ಶಸ್ತ್ರಚಿಕಿತ್ಸೆ ನಂತರ ಸಚಿನ್ 'ಮ್ಯಾಚ್' ನೋಡಿದ್ರಂತೆ

Posted By:
Subscribe to Oneindia Kannada

ಲಂಡನ್, ಜುಲೈ 07: 'ಕ್ರಿಕೆಟ್ ದೇವರು', ಶ್ರೇಷ್ಠ ಕ್ರಿಕೆಟರ್, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬ್ಯಾಂಡೇಜ್ ಸುತ್ತಲಾಗಿದೆ. ಸಚಿನ್ ಅವರ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸುದ್ದಿ ಬುಧವಾರವೇ ಓದಿರಬಹುದು. ಆದರೆ, ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯದೆ ಸಚಿನ್ ಮಾಡಿದ್ದೇನು? ಮುಂದೆ ಓದಿ...

ಇಲ್ಲಿನ ಆಸ್ಪತ್ರೆಯೊಂದರಲ್ಲಿ ಬುಧವಾರ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಎಡ ಮೊಣಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡಿರುವ ಚಿತ್ರವನ್ನು ಸಚಿನ್ ಅವರು ಫೇಸ್​ಬುಕ್​ನಲ್ಲಿ ಹಾಕಿದ್ದು ವೈರಲ್ ಆಗಿದ್ದು ಎಲ್ಲವೂ ತಿಳಿದಿರಬಹುದು. ಆದರೆ, ಬೆಡ್ ನಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕಿದ್ದ ಸಚಿನ್ ಅವರು ತಮ್ಮ ನೆಚ್ಚಿನ 'ಮ್ಯಾಚ್' ವೀಕ್ಷಿಸಿದ್ದಾರೆ. [ಕ್ರಿಕೆಟ್ 'ದೇವರು' ಸಚಿನ್ ಅವರ ಸಂಶೋಧನೆ ಬಗ್ಗೆ ಟ್ವೀಟ್ ಕಾಮಿಡಿ]

Sachin Tendulkar Undergoes Knee Surgery in London

ಪ್ರತಿ ವರ್ಷ ತಪ್ಪದೇ ವಿಂಬಲ್ಡನ್ ಟೆನಿಸ್ ಟೂರ್ನಿ ನೋಡುವ ಅದರಲ್ಲೂ ರೋಜರ್ ಫೆಡರರ್ ಅಭಿಮಾನಿಯಾಗಿರುವ ಸಚಿನ್ ಅವರು ಈ ವರ್ಷ ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಾರೆ. ಆದರೆ, ಟಿವಿಯಲ್ಲಿ ಫೆಡರರ್ ಮ್ಯಾಚ್ ನೋಡಿ ಆನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್, ಫೆಡರರ್ ಅವರ ಹೋರಾಟದ ಆಟ, ಐತಿಹಾಸಿಕ(ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆದ್ದಿರುವ ಏಕೈಕ ಆಟಗಾರ) ಜಯದ ಬಗ್ಗೆ ಪ್ರಶಂಶಿಸಿದ್ದಾರೆ.

'ನಿವೃತ್ತಿ ಹೊಂದಿದ್ದರೂ ಕೆಲ ಗಾಯಗಳು ಇನ್ನು ಕಾಡುತ್ತಿವೆ. ಶೀಘ್ರವೇ ವಾಪಸಾಗುವೆ. ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಆಗಿದ್ದು, ವಿಶ್ರಾಂತಿ ತೆಗೆದುಕೊಳ್ಳುತ್ತಿರುವೆ' ಎಂದು ಸಚಿನ್ ಹೇಳಿದ್ದರು.

ಈ ಚಿತ್ರಕ್ಕೆ 170K ಬಾರಿ ಲೈಕ್, 1,991 ಬಾರಿ ಹಂಚಿಕೆ ಹಾಗೂ 13,136ಕ್ಕೂ ಅಧಿಕ ಕಾಮೆಂಟ್ ಗಳು ಬಂದಿವೆ. ಸಚಿನ್ 'ಗೆಟ್ ವೆಲ್ ಸೂನ್' ಎಂದು ಸಾವಿರಾರು ಅಭಿಮಾನಿಗಳು ಹಾರೈಸಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sachin Tendulkar Undergoes Knee Surgery in London.Tendulkar, who is on a bed rest for a brief period of time, posted a picture of his operated knee on the social media platform Facebook. Later Sachin watched Roger Federrer's historic win at Wimbledon.
Please Wait while comments are loading...