ಸಚಿನ್ ಮಗ ಅರ್ಜುನ್ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿ!

Posted By:
Subscribe to Oneindia Kannada

ನವದೆಹಲಿ, ಫೆ. 18: ಉತ್ತರ ಪ್ರದೇಶ ಶಿಕ್ಷಣ ಮಂಡಳಿ ಪ್ರಮಾದ ಎಸಗಿದೆ. ಮುಂಬೈ ನಿವಾಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರ ಹೆಸರು ಉತ್ತರಪ್ರದೇಶ ಪರೀಕ್ಷೆ ಪ್ರವೇಶ ಪರೀಕ್ಷಾ ಪತ್ರದಲ್ಲಿ ಕಾಣಿಸಿಕೊಂಡಿದೆ.

ಆಗ್ರಾದ ಕಾಲೇಜೊಂದರ ಪ್ರವೇಶ ಪತ್ರದಲ್ಲಿ ಅರ್ಜುನ್ ತೆಂಡೂಲ್ಕರ್ ಅವರ ಭಾವಚಿತ್ರ ಕಾಣಿಸಿಕೊಂಡಿದೆ. [ಸಾವಿನ ಮನೆ ಕದ ತಟ್ಟಿದ ಅನುಭವ ಹಂಚಿಕೊಂಡ ಸಚಿನ್]

Sachin and Arjun

ಅಡ್ಮಿಟ್ ಕಾರ್ಡ್ ನಂಬರ್ 0025488 ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಅವರ ಚಿತ್ರ ಅವರ ಹುಟ್ಟಿದ ದಿನಾಂಕ 10/06/1996 ಎಂದು ನಮೂದಿಸಲಾಗಿದೆ. ಜೊತೆಗೆ ಹೆಸರು ಅರ್ಜುನ್ ಸಿಂಗ್ ಎಂದು ಬರೆಯಲಾಗಿದೆ. ಶ್ರೀಮತಾ ದೇವಿ (ತಾಯಿ) ಹಾಗೂ ರಾಮ್ ನಿವಾಸ್ (ತಂದೆ) ಎಂದು ಮುದ್ರಿತವಾಗಿದೆ.

ಈ ಪತ್ರಕ್ಕೆ ಅಂಕುರ್ ಇಂಟರ್ ಕಾಲೇಜಿನ ಅಧಿಕಾರಿಯ ಸಹಿ ಕೂಡಾ ಇದೆ. ನಕಲಿ ಅಡ್ಮಿಷನ್ ಕಾರ್ಡ್ ಜಾಲ ಹೆಚ್ಚಾಗಿದೆ. 20 ರಿಂದ 30 ಸಾವಿರ ರು ಖರ್ಚು ಮಾಡಿ ನಕಲಿ ಪ್ರಮಾಣ ಪತ್ರ, ಪ್ರವೇಶ ಪತ್ರ ಪಡೆಯುತ್ತಾರೆ. ಯಾರದ್ದೋ ಫೋಟೋ ಯಾರದ್ದೋ ಹೆಸರು ಇರುತ್ತದೆ. ಇದಕ್ಕೆ ಅನೇಕ ಕಾಲೇಜುಗಳ ಆಡಳಿತ ಅಧಿಕಾರಿಗಳ ಬೆಂಬಲವೂ ಇರುತ್ತದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a major goof up, the Uttar Pradesh Education Board issued an admit card for high school examination with cricket legend Sachin Tendulkar's son Arjun's photo on it.
Please Wait while comments are loading...