ಕೆಪಿಎಲ್ 2016: ಉದ್ಘಾಟನಾ ಪಂದ್ಯದಲ್ಲಿ ಘರ್ಜಿಸಿದ ಹುಬ್ಬಳ್ಳಿ ಟೈಗರ್ಸ್!

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಸೆ. 17 : ಕರ್ನಾಟಕ ಪ್ರೀಮಿಯರ್ ಲೀಗ್ ನ 5ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಗೆಲುವಿನ ಶುಭಾರಂಭ ಮಾಡಿದೆ. ತವರಿನಲ್ಲಿ ಹುಬ್ಬಳ್ಳಿ ಟೈಗರ್ಸ್ ನಮ್ಮ ಶಿವಮೊಗ್ಗ ವಿರುದ್ಧ ಎರಡು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು. [ಐದನೇ ಕೆಪಿಎಲ್ ಸಮರ ಸಂಪೂರ್ಣ ವೇಳಾಪಟ್ಟಿ]

ಸೆ. 17 ರಂದು ರಾಜನಗರದ ಕೆಎಸ್ ಸಿಎ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆಮಾಡಿಕೊಂಡು ನಮ್ಮ ಶಿವಮೊಗ್ಗ ತಂಡಕ್ಕೆ ಬ್ಯಾಟಿಂಗ್ ನೀಡಿತು. [ಕಾವೇರಿ ಗಲಭೆ: ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು]

hubli tigers

ಬ್ಯಾಟಿಂಗ್ ಆರಂಭಿಸಿದ ಶಿವಮೊಗ್ಗ ಸಾಧೀಕ್ ಕಿರ್ಮಾನಿ ಹಾಗೂ ನಿಕಿನ್ ಜೋಸ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿ, ಹುಬ್ಬಳ್ಳಿಗೆ 130 ರನ್‌ಗಳ ಗುರಿ ನೀಡಿತು.

ಸಾಧೀಕ್ ಕಿರ್ಮಾನಿ ಅವರ ಅರ್ಧಶತಕ (63 ಎಸೆತ, 69 ರನ್)ಗಳಿಸಿ ತಂಡಕ್ಕೆ ನೆರವಾದರು. ಮತ್ತೊಂದೆಡೆ ನಿಕಿನ್ ಜೋಸ್ 37 ರನ್ ಕಲೆಹಾಕಿ ಉತ್ತಮ ಸಾಥ್ ನೀಡಿದರು.ಹುಬ್ಬಳ್ಳಿ ಪರ ಎಸ್ ಅರವಿಂದ್ 4 ಓವರ್ ಗಳಲ್ಲಿ 16 ರನ್ ನೀಡಿ 3 ವಿಕೆಟ್ ಕಬಳಿಸಿದರು. [ಕೆಪಿಎಲ್: ಸುದೀಪ್ ರಾಕ್ ಸ್ಟಾರ್ ಸೇರಿದ ಎನ್ ಸಿ ಅಯ್ಯಪ್ಪ]

130 ರನ್ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ 8 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿ ಎರಡು ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿದರು. ಟೈಗರ್ಸ್ ಪರ ನಾಯಕ ಕುಣಾಲ್ ಕಪೂರ್ 35 ರನ್ ಭಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. [ಕಾವೇರಿ ಗಲಭೆ: ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು]

ಕೊನೆಯಲ್ಲಿ ವಿನೂ ಪ್ರಸಾದ್ 2 ಸಿಕ್ಸರ್ 1 ಬೌಂಡರಿ ನರವಿನಿಂದ ಅಜೇಯ 22 ಬಾರಿಸಿ ಗೆಲುವಿನ ರೂವಾರಿಯಾದರು. 4 ಓವರ್ ಗಳಲ್ಲಿ 1 ಮೆಡನ್ ಓವರ್ ಮಾಡಿ 16 ಕ್ಕೆ3 ವಿಕೆಟ್ ಕಬಳಿಸಿದ ಹುಬ್ಬಳ್ಳಿಯ ವೇಗಿ ಎಸ್. ಅರವಿಂದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubli Tigers beat Namma Shivamogga in a close encounter by 2 wickets. It was a low scoring match but Hubli Tigers held the nerves and won the inaugural match today played at KSCA Cricket Ground Hubli.
Please Wait while comments are loading...