ಹುಬ್ಬಳ್ಳಿ: ಎರಡೆರಡು ಸೊನ್ನೆ ಸುತ್ತಿದ ಕ್ರಿಕೆಟ್ ದೇವರ ಮಗ!

Written By:
Subscribe to Oneindia Kannada

ಹುಬ್ಬಳ್ಳಿ,ಮೇ, 26: ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಎರಡು ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಪಶ್ಚಿಮ ವಲಯದ ಪರ ಬ್ಯಾಟಿಂಗ್ ಗೆ ಇಳಿದ ಅರ್ಜುನ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಆದರೆ ಮೊದಲ ದಿನ ಸಚಿನ್ ಪುತ್ರ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು. ಆದರೆ ಎರಡನೇ ಇನಿಂಗ್ಸ್ ನಲ್ಲೂ ಅರ್ಜುನ್ ಸೊನ್ನೆ ಸುತ್ತಿದರು.[ನನ್ನನ್ನು ಕ್ರಿಕೆಟ್ ದೇವರಿಗೆ ಹೋಲಿಸಬೇಡಿ ಎಂದ ವಿರಾಟ್ ಕೊಹ್ಲಿ]

cricket

ಕೆಎಸ್ ಸಿಎ ಮೈದಾನದಲ್ಲಿ ಬುಧವಾರದಿಂದ 16 ರ ವಯೋಮಿತಿಯವರ ಅಂತರ ವಲಯ ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಪಶ್ಚಿಮ ವಲಯದ ತಂಡದಲ್ಲಿರುವ ಅರ್ಜುನ್ ತೆಂಡೂಲ್ಕರ್ ಉತ್ತರ ವಲಯ ವಿರುದ್ಧ ಬ್ಯಾಟಿಂಗ್ ಮಾಡಲು ಆಗಮಿಸಿದ್ದರು. ಆದರೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.[ಸಚಿನ್ ಮಗ ಅರ್ಜುನ್ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿ!]

ಮೊದಲ ಇನಿಂಗ್ಸ್ ವೇಳೆ ಐದನೇ ಕ್ರಮಾಂಕದಲ್ಲಿ ಆಡಲು ಬಂದಿದ್ದ ಅರ್ಜುನ್ ಒಂದು ಚೆಂಡು ಎದುರಿಸಿ ಮಾಡಿ ಕ್ರೀಸ್ ನಲ್ಲಿದ್ದದರು. ಆದರೆ ಎರಡನೇ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ನೆರೆದ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.[ಕ್ರಿಕೆಟ್ ದೇವರ ಕಾಲಿಗೆ ಬಿದ್ದರೆ ತಪ್ಪೇನು ಇಲ್ಲ]

cricket

ಎರಡನೇ ಇನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತದಲ್ಲಿಯೇ ಬೌಲ್ಡ್ ಆಗಿ ನಿರ್ಗಮಿಸಿದರು. ಉತ್ತರ ವಲಯದ ವೇಗಿ ಸುಮೀತ್ ಶರ್ಮ ವಿಕೆಟ್ ಕಬಳಿಸಿದರು. 2ನೇ ದಿನ ಬೌಲಿಂಗ್‌ನಲ್ಲೂ ಅರ್ಜುನ್ ನಿರಾಸೆ ಅನುಭವಿಸಿದರು. 2 ದಿನಗಳ ಪಂದ್ಯ ಇದಾಗಿತ್ತು. ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಬುಧವಾರ 12 ಓವರ್ ಬೌಲಿಂಗ್ ಮಾಡಿದ್ದ ಅರ್ಜುನ್ ತೆಂಡೂಲ್ಕರ್ 52 ರನ್ ನೀಡಿ ಕೇವಲ 1 ವಿಕೆಟ್ ಪಡೆದು ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಮೇ, 27, 28 ರಂದು ಇದೇ ಮೈದಾನದಲ್ಲಿ ಪಶ್ಚಿಮ ವಲಯ ಮತ್ತು ಪೂರ್ವ ವಲಯ ನಡುವೆ ಪಂದ್ಯ ನಡೆಯಲಿದೆ.

ಪಶ್ಚಿಮ ವಲಯ: 194 ಹಾಗೂ 11 ಓವರ್‌ಗಳಲ್ಲಿ 3 ವಿಕೆಟ್‌ಗೆ 31(ಸುವೇದ ಪಾರ್ಕರ್ 11, ಸುಮೀತ್ ಶರ್ಮ 14ಕ್ಕೆ2). ಉತ್ತರ ವಲಯ: 78.2 ಓವರ್‌ಗಳಲ್ಲಿ 285 (ಪ್ರಭಸಿಮ್ರಾನ್ ಸಿಂಗ್ 59, ಆಯೂಷ್ ಬಡೋಣಿ 88, ಕಮ್ರಾಮ್ ಇಕ್ಬಾಲ್ 37, ಸುಮೀತ್ ಶರ್ಮ 48, ಆಕಾಶ್ ಪಾಂಡೆ 81ಕ್ಕೆ4, ಯೋಗೇಶ್ ಡೊಂಗ್ರೆ 40ಕ್ಕೆ 2).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Cricket god Sachin Tendulkar's son Arjun Tendulkar out for duck in both innings in the inter-zonal cricket tournament. The match played at Rajanagar cricket stadium Hubballi.
Please Wait while comments are loading...