಗ್ ಅವರು ತಮ್ಮ ಹಾಸ್ಯಮಯ ಮೊನಚು ಟ್ವೀಟ್ ಗಳಿಂದ ಅಭಿಮಾನಿಗಳನ್ನು, ಸಾರ್ವಜನಿಕರನ್ನು ರಂಜಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ತಕ್ಕಂತೆ ಸೆಹ್ವಾಗ್ ಅವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಕೂಡ ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಈಗ ಅವರು ತಮ್ಮ ಟ್ವೀಟುಗಳಿಂದಲೂ ಸಾಕಷ್ಟು ಆದಾಯ ಗಳಿಸುತ್ತಿದ್ದಾರಂತೆ.

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂದಿರುವ ಸೆಹ್ವಾಗ್, ಕಳೆದ ಆರು ತಿಂಗಳುಗಳಿಂದ ಅವರು ತಮ್ಮ ಟ್ವೀಟ್ ಗಳ ಮೂಲಕ ಸುಮಾರು ರೂ.30 ಲಕ್ಷ ಸಂಪಾದಿಸಿದ್ದಾರೆ.

Sehwag made Rs 30 Lakhs from past Six Months by just Tweets

ನಾನು ಮಾಡಿರುವ ಟ್ವೀಟ್ ಗಳೆಲ್ಲವೂ ಡ್ರೆಸ್ಸಿಂಗ್ ರೂಮಿನಲ್ಲಿ ನಾವು ಮಾತನಾಡುವಾಗ ಬರುತ್ತಿದ್ದ ಹಾಸ್ಯದ ಚಟಾಕಿಗಳಾಗಿದ್ದು, ಅದನ್ನು ಈಗ ಟ್ವೀಟ್ ಮಾಡಿ ಎಲ್ಲರಿಗೂ ಹಂಚುತ್ತಿದ್ದೇನೆ ಎಂದಿದ್ದಾರೆ.ಸೆಹ್ವಾಗ್ ಅವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 8.18 ಲಕ್ಷ ದಾಟಿದ್ದು, 98ಮಂದಿಯನ್ನು ಫಾಲೋ ಮಾಡಿದ್ದಾರೆ. 8,119 ಟ್ವೀಟ್ ಗಳನ್ನು ಮಾಡಿದ್ದಾರೆ.

ಸೆಹ್ವಾಗ್ ಅವರ ಟ್ವೀಟ್ ಗಳಿಗೆ ಪ್ರಾಯೋಜಕತ್ವ ವಹಿಸಿಕೊಂಡ ಕಂಪನಿಗಳು ಸೆಹ್ವಾಗ್ ಅವರಿಗೆ ಗಣನೀಯ ಪ್ರಮಾಣದಲ್ಲಿ ಆದಾಯವನ್ನು ತಂದುಕೊಂಡಿದೆಯಂತೆ, ಸೆಹ್ವಾಗ್ ಯುಟ್ಯೂಬ್ ನಲ್ಲಿ 'ವೀರು ಕೆ ಫಂಡೆ' ಎಂಬ ವೆಬ್ ಸರಣಿಯನ್ನು ಆರಂಭಿಸಿದ್ದು, ಅದರಲ್ಲಿ ಅತ್ತೆಯನ್ನು ನಿಭಾಯಿಸುವ ಬಗೆ, ಆದಾಯ ತೆರಿಗೆ ಉಳಿಸುವ ವಿಧಾನ, ವಯಸ್ಕರಾದ ಮೇಲೆ ಇಂಗ್ಲಿಷ್ ಕಲಿಯುವ ಪರಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದರ ಸ್ಯಾಂಪಲ್ ಇಲ್ಲಿದೆ ನೋಡಿ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Indian cricketer Virender Sehwag, who was one of the most entertaining batsmen of his generation, has ensured that there is no dearth of entertainment for his fans, even after he has retired from the game.
Please Wait while comments are loading...