ಗಂಗೂಲಿಗೆ ಕ್ರಿಕೆಟ್ ಲೋಕ ದಾದಾ ಅನ್ನೋದು ಸುಮ್ನೆ ಅಲ್ಲ..!

By: ಮಪ
Subscribe to Oneindia Kannada

ಮ್ಯಾಚ್ ಫಿಕ್ಸಿಂಗ್ ಭೂತ ಭಾರತ ತಂಡಕ್ಕೆ ಅಂಟಿಕೊಂಡಿದ್ದ ಕಾಲ. ಮೊಹಮದ್ ಅಜರುದ್ದೀನ್, ಅಜಯ್ ಜಡೇಜಾ ತಂಡದಿಂದ ಹೊರಬಿದ್ದ ಕಾಲ. ಸಚಿನ್ ತೆಂಡೂಲ್ಕರ್ ಅಷ್ಟೇನು ಉತ್ತಮ ಫಾರ್ಮ್ ನಲ್ಲಿ ಇರದ ಕಾಲ. ಇಂಥ ವೇಳೆ ಭಾರತ ಕ್ರಿಕೆಟ್ ತಂಡಕ್ಕೆ ನಾಯಕರಾದವರು ಸೌರವ್ ಗಂಗೂಲಿ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಭಾರತ ಕ್ರಿಕೆಟ್ ತಂಡಕ್ಕೆ ಜಯದ ರುಚಿ ಹಚ್ಚಿಸಿದ ಗಂಗೂಲಿ ತಂಡವನ್ನು ಕಟ್ಟಿದ ಬಗೆ ಯಾರಿಂದಲೂ ಸಾಧ್ಯವಿಲ್ಲ. ವಿರೇಂದ್ರ ಸೆಹ್ವಾಗ್ ಅದೆಷ್ಟು ಸಾರಿ ಸೊನ್ನೆ ಸುತ್ತಿದರೂ ಅವರನ್ನೇ ಆರಂಭಿಕರನ್ನಾಗಿ ಇಳಿಸಿ ಓಪನರ್ ಅಂದರೆ ಹೀಗರಬೇಕು ಎಂದು ಸಾಬೀತು ಮಾಡಿದ್ದು ಬಂಗಾಳದ ಹುಲಿ. ಸೆಹ್ವಾಗ್ ಗಾಗಿ ತನ್ನ ಜಾಗವನ್ನೇ ತ್ಯಜಿಸಿದ ನಾಯಕ.[ಶೇನ್ ವಾರ್ನ್ ಆಯ್ಕೆಯ ಶ್ರೇಷ್ಠ ತಂಡಕ್ಕೆ ಗಂಗೂಲಿ ಕ್ಯಾಪ್ಟನ್]

ಇಂಗ್ಲೆಂಡ್ ನಲ್ಲಿ ಶರ್ಟ್ ಬಿಚ್ಚಿ ಫ್ಲಿಂಟಾಪ್ ಗೆ ಅಷ್ಟೇ ಏಕೆ ಜಗತ್ತಿಗೆ ಭಾರತದ ಕ್ರಿಕೆಟ್ ಶಕ್ತಿ ಪರಿಚಯಿಸಿದವರು. ಎಲ್ಲೋ ಇದ್ದ ತಂಡವನ್ನು 2003 ರ ಏಕದಿನ ವಿಶ್ವ ಕಪ್ ಫೈನಲ್ ಗೆ ತಲುಪಿಸಿದ ಪರಿ ಇನ್ನು ಕಣ್ಣಿಗೆ ಕಟ್ಟಿದೆ.[ರಾಷ್ಟ್ರಗೀತೆ ಹಾಡಲು ಬಿಗ್ ಬಿ ಅವರು ಬಿಡಿಗಾಸು ಪಡೆದಿಲ್ಲ!]

ಜಹೀರ್ ಖಾನ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್ ರಂಥ ಆಟಗಾರರು ಫಾರ್ಮ್ ಔಟ್ ಆದಾಗ ಅವರನ್ನು ಸಂತೈಸಿ ಮತ್ತೆ ಹಳೆಯ ಲಯಕ್ಕೆ ಮರಳುವಂತೆ ಮಾಡಿದ ಗಂಗೂಲಿಗೆ ಒಂದು ಸೆಲ್ಯೂಟ್.[ಕೊಹ್ಲಿ 'ವಿರಾಟ್' ಪ್ರದರ್ಶನ, ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್]


ಆಸೀಸ್ ಗೆ ನೀಡಿದ ಆಘಾತ ಮರೆಯಲು ಸಾಧ್ಯವೇ?

