ಅಯ್ಯೋ ! 'ಕ್ರಿಕೆಟ್ ದೇವರು' ಸಚಿನ್ ಗೆ ಟ್ವಿಟ್ಟರ್ ನಲ್ಲಿ ಛೀಮಾರಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 19 : ಕ್ರಿಕೆಟ್ ದೇವರು ಎಂದೆನಿಸಿಕೊಂಡಿರುವ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರಿಗೂ ಟ್ವಿಟ್ಟರ್ ಗೂ ಯಾಕೋ ಆಗಿ ಬರುತ್ತಿಲ್ಲ. ಪ್ರವಾಸದ ವೇಳೆ ಫೋಟೋ ಹಂಚಿಕೊಂಡು ನಗೆಪಟಾಲಿಗೆ ಈಡಾದ ಬಳಿಕ, ಮಂಗಳವಾರದಂದು ಯಾವುದೋ ರೆಸಾರ್ಟ್ ಪರ ಬ್ಯಾಟಿಂಗ್ ಮಾಡಿ, ಸಾರ್ವಜನಿಕರಿಂದ ಬೌನ್ಸರ್ ಹಾಕಿಸಿಕೊಂಡಿದ್ದಾರೆ.

ಎಕಾನಾಮಿಕ್ಸ್ ಟೈಮ್ಸ್ ವರದಿಯಂತೆ ಸಂಸದ ತೆಂಡೂಲ್ಕರ್ ಅವರು ಮುಸ್ಸೋರಿಯಲ್ಲಿರುವ ಐಷಾರಾಮಿ ರೆಸಾರ್ಟ್ ವೊಂದನ್ನು ಉಳಿಸಿಕೊಳ್ಳುವ ಸಲುವಾಗಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರ ಸಹಾಯ ಬೇಡಿದ್ದಾರೆ ಎನ್ನಲಾಗಿದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಗೆ ಸೇರಿದ ಕೇಂದ್ರಕ್ಕೂ ಈ ಖಾಸಗಿ ರೆಸಾರ್ಟ್ ಗೂ ಹೆಚ್ಚಿನ ಅಂತರವಿಲ್ಲ.

ಡಿಆರ್ ಡಿಒಗೆ ಸೇರಿರುವ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಕಟ್ಟಡದ ಕಾಂಪೌಂಡ್ ನಿಂದ 50 ಅಡಿ ಜಾಗವನ್ನು ರೆಸಾರ್ಟ್ ನವರು ಅತಿಕ್ರಮಿಸಿದ್ದಾರೆ. [ಸಚಿನ್ ಅವರ ಸಂಶೋಧನೆ ಬಗ್ಗೆ ಟ್ವೀಟ್ ಕಾಮಿಡಿ]

ಇದು ಕಟ್ಟಡ ನಿರ್ಮಾಣ ರಹಿತ(no-construction zone) ವಲಯವೆಂದು ಘೋಷಿಸಲಾಗಿದೆ. ಇಂಥ ರೆಸಾರ್ಟ್ ಪರ ಸಚಿನ್ ಬ್ಯಾಟಿಂಗ್ ಮಾಡಿದ್ದಾರೆ. ಸರಿಯಾದ ತಿಳುವಳಿಕೆ ಇಲ್ಲದೆ ಅಕ್ರಮ ರೆಸಾರ್ಟ್ ಪರ ಸಚಿನ್ ನಿಂತಿರುವುದಕ್ಕೆ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ಸಚಿನ್ ವಿರುದ್ಧ ಬಂದಿರುವ ಟ್ವೀಟ್ ಗಳ ಸಂಗ್ರಹ ಮುಂದಿದೆ.

ರೆಸಾರ್ಟ್ ಪರ ಸಚಿನ್ ಬ್ಯಾಟಿಂಗ್ ಏಕೆ?

ರೆಸಾರ್ಟ್ ಪರ ಸಚಿನ್ ಬ್ಯಾಟಿಂಗ್ ಏಕೆ?

