ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್ ಸಿಂಗ್ ದಾಖಲೆ ರಿಪೀಟ್ ಮಾಡಿದ ಸಾಗರ್!

By Mahesh

ನವದೆಹಲಿ, ಡಿಸೆಂಬರ್ 01: ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ಹಜೇಲ್ ಕೀಚ್ ಮದುವೆಯದ್ದೇ ಸುದ್ದಿ. ಈ ನಡುವೆ 23ವರ್ಷದ ಕ್ರಿಕೆಟರ್ ರೊಬ್ಬರು ಯುವರಾಜ್ ಸಿಂಗ್ ಅವರ 'ಸಿಕ್ಸ್' ದಾಖಲೆಯನ್ನು ಪುನರಾವರ್ತನೆ ಮಾಡಿದ್ದಾರೆ. 6 ಎಸೆತಗಳಲ್ಲಿ 6 ಸಿಕ್ಸ್ ಬಾರಿಸಿದ್ದಾರೆ.

ಪಶ್ಚಿಮ ರೈಲ್ವೇಸ್ ಗೆ ಆಡುವ 23 ವರ್ಷದ ಆಲ್ ರೌಂಡರ್ ಸಾಗರ್ ಮಿಶ್ರಾ ಅವರು ಬುಧವಾರ(ನವೆಂಬರ್ 30) ದಂದು ಟೈಮ್ಸ್ ಶೀಲ್ಡ್ 'ಬಿ' ಡಿವಿಷನ್ ಪಂದ್ಯದಲ್ಲಿ ಆರ್ ಸಿಎಫ್ ವಿರುದ್ಧ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದಾರೆ.

ಈ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ. ರವಿಶಾಸ್ತ್ರಿ, ಯುವರಾಜ್ ಸಿಂಗ್ ನಂತರ ಈ ಸಾಧನೆ ಮಾಡಿದ್ದಾರೆ. ಸಾಗರ್ ಮಿಶ್ರಾ ಕೂಡಾ ಯುವರಾಜ್ ರಂತೆ ಎಡಗೈ ಬ್ಯಾಟ್ಸ್ ಮನ್ ಎನ್ನುವುದು ವಿಶೇಷ.

Sagar Mishra of Western Railways does a Yuvraj Singh, hits six 6s in an over

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸಾಗರ್ ಅವರು 35 ಎಸೆತಗಳಲ್ಲಿ 51ರನ್ ಗಳಿಸಿದ್ದರು. ನಂತರ ಆಫ್ ಸ್ಪಿನ್ನರ್ ತುಷಾರ್ ಕುಮಾರೆ ಅವರ ಒಂದು ಓವರ್ ನಲ್ಲಿ ಎಲ್ಲಾ ಎಸೆತಗಳನ್ನು ಸಿಕ್ಸರ್ ಆಗಿ ಪರಿವರ್ತಿಸಿ 46 ಎಸೆತಗಳಲ್ಲಿ 91ರನ್ ಚೆಚ್ಚಿದರು. ಕೊನೆ 11 ಎಸೆತಗಳಲ್ಲಿ 9 ಸಿಕ್ಸ್ ಬಾರಿಸಿದ್ದು ವಿಶೇಷ.

ಯುವರಾಜ್ ಸಿಂಗ್ ಅವರು 2007ರಲ್ಲಿ ಆರು ಸಿಕ್ಸರ್ ಬಾರಿಸಿದ್ದನ್ನು ನೋಡಿದ್ದೆ, ಆದರೆ, ನಾನು ಕೂಡಾ ಇಂಥ ಸಾಧನೆ ಮಾಡುವ ಕನಸು ಕೂಡಾ ಇರಲಿಲ್ಲ ಎಂದು ಪಂದ್ಯದ ನಂತರ ಸಾಗರ್ ಹೇಳಿದ್ದಾರೆ.

ಯುವರಾಜ್ ಸಿಂಗ್ ಅವರು 2007ರ ವಿಶ್ವ ಟಿ20 ಟೂರ್ನಮೆಂಟ್ ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಓವರ್ ನಲ್ಲಿ 6ಸಿಕ್ಸರ್ ಬಾರಿಸಿದ್ದಲ್ಲದೆ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದರು. ರವಿಶಾಸ್ತ್ರಿ ಅವರು 1985ರಲ್ಲಿ ರಣಜಿ ಟ್ರೋಫಿ ಪಂದ್ಯದ ವೇಳೆ ಈ ಸಾಧನೆ ಮಾಡಿದ್ದರು. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X