ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ನಿಂದ ಸ್ಕಾಟ್ಲೆಂಡ್ ಆಟಗಾರ ಕಿಕ್ಡ್ ಔಟ್

By Mahesh

ಲಂಡನ್, ಮಾ.11: ಸ್ಕಾಟ್ಲೆಂಡ್ ತಂಡದ ಪ್ರಮುಖ ಬೌಲರ್ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಮಜೀದ್ ಹಕ್ ಅವರನ್ನು ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದ ಹೊರಗಟ್ಟಲಾಗಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಜನಾಂಗೀಯ ದ್ವೇಷಪೂರಿತ ಸಂದೇಶ ಹಾಕಿದ ಆರೋಪವನ್ನು ಹೊತ್ತಿದ್ದಾರೆ.

ಹಕ್ ಅವರು ಈಗಾಗಲೇ ಆಸ್ಟ್ರೇಲಿಯಾ ತೊರೆದು ವಿಮಾನ ಏರಿದ್ದಾರೆ. ಐಸಿಸಿ ನಿಯಮ ಹಾಗೂ ತಂಡದ ಕಟ್ಟಳೆಗಳನ್ನು ಮೀರಿದ ತಪ್ಪಿಗೆ ಈ ಶಿಕ್ಷೆ ಸಿಕ್ಕಿದೆ. ಹೋಬಾರ್ಟ್ ನಲ್ಲಿ ಶ್ರೀಲಂಕಾ ವಿರುದ್ಧ ಸ್ಕಾಟ್ಲೆಂಡ್ 148 ರನ್ ಗಳ ಹೀನಾಯ ಸೋಲು ಕಂಡಿರುವುದು ಎಲ್ಲರಿಗೂ ಗೊತ್ತೇ ಇದೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಈ ಪಂದ್ಯದಲ್ಲಿ ಹಕ್ ಅವರನ್ನು ಆಡಿಸಿರಲಿಲ್ಲ. ಈ ಸಿಟ್ಟನ್ನು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ತೀರಿಸಿಕೊಂಡ ಹಕ್ ನಂತರ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ. "Always tougher when your in the minority!! #colour #race ಎಂದು ಟ್ವೀಟ್ ಮಾಡಿ ನಂತರ ತೆಗೆದು ಹಾಕಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

Scotland's Majid Haq sent home from World Cup over racial tweet

ಈ ರೀತಿ ಟ್ವೀಟ್ ನೋಡಿದ ಮೇಲೆ ಕ್ರಿಕೆಟ್ ಸ್ಕಾಟ್ಲೆಂಡ್ ಸೂಕ್ತ ಕ್ರಮ ಕೈಗೊಂಡಿದೆ. ಮಜೀದ್ ಹಕ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರು ಐಸಿಸಿ ವಿಶ್ವಕಪ್ ನಿಂದ ಹೊರ ನಡೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

32ವರ್ಷ ವಯಸ್ಸಿನ ಆಫ್ ಸ್ಪಿನ್ನರ್ ಮಜೀದ್ ಹಕ್ ಅವರು 60 ಏಕದಿನ ಕ್ರಿಕೆಟ್ ವಿಕೆಟ್ ಪಡೆದುಕೊಂಡಿದೆ.ಸುಮಾರು 209 ಪಂದ್ಯಗಳನ್ನಾಡಿರುವ ಹಕ್ ತಂಡದ ಹಿರಿಯ ಅನುಭವಿ ಆಟಗಾರರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೈಕಲ್ ಲೀಸ್ಕ್ ಅವರನ್ನು ಅಂತಿಮ XIನಲ್ಲಿ ಆಡಿಸಿ, ಹಕ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

Make sure everybody in your 'boat' is rowing and not drilling holes when you're not looking. Know your circle ಮತ್ತೆ ಟ್ವೀಟ್ ಕಾಣಿಸಿಕೊಂಡಿದೆ.

ವೆಸ್ಟ್ ಡಿಸಿಕ್ಟ್ರ್ ಕ್ರಿಕೆಟ್ ಯೂನಿಯನ್ ಅವರು ಈಗ ಹಕ್ ಅವರಿಗೆ ಮೂರು ವಾರಗಳ ನಿಷೇಧ ಹೇರಿದ್ದಾರೆ. ಅದರೆ, ಐಸಿಸಿ ಈ ಬಗ್ಗೆ ಹೆಚ್ಚಿನ ತನಿಖೆಗೆ ಮುಂದಾಗುವ ಸಾಧ್ಯತೆಯಿದ್ದು, ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆಯಿದೆ.

ಪಿಟಿಐ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X