ಸಂದೀಪ್ ಪಾಟೀಲ್ -ಟೀಂ ಇಂಡಿಯಾಕ್ಕೆ ಮತ್ತೆ ಕೋಚ್?

Posted By:
Subscribe to Oneindia Kannada

ಮುಂಬೈ, ಜೂನ್ 05: ಟೀಂ ಇಂಡಿಯಾ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟರ್ ಸಂದೀಪ್ ಪಾಟೀಲ್ ಅರ್ಜಿ ಹಾಕಿದ್ದಾರೆ. ಹಾಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಸಂದೀಪ್ ಪಾಟೀಲ್ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ಹಲವರ ಹುಬ್ಬೇರಿಸಿದೆ.[ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ಒಂದು ವೇಳೆ ಕೋಚ್ ಆಗಿ ಆಯ್ಕೆಯಾದರೆ ಆಯ್ಕೆ ಸಮಿತಿ ಸ್ಥಾನವನ್ನು ತೊರೆಯಬೇಕಾಗುತ್ತದೆ. ಇಲ್ಲವೇ, ಆಯ್ಕೆ ಸಮಿತಿ ಸ್ಥಾನದ ಅವಧಿ ಮುಗಿದ ನಂತರ ಕೋಚ್ ಆಗುವ ಸಾಧ್ಯತೆ ಕಂಡು ಬಂದಿದೆ.[ಕೋಚ್ ಸ್ಥಾನಕ್ಕೇರಿದ ಸಂಜಯ್ ಬಂಗಾರ್]

Sandeep Patil applies for Team India head coach's job

1996ರಲ್ಲಿ ಭಾರತ ತಂಡದ ಹಂಗಾಮಿ ಕೋಚ್ ಆಗಿ ಸಂದೀಪ್ ಪಾಟೀಲ್ ಕಾರ್ಯ ನಿರ್ವಹಿಸಿದ್ದರು. ಕೀನ್ಯಾ ತಂಡದ ಕೋಚ್ ಆಗಿ 2003ರ ವಿಶ್ವಕಪ್ ಸೆಮಿಫೈನಲ್​ಗೆ ಮುನ್ನಡೆಸಿದ್ದರು. ವೆಸ್ಟ್ ಇಂಡೀಸ್ ಪ್ರವಾಸದ ನಂತರ ಭಾರತ ತಂಡದ ಕೋಚ್ ಆಗಿ ಸಂದೀಪ್ ಅಯ್ಕೆಯಾಗುವ ಸಾಧ್ಯತೆ ಇದೆ.[ಕೊಹ್ಲಿ ನಾಯಕತ್ವದಲ್ಲಿ ಧೋನಿ ಆಡಿದರೆ ತಪ್ಪೇನಿಲ್ಲ: ಶಾಸ್ತ್ರಿ]

ಸಂದೀಪ್ ಪಾಟೀಲ್ ಅವರು 1980-86ರಲ್ಲಿ ಭಾರತ ಪರ 29 ಟೆಸ್ಟ್, 45 ಏಕದಿನ ಪಂದ್ಯ ಆಡಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ. 2012ರ ಸೆಪ್ಟೆಂಬರ್​ನಿಂದ ಆಯ್ಕೆ ಮಂಡಳಿ ಮುಖ್ಯಸ್ಥರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Just a few days after the BCCI invited applications for the vacant post of India senior men's team head coach through its website, chief selector Sandeep Patil has thrown his hat into the ring for the high-profile job.
Please Wait while comments are loading...