ಸಚಿನ್ ಅವರ ನೆಚ್ಚಿನ ವಿಶ್ರಾಂತಿಗಳಲ್ಲಿ ಇದು ಒಂದೆನಿಸಿದೆ. ಅವರ ಬಿಸಿನೆಸ್ ಪಾಲುದಾರ ಸಂಜಯ್ ನಾರಂಗ್ ಅವರು ಈ ರೆಸಾರ್ಟ್ ನ ಸಹ ಮಾಲೀಕರಾಗಿದ್ದಾರೆ. ಹೀಗಾಗಿ ಸಚಿನ್ ಅವರು ಈ ರೆಸಾರ್ಟ್ ಬಗ್ಗೆ ಬಂದಿರುವ ದೂರು, ಆರೋಪಗಳನ್ನು ಪರಿಹರಿಸುವಂತೆ ರಕ್ಷಣಾ ಸಚಿವರನ್ನು ಕೇಳಿಕೊಂಡಿದ್ದಾರೆ. ವಿವಿಐಪಿ ಸಂಸ್ಕೃತಿ ಪೋಷಿಸಲು ಮುಂದಾಗಿರುವ ಸಚಿನ್ ಗೆ ಇಂಥದ್ದೆಲ್ಲ ಬೇಕಾ ಎಂದು ಟ್ವಿಟ್ಟರ್ ನಲ್ಲಿ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.

ಕ್ರಿಕೆಟ್ ದೇವರು ಕೂಡಾ ಲಾಬಿ ಮಾಡುತ್ತಾರೆ

ಕ್ರಿಕೆಟ್ ದೇವರು ಕೂಡಾ ಲಾಬಿ ಮಾಡುತ್ತಾರೆ, ಗೆಳೆಯನಿಗೋಸ್ಕರ ರಕ್ಷಣಾ ಇಲಾಖೆಯನ್ನೇ ರಾಜಿ ಮಾಡಿಕೊಳ್ಳುವಂತೆ ಕೇಳಿದ್ದಾರಂತೆ.

ದೊಡ್ಡ ದೇವರು ಕೇಳಿದರೆ ಸರ್ಕಾರ ತಲೆಬಾಗುತ್ತದೆ

ದೊಡ್ಡ ದೇವರು ಕೇಳಿದರೆ ಸರ್ಕಾರ ತಲೆಬಾಗುತ್ತದೆ, ಸಣ್ಣ ಪುಟ್ಟ ದೇವರಿಗೆ ತಲೆಬಾಗಿ ಅಭ್ಯಾಸವಾಗಿದೆ.

ಸ್ವಜನ ಪಕ್ಷಪಾತ, ಸ್ವಾರ್ಥ ಎಂದರೆ ಇದೆ

ಸ್ವಜನ ಪಕ್ಷಪಾತ, ಸ್ವಾರ್ಥ ಎಂದರೆ ಇದೆ ಇರಬೇಕು, ಇಂಥದ್ದರಲ್ಲಿ ಯಾಕೆ ಸಚಿನ್ ಸಿಲುಕಿದ್ದಾರೋ...

ಭಾರತ ರತ್ನಕ್ಕೆ ಬೆಲೆ ಇಲ್ಲದ್ದಂತಾಗಿದೆ

ಸಚಿನ್ ಮಾಡಿದ ಕಾರ್ಯದಿಂದ ಭಾರತ ರತ್ನಕ್ಕೆ ಬೆಲೆ ಇಲ್ಲದ್ದಂತಾಗಿದೆ

ದೇವರ ಆಟ ಬಲ್ಲವರು ಯಾರು

ದೇವರ ಆಟ ಬಲ್ಲವರು ಯಾರು ಎಂದು ಹಿರಿಯರು ಹೇಳಿದ್ದು ಇದಕ್ಕೆ ಇರಬೇಕು.

ರಾಜ್ಯಸಭೆಗೆ ಹಾಜರಾಗದ ಭಾರತರತ್ನ

ರಾಜ್ಯಸಭೆಗೆ ಹಾಜರಾಗದ ಸಚಿನ್ ಗೆ ಭಾರತರತ್ನ, ನೇತಾಜಿ ಬೋಸ್ ಗೆ ಏನು ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketing legend Sachin Tendulkar on Tuesday (July 19) was slammed on micro-blogging site Twitter after news reports claimed he tried to save business ally's 'illegal' resort in Mussoorie.
Please Wait while comments are loading...