ವಿಶ್ವ ದಾಖಲೆ ವೀರನಿಗೆ 'ಕ್ರಿಕೆಟ್ ದೇವರ' ಕಿವಿಮಾತು

Posted By:
Subscribe to Oneindia Kannada

ಮುಂಬೈ, ಜ.05: ವಿಶ್ವ ದಾಖಲೆ ಬರೆದ ಬಾಲಕ ಪ್ರಣವ್ ಧನವಾಡೆಗೆ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರು ಕಿವಿಮಾತು ಹೇಳಿದ್ದಾರೆ. ಸಚಿನ್ ಅವರು ಕೂಡಾ ಶಾಲಾ ದಿನಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು ಎಂಬುದನ್ನು ಮರೆಯುವಂತಿಲ್ಲ.

ಒಂದೇ ಇನಿಂಗ್ಸ್ ನಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿ ಹೊಸ ಇತಿಹಾಸ ನಿರ್ಮಿಸಿದ ಪ್ರಣವ್ ಧನವಾಡೆ ಮಂಗಳವಾರ ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾನೆ. [ಸಾವಿರ ರನ್ ಬಾರಿಸಿ ಇತಿಹಾಸ ನಿರ್ಮಿಸಿದ ಪ್ರಣವ್]

Sachin Tendulkar to world record holder Pranav Dhanawade: 'You need to scale new peaks'

15 ವರ್ಷ ವಯಸ್ಸಿನ ಪ್ರಣವ್ ಅವರು ಶ್ರೀಮತಿ ಕೆಸಿ ಗಾಂಧಿ ಹೈಯರ್ ಸೆಕೆಂಡರಿ ಶಾಲೆ ಪರ ಆಡುತ್ತಾ 1,009 ರನ್ ನಾಟೌಟ್ ಸ್ಕೋರ್ ಮಾಡಿದ್ದು ಹೊಸ ದಾಖಲೆಯಾಗಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮಾನ್ಯತೆ ಪಡೆದಿರುವ ಎಚ್ ಟಿ ಭಂಡಾರಿ ಕಪ್ ಅಂತರ್ ಶಾಲಾ ಟೂರ್ನಿಯಲ್ಲಿ ಆರ್ಯ ಗುರುಕುಲ್ ಶಾಲೆ ವಿರುದ್ಧ ಈ ಸಾಧನೆ ಕಂಡು ಬಂದಿದೆ.

1009ರನ್ ಗಳಿಸಿ ನಾಟೌಟ್ ಆಗಿ ಉಳಿದ ಪ್ರಣವ್ ಅವರು (323 ಎಸೆತಗಳು, 395 ನಿಮಿಷಗಳು, 129X4, 59X6) 312.38 ಸ್ಟ್ರೈಕ್ ರೇಟ್)

ಪ್ರಣವ್ ಸಾಧನೆಯಿಂದ ಶ್ರೀಮತಿ ಕೆಸಿ ಗಾಂಧಿ ಹೈಸ್ಕೂಲ್ 1,465 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಪ್ರಣವ್ ಸಾಧನೆಗೆ ಶುಭ ಹಾರೈಸಿರುವ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ. ಇದು ಸಾಧನೆಯ ಮೊದಲ ಮೆಟ್ಟಿಲು ಮಾತ್ರ ಎಂದಿದ್ದಾರೆ.

ಆಟೋರಿಕ್ಷಾ ಚಾಲಕ ಪ್ರಶಾಂತ್ ಅವರ ಪುತ್ರ ಪ್ರಣವ್ ಅವರು 10ನೇ ತರಗತಿಯಲ್ಲಿ ಓದುತ್ತಿದ್ದು, ಅವರ ಕ್ರೀಡಾ ಸಾಧನೆಯನ್ನು ಗಮನಿಸಿರುವ ಮಹಾರಾಷ್ಟ್ರ ಸರ್ಕಾರ ಅವರ ಕ್ರಿಕೆಟ್ ಕೋಚಿಂಗ್ ವೆಚ್ಚ ಭರಿಸುವುದಾಗಿ ಘೋಷಿಸಿದೆ. ಸಚಿನ್ ಅವರ ಮೆಚ್ಚುಗೆ ಮಾತಿನಿಂದ ಪ್ರಣವ್ ಖುಷಿಯಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Batting legend and former India captain Sachin Tendulkar today congratulated Mumbai schoolboy Pranav Dhanawade for becoming the first-ever batsman to score 1,000 runs in an innings.
Please Wait while comments are loading...