ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತ್ರಿಕೋನ ಸರಣಿ ಗೆದ್ದ ಭಾರತ, ಸರ್ಫರಾಜ್ ಸ್ಟಾರ್

By Mahesh

ಕೋಲ್ಕತಾ, ನ. 30: ಇಲ್ಲಿನ ಜಾಧವಪುರ ವಿವಿ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರು ರಾಷ್ಟ್ರಗಳ 19 ವರ್ಷ ವಯೋಮಿತಿಯೊಳಗಿನ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಸರ್ಫರಾಜ್ ಖಾನ್ ಹಾಗೂ ಬೌಲರ್ ಗಳ ಅದ್ಭುತ ಪ್ರದರ್ಶನದಿಂದ ಬಾಂಗ್ಲಾ ವಿರುದ್ಧ ಗೆಲುವಿನ್ ನಗೆ ಬೀರಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದ ಟೀಂ ಇಂಡಿಯಾ ಜ್ಯೂನಿಯರ್ಸ್ ಪ್ರಶಸ್ತಿಗೆ ಮುತ್ತ್ತಿಟ್ಟಿದ್ದಾರೆ. ಗೆಲುವಿಗೆ 117 ರನ್‌ಗಳ ಸವಾಲನ್ನು ಪಡೆದ ಭಾರತ 13.3 ಓವರ್‌ಗಳಲ್ಲಿ 3 ವಿಕೆಟ್ ಕಳೆದು ಕೊಂಡು ಗೆಲುವು ಸಾಧಿಸಿತು.

ಸರ್ಫ್‌ರಾಜ್ ಖಾನ್ ಅಜೇಯ 59 ರನ್ (27ಎಸೆತ, 9x4, 3x6) ಮತ್ತು ರಿಕಿ ಭುಯ್ ಅಜೇಯ 20 ರನ್ (20ಎ, 4‌x4) ಗಳಿಸಿ ಗೆಲುವಿನ ದಡ ಮುಟ್ಟಿಸಿದರು. ಸರಣಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಆರಂಭಿಕ ಆಟಗಾರ ವಾಷಿಂಗ್ಟನ್ ಸುಂದರ್ 12 ರನ್ ಹಾಗೂ ವಿಕೆಟ್ ಕೀಪರ್ ಆರ್‌ಆರ್ ಪಂತ್ 26 ರನ್ ಸೇರಿಸಿ ಔಟಾದಾಗ ಆತಂಕ ಮೂಡಿತ್ತು. ಎಎನ್ ಖಾರೆ ಕೂಡಾ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.

Sarfaraz stars as India beat Bangladesh by 7 wickets; clinch U-19 tri-series title

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡಕ್ಕೆ ಭಾರತದ ಬೌಲರ್ಸ್ ಎಸೆತ ಮಾರಕವಾಗಿಬಿಟ್ತಿತು. ಭಾರತದ ಪರ ಎಂ.ಜೆ ಡಗಾರ್ 3/32, ಎಸ್.ಸಿ ಮಾವಿ 2/21 ಮತ್ತು ಲಾಮ್ರಾರ್ (2/11 , ಅವೇಶ್ ಖಾನ್ 1/18 ಮತ್ತು ಕೆ.ಕೆ. ಅಹ್ಮದ್ 1/11 ದಾಳಿಗೆ ಸಿಲುಕಿದ ಬಾಂಗ್ಲಾ ತಂಡ 36.5 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟಾಯಿತು.

ಬಾಂಗ್ಲಾ ಪರ ನಝಾಮುಲ್ ಹುಸೈನ್ ಶೇಖ್ 45 ರನ್, ಜೊಯ್‌ರಾಝ್ ಶೇಖ್ 28 ರನ್ ಮತ್ತು ಜಾಕಿರ್ ಅಲಿ ಔಟಾಗದೆ 24 ರನ್ ಗಳಿಸಿದರು. ಬಾಂಗ್ಲಾದ 4 ಮಂದಿ ಆಟಗಾರರು ಖಾತೆ ತೆರೆಯದೆ ನಿರ್ಗಮಿಸಿದ್ದರು.

ಸರಣಿಯಲ್ಲಿ ದೆಹಲಿಯ ಎಡಗೈ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರು 256 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿ ಸರಣಿ ಶ್ರೇಷ್ಠರಾದರು.

ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ ಅಂಡರ್ -19 ತಂಡ: 36.5 ಓವರ್‌ಗಳಲ್ಲಿ ಆಲೌಟ್ 116 ( ಹುಸೈನ್ ಶೇಖ್ 45,ಜೊಯ್‌ರಾಝ್ ಶೇಖ್ 28 , ಜಾಕಿರ್ ಅಲಿ ಔಟಾಗದೆ 24 ; ಡಗಾರ್ 3-32, ಎಸ್‌ಸಿ ಮಾವಿ 2-21,ಲಾಮ್ರಾರ್ 2-11).

ಭಾರತ ಅಂಡರ್ -19 ತಂಡ: 13.3 ಓವರ್‌ಗಳಲ್ಲಿ 117/3(ಸರ್ಫ್‌ರಾಝ್ ಖಾನ್ ಔಟಾಗದೆ 59 , ರಿಕಿ ಭುಯ್ ಔಟಾಗದೆ 20 ; ಸಯೀದ್ ಸರ್ಕಾರ್ 1-23)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X