ವಾರ್ನ್ ಗೆ ತಿರುಗೇಟು ನೀಡಿದ ವಿಶ್ವ ಟಿ20 ಹೀರೋ ಸ್ಯಾಮುಯಲ್ಸ್!

Posted By:
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 04: ಟ್ವೆಂಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಹೀರೋ ಆಗಿ ಮಿಂಚುವ ಮರ್ಲಾನ್ ಸ್ಯಾಮುಯಲ್ಸ್ ಅವರು ಅವರು ತಮ್ಮ ಗೆಲುವಿನ ಆಟವನ್ನು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಗೆ ಅರ್ಪಿಸಿದ್ದಾರೆ. ಆದರೆ, ಇದು ಪ್ರೀತಿಯಿಂದ ಅರ್ಪಿಸಿದ್ದಲ್ಲ, ವಾರ್ನ್ ನೀಡಿದ್ದ ಹೇಳಿಕೆಗೆ ಸ್ಯಾಮುಯಲ್ಸ್ ತಿರುಗೇಟು ನೀಡಿದ್ದಾರೆ.

ಪಂದ್ಯದ ಸ್ಕೊರ್ ಕಾರ್ಡ್
| ಗ್ಯಾಲರಿ

2012ರಲ್ಲಿ ಶ್ರೀಲಂಕಾ ವಿರುದ್ಧದ ಫೈನಲ್ಸ್ ನಲ್ಲಿ ಮಿಂಚಿದ್ದ ವೆಸ್ಟ್ ಇಂಡೀಸ್ ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮರ್ಲಾನ್ ಸ್ಯಾಮುಯಲ್ಸ್ ಮತ್ತೊಮ್ಮೆ 2016ರ ವಿಶ್ವಕಪ್ ಫೈನಲಿನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವಿನ ರೂವಾರಿ ಎನಿಸಿದರು. [ನನಗೆ ಅತ್ಯಂತ ಖುಷಿಕೊಟ್ಟ ಪ್ರಶಸ್ತಿ ಇದಾಗಿದೆ: ಕೊಹ್ಲಿ]

Marlon Samuels' dig at Shane Warne

ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿ ಮಾತನಾಡಿದ ಸ್ಯಾಮುಯಲ್ಸ್, 'ನಾನು ಇವತ್ತು ಬೆಳಗ್ಗೆ ಎದ್ದಾಗಿನಿಂದ ನನ್ನ ತಲೆಯಲ್ಲಿ ಒಂದೇ ವಿಷಯ ಓಡುತ್ತಿತ್ತು. ಶೇನ್ ವಾರ್ನ್ ಅವರು ಸತತವಾಗಿ ಏನು ಹೇಳುತ್ತಿದ್ದರು. ಸಾಮರ್ಥ್ಯದ ಬಗ್ಗೆ ಏನು ಪ್ರಶ್ನೆ ಎತ್ತಿದ್ದರು ಎಂಬುದು ಪುನಃ ಪುನಃ ಕೇಳಿಸಿಕೊಳ್ಳುತ್ತಿದ್ದೆ. ಈಗ ಆ ಪ್ರಶ್ನೆಗೆ ನನ್ನ ಬ್ಯಾಟ್ ಮೂಲಕ ಉತ್ತರಿಸಿದ್ದೇನೆ' ಎಂದು ಹೇಳಿದ್ದಾರೆ.[ಫಲಿತಾಂಶವನ್ನೇ ಬದಲಿಸಿದ ಆ 4 'ದೈತ್ಯ' ಸಿಕ್ಸರ್‌ಗಳು]

ವಾರ್ನ್ ಜತೆ ಸ್ಯಾಮುಯಲ್ಸ್ ಕಿತ್ತಾಟ ಏಕೆ?: ಜನವರಿ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ನಾನು ಆಡಿದ್ದೆ. ಶೇನ್ ವಾರ್ನ್ ಗೆ ಯಾಕೋ ನನ್ನ ಕಂಡರೆ ಆಗುವುದಿಲ್ಲ. ಕಾರಣ ನನಗೆ ಗೊತ್ತಿಲ್ಲ. ನಾನಂತೂ ಎಂದೂ ಅವರಿಗೆ ಅಗೌರವ ಸಲ್ಲಿಸಿಲ್ಲ. ಯಾವಾಗಲೂ ಕಿಡಿಕಾರುತ್ತಿರುತ್ತಾರೆ. ನನ್ನ ಬ್ಯಾಟಿಂಗ್ ಬಗ್ಗೆ ಅವರು ಮಾತನಾಡುವುದು ನನಗೆ ಸಹಿಸಲು ಆಗುತ್ತಿರಲಿಲ್ಲ. ಆದರೆ, ಪದೇ ಪದೇ ಮೈಕ್ ಹಿಡಿದು ನನ್ನ ತೇಜೋವಧೆ ಮಾಡುತ್ತಿದ್ದರು ಎಂದು ವಾರ್ನ್ ಬಗ್ಗೆ ಸ್ಯಾಮುಯಲ್ ಹೇಳಿದ್ದಾರೆ.[ಕೋಚ್ ಆಗಲು ಸಿದ್ಧ ಎಂದ ಲೆಜೆಂಡ್ ಸ್ಪಿನ್ನರ್]

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
ಇಂಗ್ಲೆಂಡಿಗೆ ಆಘಾತ, ಬ್ರಥ್ ವೈಟ್, ಸ್ಯಾಮುಯಲ್ಸ್ ಕುಣಿದಾಟ

ಇಂಗ್ಲೆಂಡಿಗೆ ಆಘಾತ, ಬ್ರಥ್ ವೈಟ್, ಸ್ಯಾಮುಯಲ್ಸ್ ಕುಣಿದಾಟ

ವಿಶ್ವಟಿ20 ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ ಸ್ಯಾಮುಯಲ್ಸ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಕಾಮೆಂಟರಿ ಬಾಕ್ಸ್ ನಲ್ಲಿದ್ದ ವಾರ್ನ್ ಈ ಬಗ್ಗೆ ಟೀಕಿಸಿ, ಆತ ಫೈನಲ್ ಗಳಲ್ಲಿ ಮಾತ್ರ ಚೆನ್ನಾಗಿ ಆಡುವ ಆತ್ಮವಿಶ್ವಾಸವುಳ್ಳ ಆಟಗಾರ ಎಂದಿದ್ದರು.

ಇದಲ್ಲದೆ 2013ರಲ್ಲಿ ಬಿಗ್ ಬಾಶ್ ಲೀಗ್ ನಲ್ಲಿ ಇಬ್ಬರು ರನ್ ಕದಿಯುವ ಸಂದರ್ಭದಲ್ಲಿ ಕಿತ್ತಾಡಿಕೊಂಡ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಫೈನಲ್ ಪಂದ್ಯದ ಅಂತಿಮ ಓವರ್ ಗೂ ಮುನ್ನ ಬೆನ್ ಸ್ಟೋಕ್ಸ್ ಜೊತೆ ಮಾತಿನ ಚಕಮಕಿ ನಡೆಸಿದ ಕಾರಣಕ್ಕೆ ಸ್ಯಾಮುಯಲ್ಸ್ ಗೆ ಪಂದ್ಯದ ಸಂಭಾವನೆಯ ಶೇ 50ರಷ್ಟು ದಂಡ ವಿಧಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An irate Marlon Samuels today (April 3) trained his guns at Shane Warne as he dedicated his match- winning knock at World T20 final to Australian spin legend, whose comments spurred him to do well.
Please Wait while comments are loading...