ರವೀಂದ್ರ ಜಡೇಜ ಅವರ ಮದುವೆ ಇನ್ನಿಂಗ್ಸ್ ಇನ್ನೇನು ಶುರು

Posted By:
Subscribe to Oneindia Kannada

ನವದೆಹಲಿ, ಫೆ. 05: ಟೀಂ ಇಂಡಿಯಾ ಆಟಗಾರರ ಮದುವೆ ಪರ್ವ ಮುಂದುವರೆದಿದೆ. ತಂಡದ ಆಲ್​ರೌಂಡರ್ ರವೀಂದ್ರ ಜಡೇಜ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶುಕ್ರವಾರ ಜಡೇಜ ಅವರ ಮದುವೆ ನಿಶ್ಚಿತಾರ್ಥ ನಿಗದಿಯಾಗಿದೆ.

27ರ ಹರೆಯದ ಜಡೇಜ ಅವರು ತಮ್ಮ ಬಾಲ್ಯದ ಗೆಳತಿ ರೀವಾ ಸೋಲಂಕಿ ಜತೆಗೆ ರಾಜ್ ಕೋಟ್ ನ ತಮ್ಮ ಮನೆಯಲ್ಲಿ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಳ್ಳಲ್ಲಿದ್ದಾರೆ.[ಮದ್ವೆ ಡೇಟ್ ಫಿಕ್ಸ್ ಮಾಡಿಕೊಡಿ ಎಂದ ಯುವರಾಜ್]

ಹರ್ಭಜನ್ ಸಿಂಗ್ ಮದುವೆ ಸಂಭ್ರಮದ ನಂತರ ರೋಹಿತ್ ಶರ್ಮ ಅವರು ತಮ್ಮ ಗೆಳತಿಯನ್ನು ವರಿಸಿದ್ದರು. ಇತ್ತೀಚೆಗೆ ಜಾರ್ಖಂಡ್ ನ ವೇಗಿ ವರುಣ್ ಅರೋನ್ ಮದುವೆಯಾಗಿದೆ. ಯುವರಾಜ್ ಸಿಂಗ್ ಅವರು ಕೂಡಾ ಹಜೇಲ್ ಕೀಚ್ ಜೊತೆ ನವೆಂಬರ್ -ಡಿಸೆಂಬರ್ ನಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದಾರೆ. [ಲಕ್ಕಿ ಗರ್ಲ್ ಜೊತೆ ರವೀಂದ್ರ ಜಡೇಜ ನಿಶ್ಚಿತಾರ್ಥ]

ಫೆಬ್ರವರಿಯಲ್ಲಿ ಇರ್ಫಾನ್ ಪಠಾಣ್ ಗೆ ಶಾದಿ ಭಾಗ್ಯ ಸಿಗಲಿದೆ ಎಂಬ ಸುದ್ದಿಯೂ ಇದೆ.ಸುರೇಶ್ ರೈನಾ, ಮೋಹಿತ್ ಶರ್ಮ(ನಿಶ್ಚಿತಾರ್ಥ ಘೋಷಣೆ), ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜಡೇಜ ಅವರ ಮದುವೆ ಸುದ್ದಿಯನ್ನು ಅವರ ಸೋದರಿ ನೈನಾ ಅವರು ಬಹಿರಂಗ ಪಡಿಸಿದ್ದು, ಮದುವೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ರಾಜಕೋಟ್​ನವರಾದ ರೀನಾ ಸೋಲಂಕಿ

ರಾಜಕೋಟ್​ನವರಾದ ರೀನಾ ಸೋಲಂಕಿ

ರೀನಾ ಕೂಡ ಮೂಲತಃ ರಾಜಕೋಟ್​ನವ ರಾಗಿದ್ದು, ಅವರ ತಂದೆ ಹರ್ದೆವ್ ಸಿಂಗ್ ಸೋಲಂಕಿ ಗುತ್ತಿಗೆದಾರರಾಗಿದ್ದಾರೆ. ಆತ್ಮಿಯ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ರೀನಾ ಅವರು ಈಗ ದೆಹಲಿಯಲ್ಲಿ ನಾಗರಿಕ ಸೇವಾ ಪರೀಕ್ಷೆ(ಯುಪಿಎಸ್ ಸಿ)ಗೆ ತಯಾರಿ ನಡೆಸುತ್ತಿದ್ದಾರೆ.

