2ನೇ ಟೆಸ್ಟ್: 1ನೇ ದಿನ ಅಂತ್ಯಕ್ಕೆ ಭಾರತ 239/7 ರನ್

Written By: Ramesh
Subscribe to Oneindia Kannada

ಕೋಲ್ಕತ್ತ , ಸೆ. 30: ಈಡನ್ ಗಾರ್ಡನ್ ಕೋಲ್ಕತ್ತ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಿನದ ಅಂತ್ಯಕ್ಕ 7 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿದೆ.

ಇನ್ನು 4 ಓವರ್ ಗಳು ಬಾಕಿ ಇರುವಾಗಲೇ ಮಂದ ಬೆಳಕು ಕಾರಣ ಮೊದಲ ದಿನ ಅಂತ್ಯಗೊಂಡಿದೆ. ಶಿಖರ್ ದವನ್ (1) ಮುರುಳಿ ವಿಜಯ್ (9) ನಾಯಕ ವಿರಾಟ್ ಕೊಹ್ಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಚೇತೇಶ್ವರ ಪೂಜಾರ (87) ಮತ್ತು ಅಜಿಂಕ್ಯಾ ರಹಾನೆ (77) ಭಾರತ ಪರ ಗರಿಷ್ಠ ರನ್ ಮಾಡಿದ ಆಟಗಾರರು ಎನಿಸಿಕೊಂಡರು. ವೃದ್ಧಿಮಾನ ಸಹ (6) ಮತ್ತು ರವೀಂದ್ರ ಜಡೇಜ (೦) ಕ್ರೀಸ್ ನಲ್ಲಿದ್ದಾರೆ.

Pujara

ಎರಡನೇ ಟೆಸ್ಟ್ ಗೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಗಾಯಾಳು ಕೆ.ಎಲ್ ರಾಹುಲ್ ಬದಲಿಗೆ ಶಿಖರ್ ಧವನ್ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್ ಬದಲಿಗೆ ಭುವನೇಶ್ವರ್ ಕುಮಾರ್ ಅವರಿಗೆ ಸ್ಥಾನ ನೀಡಲಾಗಿದೆ.

India

ಕೆಎಲ್ ರಾಹುಲ್ ಬದಲಿಗೆ ಗೌತಮ್ ಗಂಭೀರ್ ಟೀಂ ಇಂಡಿಯಾದ ಇನ್ನಿಂಗ್ಸ್ ಆರಂಭಸಲಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ನಾಯಕ ವಿರಾಟ್ ಕೊಹ್ಲಿ ಶಿಖರ್ ಧವನ್ ಅವರನ್ನು 11ರ ಬಳಗದಲ್ಲಿ ಸೇರಿಸಿಕೊಂಡಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಕೇನ್ ವಿಲಿಯಮ್ಸನ್ ವರ ಬದಲಿಗೆ ರಾಸ್ ಟೇಲರ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಮಾರ್ಕ್ ಕ್ರೇಗ್ ಅವರ ಬದಲಿಗೆ ಜೀತನ್ ಪಟೇಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ತಂಡಗಳು ಇಂತಿವೆ:
ಭಾರತ: ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ರವಿಚಂದ್ರನ್ ಅಶ್ವಿನ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ರವೀಂದ್ರ ಜಡೇಜ, ಭವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.

ನ್ಯೂಜಿಲೆಂಡ್: ಟಾಮ್ ಲಾಥಮ್, ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, (ನಾಯಕ), ರಾಸ್ ಟೇಲರ್(ನಾಯಕ), ಲೂಕ್ ರಾಂಚಿ, ಮಿಚೆಲ್ ಸಾಂಟ್ನರ್, ವಾಟ್ಲಿಂಗ್(ವಿಕೆಟ್ ಕೀಪರ್), ಜೀತನ್ ಪಟೇಲ್, ಈಶ್ ಸೋಧಿ, ನೀಲ್ ವೇಗ್ನರ್, ಟ್ರೆಂಟ್ ಬೌಲ್ಟ್.
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India made 239 for the loss of seven wickets at stumps on Day 1 of the second Test match against New Zealand at the Eden Gardens here on Friday (Sep 30).
Please Wait while comments are loading...