ಪಾಕ್ ಟಿ20 ಕ್ರಿಕೆಟ್ ತಂಡಕ್ಕೆ ಸರ್ಫ್ರಾಜ್ ಅಹ್ಮದ್ ನೂತನ ಕ್ಯಾಪ್ಟನ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಲಾಹೋರ್, ಏಪ್ರಿಲ್ 05: ಆಲ್ ರೌಂಡರ್ ಶಾಹಿದ್ ಅಫ್ರಿದಿ ರಾಜೀನಾಮೆಯಿಂದ ತೆರವಾಗಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ತಂಡದ ನಾಯಕತ್ವ ಸ್ಥಾನಕ್ಕೆ ಬಲಗೈ ಬ್ಯಾಟ್ಸ್ ಮನ್ ಸರ್ಫ್ರಾಜ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತಿಳಿಸಿದೆ.

ಭಾರತದಲ್ಲಿ ನಡೆದ ವಿಶ್ವ ಟಿ20 2016 ಟೂರ್ನಿಯಲ್ಲಿ ಪಾಕ್ ತಂಡ ಕಳಪೆ ಪ್ರದರ್ಶನದಿಂದ ಸೆಮೀಸ್ ಗೆ ತಲುಪದೆಯೇ ಟೂರ್ನಿಯಿಂದ ಹೊರ ಬಂದ ಕಾರಣ ಆಲ್ ರೌಂಡರ್ ಶಾಹಿದ್ ಅಫ್ರಿದಿ ತಮ್ಮ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಮುಖ್ಯ ಕೋಚ್ ವಖಾರ್ ಯೂನಿಸ್ ಕೂಡಾ ತಂಡವನ್ನು ತೊರೆದಿದ್ದರು.[ನಾಯಕತ್ವಕ್ಕೆ ಶಾಹಿದ್ ಅಫ್ರಿದಿ ಗುಡ್ ಬೈ]

Sarfraz Ahmed named Pakistan's T20I captain, replaces Shahid Afridi

ಆ ಸ್ಥಾನಕ್ಕೆ 28 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸರ್ಫ್ರಾಜ್ ಅಹ್ಮದ್ ಆಯ್ಕೆಗೊಂಡಿದ್ದು ಮುಂಬರುವ ಟೂರ್ನಿಗೆ ಪಾಕ್ ಟಿ-20 ತಂಡವನ್ನು ಸರ್ಫ್ರಾಜ್ ಮುನ್ನಡೆಸಲಿದ್ದಾರೆ ಎಂದು ಪಾಕ್ ಕ್ರಿಕೆಟ್ ಸಮಿತಿ ಮಾಧ್ಯಮಗಳಿಗೆ ತಿಳಿಸಿದೆ.[ಪಾಕಿಸ್ತಾನ ವಿರುದ್ಧ ಭಾರತ 11-0 ಪರಾಕ್ರಮ ಸಾಧನೆ]

ಕಳೆದ ವರ್ಷ ಪಾಕ್ ಏಕದಿನ ಕ್ರಿಕೆಟ್ ತಂಡದ ಉಪನಾಯಕರಾಗಿ ಆಯ್ಕೆಗೊಂಡಿದ್ದ ಸರ್ಫ್ರಾಜ್ ಅಹ್ಮದ್ ಇಲ್ಲಿ ವರೆಗೆ ಒಟ್ಟು 58 ಏಕದಿನ, 21 ಟಿ20, 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮುಂದಿನ ಟೂರ್ನಿಗೆ ಸರ್ಫ್ರಾಜ್ ನೇತೃತ್ವದ ತಂಡಕ್ಕೆ ಶುಭವಾಗಲಿ ಎಂದು ಪಾಕ್ ಕ್ರಿಕೆಟ್ ಚೇರ್ಮನ್ ಶಹರ್ಯರ್ ಖಾನ್ ಅವರು ನೂತನ ಕ್ಯಾಪ್ಟನ್ ಗೆ ಶುಭ ಹಾರೈಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Wicketkeeper-batsman Sarfraz Ahmed has been appointed as the new captain of Pakistan's Twenty20 International team, the Pakistan Cricket Board (PCB) announced today (April 5).
Please Wait while comments are loading...