ಟಿ 20 ವಿಶ್ವಕಪ್ ಗೆ ಆಯ್ಕೆಯಾಗುವ ನಿರೀಕ್ಷೆ

ಟಿ 20 ವಿಶ್ವಕಪ್ ಗೆ ಆಯ್ಕೆಯಾಗುವ ನಿರೀಕ್ಷೆ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಜಡೇಜ, ಮುಂಬರುವ ಟಿ 20 ವಿಶ್ವಕಪ್​ಗೂ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಏಷ್ಯಾಕಪ್ ಹಾಗೂ ಐಪಿಎಲ್ ನಲ್ಲಿ ರಾಜ್ ಕೋಟ್ ನಲ್ಲಿ ತಂಡದ ಪರ ಆಡಲಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ವರುಣ್ ಅರೋನ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ವರುಣ್ ಅರೋನ್

ಬಾಲ್ಯದ ಗೆಳತಿ ರಾಗಿಣಿ ಅವರ ಜೊತೆ ವರುಣ್ ಅರೋನ್ ಅವರು ಜಮ್ಶೇಡ್ ಪುರ್ ದಲ್ಲಿ ಸೋಮವಾರ ಮದುವೆ ನೋಂದಣಿ ಮಾಡಿಸಿದ್ದರು. ಗುರುವಾರ(ಫೆಬ್ರವರಿ 04)ದಂದು ಕ್ರೈಸ್ತ ಸಂಪ್ರದಾಯದ ಪ್ರಕಾರ ಇಬ್ಬರು ಮದುವೆಯಾಗಿದ್ದಾರೆ. [ವರದಿ ಇಲ್ಲಿದೆ]

ರೋಹಿತ್ ಶರ್ಮ ಅವರು ಗೆಳತಿ ರಿತಿಕಾ

ರೋಹಿತ್ ಶರ್ಮ ಅವರು ಗೆಳತಿ ರಿತಿಕಾ

ಬಹುಕಾಲದ ಗೆಳತಿಯರನ್ನು ಕ್ರಿಕೆಟರ್ ಗಳು ವರಿಸುವ ಪರಿಪಾಠ ಮುಂದುವರೆದಿದೆ. ರೋಹಿತ್ ಶರ್ಮ ಅವರು ಗೆಳತಿ ರಿತಿಕಾ ಸಜ್ಡಾ ಅವರನ್ನು ಮದುವೆಯಾಗಿದ್ದಾರೆ.[ಚಿತ್ರಗಳು: ರೋಹಿತ್ ಶರ್ಮ- ರಿತಿಕಾ ಮದುವೆ ಸಂಭ್ರಮ]

ಹರ್ಭಜನ್ ಸಿಂಗ್- ನಟಿ ಗೀತಾ ಬಾಸ್ರಾ

ಹರ್ಭಜನ್ ಸಿಂಗ್- ನಟಿ ಗೀತಾ ಬಾಸ್ರಾ

ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಗೀತಾ ಬಾಸ್ರಾ ಅವರ ಮದುವೆ ಸಂಭ್ರಮ ಸುಮಾರು ಐದು ದಿನಗಳ ಗಲಾಟೆ, ಗದ್ದಲ, ಹಾಡು, ಕುಣಿತ, ಸಾಂಪ್ರದಾಯಿಕ ಪಂಜಾಬಿ ಶೈಲಿಯಂತೆ ನೆರವೇರಿತು.ಅಕ್ಟೋಬರ್ 27ರಿಂದ ನವೆಂಬರ್ 1 ರ ತನಕ ದೇಶದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. [ಸೈಕಲೇರಿ ಬಂದ ಗೀತಾ -ಹರ್ಭಜನ್]

ಯುವರಾಜ್ ಸಿಂಗ್-ಹಜೇಲ್ ಕೀಚ್

ಯುವರಾಜ್ ಸಿಂಗ್-ಹಜೇಲ್ ಕೀಚ್

ಯುವರಾಜ್ ಸಿಂಗ್ ಅವರು ಕೂಡಾ ಹಜೇಲ್ ಕೀಚ್ ಜೊತೆ ನವೆಂಬರ್ -ಡಿಸೆಂಬರ್ ನಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Marriage season for Indian Cricket team is refusing to get over as another bachelor in the dressing room is going to get engaged on Friday.
Please Wait while comments are loading...