ಆಸೀಸ್ ಗೆ ನೀಡಿದ ಆಘಾತ ಮರೆಯಲು ಸಾಧ್ಯವೇ?

ಭಾರತೀಯರನ್ನು ಆಡಿಕೊಳ್ಳುತ್ತಿದ್ದ ಆಸ್ಟ್ರೇಲಿಯಾ ದಂಥ ತಂಡಕ್ಕೆ ಕೋಲ್ಕತಾ ದಲ್ಲಿ ನೀಡಿದ ಹೊಡೆತ ಮರೆಯಲು ಸಾಧ್ಯವೇ? ಗಂಗೂಲಿ ತವರು ಕೋಲ್ಕತಾದಲಲ್ಲೇ ನಡೆದ ಟೆಸ್ಟ್ ಪಂದದ್ಯ, ವಿವಿಎಸ್ ಲಕ್ಷಣ್ ಮತ್ತು ರಾಹುಲ್ ದ್ರಾವಿಡ್ ಜತೆಯಾಟದ ಇತಿಹಾಸ ಕ್ರಿಕೆಟ್ ಲೋಕ ಕಂಡ ಅಚ್ಚರಿಗಳಲ್ಲಿ ಒಂದು.

ಆಲ್ ರೌಂಡರ್ ಕನಸು

ಆಲ್ ರೌಂಡರ್ ಕನಸು

ಏಳನೇ ಆಟಗಾರ ಆಲ್ ರೌಂಡರ್ ಬೇಕು ಎಂಬ ಕಾರಣಕ್ಕೆ ಅದೆಷ್ಟು ಪ್ರತಿಭೆಗಳಿಗೆ ಅವಕಾಶ ನೀಡಿದ್ದರೊ? ಇರ್ಫಾನ್ ಪಠಾಣ್, ಬದಾನಿಯಂತವರಿಗೆ ಬೆನ್ನೆಲುಬಾಗಿ ನಿಂತ ದಾದಾ ಕನಸಿನ ಆಟಗಾರ ಕೊನೆಗೂ ಸಿಗಲೆ ಇಲ್ಲ! (ರವೀಂದ್ರ ಜಡೇಜಾ ಆ ಸ್ಥಾನ ತುಂಬಿಯಾರೆ? ಇನ್ನು ಸಾಬೀತಾಗಿಲ್ಲ.)

ಧೋನಿ ಉತ್ತಮ, ಗಂಗೂಲಿ ಅತ್ಯುತ್ತಮ

ಧೋನಿ ಉತ್ತಮ, ಗಂಗೂಲಿ ಅತ್ಯುತ್ತಮ

ಮಹೇಂದ್ರ ಸಿಂಗ್ ಧೋನಿ ಉತ್ತಮ ನಾಯಕ. ಆದರೆ ಸೌರವ್ ಗಂಗೂಲಿ ಅತ್ಯುತ್ತಮ ನಾಯಕ. ಲಯದಲ್ಲಿದ್ದ ತಂಡವನ್ನು, ಆಟಗಾರರನ್ನು ಮುನ್ನಡೆಸುವುದಕ್ಕೂ, ತಾಳ-ಲಯ ಎಲ್ಲ ಕಳೆದುಕೊಂಡ ತಂಡ ಮುನ್ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ. ಎರಡನೇ ಬಗೆಯದ್ದು ಕೈಯಲ್ಲಿ, ಖಾತೆಯಲ್ಲಿ ಹಣವಿಲ್ಲದೆ ಮನೆಯ ಯಜಮಾನಿಕೆಯಲ್ಲಿ ಸಿಕ್ಕ ಹಾಗೆ!

ವಿಶ್ವ ಕಪ್ ಗೆದ್ದಿಲ್ಲ

ವಿಶ್ವ ಕಪ್ ಗೆದ್ದಿಲ್ಲ

ಗಂಗೂಲಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್ ಜಯ ಸಿಗದೇ ಇರಬಹುದು. ಆದರೆ ಇಡೀ ವಿಶ್ವಕ್ಕೆ ಭಾರತದ ಕ್ರಿಕೆಟ್ ಶಕ್ತಿ ಪರಿಚಯವಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಗೆಲುವಿನ ರುಚಿ ಹತ್ತಿಸಿದ ನಾಯಕ ಅಂದರೆ ಅದು ಸೌರವ್ ಗಂಗೂಲಿ.

