ಜಿಂಬಾಬ್ವೆ ಪೊಲೀಸರ ಬೈಕ್ ಏರಿದ ನಾಯಕ ಎಂಎಸ್ ಧೋನಿ

Posted By:
Subscribe to Oneindia Kannada

ಹರಾರೆ, ಜೂನ್ 14 : ಯುವ ಪ್ರತಿಭೆಗಳಿಂದ ಕೂಡಿದ ಟೀಂ ಇಂಡಿಯಾವನ್ನು ಸಮರ್ಥವಾಗಿ ಮುನ್ನಡೆಸಿ, ಜಿಂಬಾಬ್ವೆ ವಿರುದ್ಧ ಸರಣಿ ಜಯ ದಾಖಲಿಸಿರುವ ನಾಯಕ ಎಂಎಸ್ ಧೋನಿ ಸಕತ್ ಖುಷಿಯಲ್ಲಿದ್ದಾರೆ. ಧೋನಿಗೆ ಖುಷಿಯಾದರೆ ಬೈಕ್ ಹತ್ತಿ ಊರು ಸುತ್ತುವ ಅಭ್ಯಾಸ. ಹರಾರೆಯಲ್ಲಿ ಧೋನಿಗೆ ಓಡಿಸಲು ಸೊಗಸಾದ ಬೈಕೊಂದು ಕಂಡಿದೆ. ಅದು ಪೊಲೀಸರ ಬೈಕ್.

ಟೀಂ ಇಂಡಿಯಾದ ಜರ್ಸಿಯಲ್ಲಿದ್ದ ಧೋನಿ ಅವರು ಹರಾರೆ ಸ್ಫೋರ್ಟ್ ಕ್ಲಬ್ ಮೈದಾನದಲ್ಲಿದ್ದಾಗಲೆ ಪೊಲೀಸರ ಬೈಕ್ ಗುರುತಿಸಿದ್ದಾರೆ. ಪಂದ್ಯದಿಂದ ಬಿಡುವು ಸಿಕ್ಕಿದ ಬಳಿಕ ಪೊಲೀಸರ ಬಳಿ ಇದ್ದ ಕವಾಸಾಕಿ ಬೈಕ್ ಮೇಲೆ ಹತ್ತಿ ರೌಂಡ್ ಹೊಡೆದಿದ್ದಾರೆ.

See pic: When MS Dhoni rode a policeman's bike in Zimbabwe!

ಬೈಕ್ ಹತ್ತಿರುವ ಧೋನಿ ಹಾಗೂ ಜಿಂಬಾಬ್ವೆ ಪೊಲೀಸರ ಜೊತೆಗಿನ ಫೋಟೊವೊಂದನ್ನು ಧೋನಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಣಬಹುದು. ಈ ಸಮಯಕ್ಕೆ ಸುಮಾರು 49.4K ಲೈಕ್ಸ್, ಐನೂರಕ್ಕೂ ಅಧಿಕ ಕಾಮೆಂಟ್ ಗಳನ್ನು ಈ ಚಿತ್ರ ಪಡೆದುಕೊಂಡಿದೆ.

Classic bike at BFI,just fantastic

A photo posted by @mahi7781 on Oct 5, 2014 at 8:11am PDT

ಧೋನಿ ಅವರ ಬೈಕ್ ಕ್ರೇಜ್ ಬಗ್ಗೆ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಟಿವಿಎಸ್ ಸುಜುಕಿ, ಶೋಗನ್, ಬುಲೆಟ್, ಹಾರ್ಲೆ ಡೇವಿಡ್ಸನ್, ಕವಾಸಾಕಿ, ನಾರ್ಟನ್ ಹೀಗೆ ಅನೇಕ ಬಗೆಯ ಬೈಕ್ ಗಳನ್ನು ಹೊಂದಿದ್ದಾರೆ.

A photo posted by @mahi7781 on Jun 14, 2016 at 1:20am PDT

ಹೊಸ ಬೈಕ್ ಹಾಗೂ ವಿಶೇಷ ಬೈಕ್ ಎಲ್ಲಿದ್ದರೂ ಒಂದು ರೈಡ್ ಮಾಡಿ ತಮ್ಮ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India's limited overs' skipper MS Dhoni's passion for sports cars and bikes is not hidden from anyone.Dhoni on Tuesday (June 14) posted an image on his Instagram account in which he could be seen riding a Harare policeman's bike.
Please Wait while comments are loading...