ವಿರಾಟ್ ಕೊಹ್ಲಿ ಕೇಶ ವಿನ್ಯಾಸ ಬದಲಾಗಿದೆ ನೋಡಿದಿರಾ?

Written By:
Subscribe to Oneindia Kannada

ನವದೆಹಲಿ, ಜೂನ್ 27: ಮೈದಾನದಲ್ಲಿ ಬ್ಯಾಟಿಂಗ್, ಫೀಲ್ಡಿಂಗ್ ಮೈದಾನದ ಹೊರಗಡೆ ಗಾಯನ, ಡ್ಯಾನ್ಸ್, ಮಸ್ತಿ ಮಾಡುತ್ತ ಸದಾ ಹುರುಪಿನಲ್ಲೇ ಇರುವ ವಿರಾಟ್ ಕೊಹ್ಲಿ ಇದೀಗ ತಮ್ಮ ಕೇಶ ವಿನ್ಯಾಸವನ್ನು ವಿನೂತನ ರೀತಿಯಾಗಿ ಬದಲಾಯಿಸಿಕೊಂಡಿದ್ದಾರೆ.

ಕೊಹ್ಲಿ ತಮ್ಮ ಕೇಶ ವಿನ್ಯಾಸವನ್ನು ಟ್ವಿಟ್ಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸರ್ ಪ್ರೈಸ್ ಕೊಡುವ ಉದ್ದೇಶದಿಂದ ಕೇಶ ವಿನ್ಯಾಸ ಬದಲಾಯಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.[ವಿರಾಟ್ ಕೊಹ್ಲಿ ಹೊಸ ಅವತಾರ ಬಲ್ಲಿರೇನಯ್ಯಾ?]

virat

ಪುಟ್ಬಾಲ್ ಪಂದ್ಯಾವಳಿಗಾಗಿ ಹಾಡೊಂದನ್ನು ಸಿದ್ಧಮಾಡಿದ್ದ ಎ ಆರ್ ರೆಹಮಾನ್ ಅದನ್ನು ಕೊಹ್ಲಿ ಅವರಿಂದ ಗಾಯನ ಮಾಡಿಸಿದ್ದರು. ಫುಟ್ ಬಾಲ್ ಪಂದ್ಯಾವಳಿ ಆರಂಭಕ್ಕೂ ಮುನ್ನ ವಿರಾಟ್ ಹೆಜ್ಜೆ ಹಾಕಿರುವ ವಿಡಿಯೋವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದು ಸುದ್ದಿಯಾಗಿತ್ತು.['ಅನುಷ್ಕಾ' ಎಂದ ಪತ್ರಕರ್ತರ ಮೇಲೆ ಬ್ಯಾಟ್ ಬೀಸಿದ ಕೊಹ್ಲಿ]

ಭಾರತದ ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿ ನೃತ್ಯಗಾರನಾಗಿಯೂ ಬದಲಾಗಿದ್ದರು. ಭಾರತ ತಂಡಕ್ಕೆ ಅನಿಲ್ ಕುಂಬ್ಳೆ ಕೋಚ್ ಆಗಿ ನೇಮಕವಾಗಿದ್ದನ್ನು ಸ್ವಾಗತ ಮಾಡಿದ್ದ ಕೊಹ್ಲಿ ಜಿಕ್ಯೂ ಮ್ಯಾಗಜಿನ್ ಗೆ ಕವರ್ ಪೇಜ್ ಆಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian cricketer Virat Kohli who is known for making great style statements recently posted an image in which he is seen flaunting his new hairstyle. The middle-order batsman flaunted a crew-cut hairstyle after a long time.
Please Wait while comments are loading...