250ನೇ ಟೆಸ್ಟ್ ಗೆದ್ದ ಭಾರತಕ್ಕೆ ಕಿವೀಸ್ ವಿರುದ್ಧ ಸರಣಿ

Written By: Ramesh
Subscribe to Oneindia Kannada

ಕೋಲ್ಕತ, ಅಕ್ಟೋಬರ್, 03: ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 178 ರನ್ ಗಳಿಂದ ಗೆದ್ದುಕೊಂಡಿದೆ. 3 ಪಂದ್ಯದ ಟೆಸ್ಟ್ ಸರಣಿಯಲ್ಲಿ ಭಾರತ 2-೦ ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 316 ರನ್‌ ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ, ನಾಲ್ಕನೇ ದಿನವಾದ ಸೋಮವಾರ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 263 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು. ನ್ಯೂಜಿಲೆಂಡ್ ಗೆ 376 ರನ್ ಗಳ ಗುರಿ ನೀಡಿತ್ತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಭಾರತ ಬೌಲರ್ ಎದುರು ರನ್ ಗಳಿಸಲು ತಿಣುಕಾಡಿ 81.1 ಓವರ್ ಗಳಲ್ಲಿ 197 ರನ್ ಗಳಿಗೆ ಸರ್ವಪತನ ಕಂಡಿದೆ. ಇದರಿಂದ ಭಾರತಕ್ಕೆ 178ರನ್ ಗಳ ಬೃಹತ್ ಗೆಲುವು ದಕ್ಕಿದೆ.[ಪಾಕಿಸ್ತಾನವನ್ನು ಕೆಳಕ್ಕೆ ದೂಡಿ, ಅಗ್ರಸ್ಥಾನಕ್ಕೇರಿದ ಭಾರತ]

India

ಸ್ಕೋರ್ ವಿವರ
* ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 316
* ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 263

* ನ್ಯೂಜಿಲ್ಯಾಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 204
* ನ್ಯೂಜಿಲ್ಯಾಂಡ್‌ ಎರಡನೇ ಇನ್ನಿಂಗ್ಸ್ ನಲ್ಲಿ 81.1 ಓವರ್ ಗಳಲ್ಲಿ 197 ರನ್ ಗೆ ಅಲೌಟ್.
* ಭಾರತಕ್ಕೆ 178 ರನ್ ಗಳ ಅಮೋಘ ಜಯ.
* ಪಂದ್ಯ ಪುರುಷ- ವೃದ್ದಿಮಾನ್ ಸಹಾ 1st ಇನ್ನಿಂಗ್ಸ್ 54* 2nd ಇನ್ನಿಂಗ್ಸ್ 58*
* 3ನೇ ಟೆಸ್ಟ್ ಅಕ್ಟೋಬರ್ 08 ರಿಂದ 12 ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಇಂದೋರ್.

ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 376 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ಗೆ ನೀಡಿದೆ.

ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ನಾಲ್ಕನೇ ದಿನವಾದ ಇಂದು ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 263 ರನ್‌ಗಳಿಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 316 ರನ್‌ ಗಳಿಗೆ ಸರ್ವಪತನ ಕಂಡಿತ್ತು.

India

ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ 204 ರನ್‌ಗೆ ಆಲೌಟಾಗಿತ್ತು. ನ್ಯೂಜಿಲ್ಯಾಂಡ್‌ ಗೆಲ್ಲಲು 376 ರನ್ ಗಳಿಸಬೇಕಿದೆ. 376 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 40 ರನ್ ಗಳಿಸಿ ಯಾವುದೆ ವಿಕೆಟ್ ಕಳೆದುಕೊಳ್ಳದೆ ಬ್ಯಾಟಿಂಗ್ ಮಾಡುತ್ತಿದೆ. ಇಂದು 4ನೇ ದಿನವಾಗಿದ್ದರಿಂದ ಕಿವೀಸ್ ಪಡೆಗೆ ಇನ್ನೊಂದು ದಿನ ದೊರೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India set a mammoth target of 376 runs for the New Zealand to win the penultimate Test match of the three-match series here on Monday (Oct 3).
Please Wait while comments are loading...