ಸಚಿನ್ -ಶೇನ್ ಆಲ್ ಸ್ಟಾರ್ ಲೀಗ್ ಮತ್ತೆ ಆರಂಭ, ಕ್ಲಾರ್ಕ್, ಕೆಪಿ ಸೇರ್ಪಡೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25 ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ಮತ್ತೆ ಆರಂಭಗೊಳ್ಳಲಿದೆ. ಅಮೆರಿಕನ್ನರಿಗೆ ಕ್ರಿಕೆಟ್ ಹುಚ್ಚು ಹಿಡಿಸಲು ಮತ್ತೊಮ್ಮೆ ಈ ಇಬ್ಬರು ದಿಗ್ಗಜರು ಸಜ್ಜಾಗಿದ್ದಾರೆ.

ಮೊದಲ ಬಾರಿ ನಡೆದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಸಚಿನ್ ಬ್ಲಾಸ್ಟರ್ಸ್ ತಂಡದ ವಿರುದ್ಧ ಶೇನ್ ವಾರ್ನ್ ವಾರಿಯರ್ಸ್ ತಂಡ 0-3 ಅಂತರದಿಂದ ಸೋಲಿಸಿತ್ತು.

Sachin Tendulkar-Shane Warne's All Stars Series to be back in 2017

ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರನ್ನು ಒಂದೆಡೆ ಕೂಡಿಸಿರುವ ಲೀಗ್ ಯಾ ಬಗೆಯಲ್ಲಿ ಜಗತ್ತಿಗೆ ಮನರಂಜನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು. [ಆಲ್ ಸ್ಟಾರ್ ಲೀಗ್ ನಲ್ಲಿ ಯಾರ್ಯಾರಿದ್ದಾರೆ?]

Sachin Tendulkar-Shane Warne's All Stars Series to be back in 2017

ಈ ಬಾರಿ ಕಳೆದ ಲೀಗ್ ನಲ್ಲಿ ಆಡಿದ ಮಾಜಿ ಕ್ರಿಕೆಟರ್ ಗಳ ಜತೆಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ಇಂಗ್ಲೆಂಡಿನ ಮಾಜಿ ನಾಯಕ ಕೆವಿನ್ ಪೀಟರ್ಸನ್, ನ್ಯೂಜಿಲೆಂಡ್ ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರು ಈ ಬಾರಿ ಅಡುತ್ತಿರುವುದು ವಿಶೇಷ.

Sachin Tendulkar-Shane Warne's All Stars Series to be back in 2017

ಸೆಪ್ಟೆಂಬರ್/ ಅಕ್ಟೋಬರ್ 2017ರ ವೇಳೆಗೆ ಪಂದ್ಯವಾಳಿಗಳು ನಡೆಯುವ ಸಾಧ್ಯತೆಯಿದೆ. ಇಲ್ಲಿ ತನಕ ಈ ಲೀಗ್ ನಲ್ಲಿ ಆಡಲು ಒಪ್ಪಿರುವ ಆಟಗಾರರ ಪಟ್ಟಿ ಹೀಗಿದೆ.

* ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
* ಶೇನ್ ವಾರ್ನ್ (ಆಸ್ಟ್ರೇಲಿಯಾ)
* ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
* ಕೆವಿನ್ ಪೀಟರ್ಸನ್ (ಇಂಗ್ಲೆಂಡ್)
* ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
* ವಾಸೀಂ ಅಕ್ರಮ್ (ಪಾಕಿಸ್ತಾನ)
* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
* ಶೋಯಿಬ್ ಅಖ್ತರ್ (ಪಾಕಿಸ್ತಾನ)
* ಕುಮಾರ್ ಸಂಗಕ್ಕಾರ (ಶ್ರೀಲಂಕಾ)
* ಮಹೇಲ ಜಯವರ್ದನೆ( ಶ್ರೀಲಂಕಾ)

Sachin Tendulkar-Shane Warne's All Stars Series to be back in 2017

* ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ)
* ಗ್ರಹಾಂ ಸ್ಮಿತ್ (ದಕ್ಷಿಣ ಆಫ್ರಿಕಾ)
* ಶಾನ್ ಪೊಲ್ಲಾಕ್ (ದಕ್ಷಿಣ ಆಫ್ರಿಕಾ)
* ಮೈಕಲ್ ವಾಗನ್ (ಇಂಗ್ಲೆಂಡ್)
* ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ೦
* ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
* ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ)
* ಗ್ರಹಾಂ ಸ್ವಾನ್ (ಇಂಗ್ಲೆಂಡ್)
* ಜಾಂಟಿ ರೋಡ್ಸ್ (ದಕ್ಷಿಣ ಆಫ್ರಿಕಾ)
* ಡರೇನ್ ಗೌ (ಇಂಗ್ಲೆಂಡ್)
* ಆಂಡ್ರ್ಯೂ ಸೈಮಂಡ್ಸ್ (ಆಸ್ಟ್ರೇಲಿಯಾ)
* ಅಲಾನ್ ಡೊನಾಲ್ಡ್ (ದಕ್ಷಿಣ ಆಫ್ರಿಕಾ)
* ಸ್ಟೀಫನ್ ಫ್ಲೆಮಿಂಘ್ (ನ್ಯೂಜಿಲೆಂಡ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Spin legend Shane Warne today (November 18) announced that the All Stars Series Twenty20 will be back next year with the addition of new players including former Australian captain Michael Clarke.
Please Wait while comments are loading...