ಗಂಗೂಲಿ ಬಗ್ಗೆ ಬರೆಯಲೇಬೇಕು

ಗಂಗೂಲಿ ಬಗ್ಗೆ ಬರೆಯಲೇಬೇಕು

ಈಗ್ಯಾಕೆ ಗಂಗೂಲಿ ಬಗ್ಗೆ ಬರೆಯುತ್ತಿದ್ದಾರೆ? ಎಂಬ ಪ್ರಶ್ನೆ ನಿಮಗೆ ಮೂಡಿದರೂ ಆಶ್ಚರ್ಯವಿಲ್ಲ. ಅದಕ್ಕೂ ಕಾರಣವಿದೆ. ಭಾರತ ಮತ್ತು ಪಾಕಿಸ್ತಾನದ ನಡುವಣ ಟಿ-20 ಪಂದ್ಯ ಮುಗಿದಿದೆ. ಭಾರತ ಮತ್ತೊಮ್ಮೆ ಜಯಶಾಲಿಯಾಗಿದೆ.. ಆದರೆ ಭಾರತದ ವಿಜಯಕ್ಕೆ ನಿಜವಾಗಿ ಕಾರಣರಾದವರು ಗಂಗೂಲಿ.

 ತೊಪ್ಪೆಯಾಗಿದ್ದ ಮೈದಾನ

ತೊಪ್ಪೆಯಾಗಿದ್ದ ಮೈದಾನ

ಮಾರ್ಚ್ 19 ರಂದು ಕೋಲ್ಕತಾದಲ್ಲಿ ಒಂದೇ ಸಮನೆ ಸುರಿದ ಭಾರಿ ಮಳೆ ಪರಿಣಾಮ ಈಡನ್ ಗಾರ್ಡನ್ ಮೈದಾನ ತೊಯ್ದು ತೊಪ್ಪೆಯಾಗಿತ್ತು. ಕ್ರೀಡಾಂಗಣದ ಪೂರ್ತಿ ನೀರು ತುಂಬಿ ಕೊಂಡು ಪಂದ್ಯ ನಡೆಸಲು ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹವಾಮಾನ ಇಲಾಖೆಯ ಸೂಚನೆಯನ್ನು ಮನಗಂಡಿದ್ದ ಗಂಗೂಲಿ ಹೆಚ್ಚುವರಿ ಟಾರ್ಪಲ್ ಗಳನ್ನು ತರಿಸಿ ಇಟ್ಟುಕೊಂಡಿದ್ದರು. ನಿಗದಿತ ವೇಳೆಗೆ ಪಂದ್ಯ ಆರಂಭವಾಗಲು ಗಂಗೂಲಿ ಮುನ್ನೆಚ್ಚರಿಕೆ ಮೂಲ ಕಾರಣವಾಯಿತು.

 ಚಿಕ್ಕ ಮುನ್ನೆಚ್ಚರಿಕೆ ಮಾಡಿದ ಚಮತ್ಕಾರ

ಚಿಕ್ಕ ಮುನ್ನೆಚ್ಚರಿಕೆ ಮಾಡಿದ ಚಮತ್ಕಾರ

ಕೆಲವೊಮ್ಮೆ ತೆಗೆದುಕೊಳ್ಳುವ ಅತಿ ಚಿಕ್ಕ ಮುನ್ನಚ್ಚರಿಕೆ ಕ್ರಮಗಳು ಎಂಥ ಚಮತ್ಕಾರ ಮಾಡಿ ಬಿಡಬಲ್ಲವು ಎಂಬುದಕ್ಕೆ ಪಂದ್ಯ ನಡೆದಿದ್ದೆ ಸಾಕ್ಷಿ. ಬಂಗಾಳ ಕ್ರಿಕೆಟ್ ಸಂಸ್ಥೆಯ ಹೊಣೆ ಹೊತ್ತ ಗಂಗೂಲಿ ನಿಜ ನಾಯಕರಾಗಿ ಮತ್ತೆ ಕಾಣಿಸಿಕೊಂಡರು.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While India celebrated the victory of its cricket team over Pakistan in the T20 World Cup at the Eden Gardens on Saturday (March 19), the effort put in by CAB president and former India captain Sourav Ganguly to keep the ground dry despite a heavy downpour was lauded by a number of people.VVS Laxman, once Ganguly's colleague in the Indian cricket team, praised him as a cricket administrator. Cricket commentator Harsha Bhogle and cricketer Pragyan Ojha also praised Ganguly for his efforts.
Please Wait while comments are loading...