ಲಂಡನ್‌ನಲ್ಲಿ ಕ್ರಿಕೆಟ್ ದೇವರ ಕಾಲಿಗೆ ಶಸ್ತ್ರಚಿಕಿತ್ಸೆ

Written By:
Subscribe to Oneindia Kannada

ಲಂಡನ್, ಜುಲೈ, 06: ಕ್ರಿಕೆಟ್ ದಂತಕತೆ, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಬುಧವಾರ ಲಂಡನ್ ನಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. [ಶಸ್ತ್ರಚಿಕಿತ್ಸೆ ನಂತರ ಸಚಿನ್ 'ಮ್ಯಾಚ್' ನೋಡಿದ್ರಂತೆ]

ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಸಚಿನ್ ಅಪ್ ಲೋಡ್ ಮಾಡಿದ್ದಾರೆ. ಚಿತ್ರ ಹಾಕಿ ಮೂರೇ ಗಂಟೆ ಅವಧಿಯಲ್ಲಿ ಲಕ್ಷಾಂತರ ಜನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಚಿತ್ರ ಸಾವಿರಕ್ಕೂ ಅಧಿಕ ಶೇರ್ ಗಳನ್ನು ಕಂಡಿದೆ.[ಕ್ರಿಕೆಟ್ 'ದೇವರು' ಸಚಿನ್ ಅವರ ಸಂಶೋಧನೆ ಬಗ್ಗೆ ಟ್ವೀಟ್ ಕಾಮಿಡಿ]

sachin tendulkar

ನಿವೃತ್ತಿಯ ನಂತರವೂ ಕೆಲವು ಗಾಯಗಳು ನನ್ನ ಕಾಡುತ್ತಿದ್ದವು. ಹೀಗಾಗಿ ನಾನು ಮಂಡಿ ಶಸ್ತ್ರ ಚಿಕಿತ್ಸೆ ಒಳಗಾಗಿದ್ದೇನೆ. ಶೀಘ್ರ ಗುಣಮುಖವಾಗಿ ನಿಮ್ಮ ಮುಂದೆ ಹಾಜರಾಗುತ್ತೇನೆ ಎಂದು ಕ್ರಿಕೆಟ್ ದೇವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.[ಸಚಿನ್‌ಗೆ ಯೋಗ ಕಲಿಸಿದ ಬೆಂಗಳೂರಿನ ಡಾ. ಓಂಕಾರ್ ಸಂದರ್ಶನ]

ಟ್ವಿಟ್ಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿರುವ ಸಚಿನ್ ಕೆಲ ದಿನಗಳ ಹಿಂದೆ ತಮ್ಮ ಪ್ರವಾಸದ ನೆನಪುಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ದ್ವೀಪವೊಂದರ ಬಳಿ ನಿಂತು ಭಾರತದ ಭೂಪಟ ಕಾಣುತ್ತಿದೆ ಎಂದು ಬರೆದುಕೊಂಡಿದ್ದರು, ಇದಕ್ಕೆ ಟ್ವಿಟ್ಟರ್ ನಲ್ಲಿ ತರೇವಾರಿ ಪ್ರತಿಕ್ರಿಯೆಗಳು ಬಂದಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's retired cricket legend Sachin Tendulkar has undergone a knee surgery at London. Tendulkar posted a picture of his left leg, covered in a black cast, on his Facebook page and commented that he hopes to recover soon.
Please Wait while comments are loading...