ಬ್ರಾಡ್ ಅಯ್ಕೆಯ ‍XI : ಭಾರತದಿಂದ ಸಚಿನ್ ಮಾತ್ರ

Posted By:
Subscribe to Oneindia Kannada

ಬೆಂಗಳೂರು, ಜನವರಿ 19 : ಇಂಗ್ಲೆಂಡಿನ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಅವರು ತಮ್ಮ ಆಯ್ಕೆಯ ಸರ್ವಶ್ರೇಷ್ಠ ತಂಡವನ್ನು ಆಯ್ಕೆ ಮಾಡಿದ್ದಾರೆ. ಇಂಗ್ಲೆಂಡ್ ಹಾಲಿ ನಾಯಕ ಅಲೆಸ್ಟರ್ ಕುಕ್ ಅವರನ್ನು ನಾಯಕರಾಗಿದ್ದರೆ, ಭಾರತದಿಂದ ಸಚಿನ್ ತೆಂಡೂಲ್ಕರ್ ಮಾತ್ರ ಏಕೈಕ ಆಟಗಾರರಾಗಿದ್ದಾರೆ.

ಬ್ರಾಡ್ ಆಯ್ಕೆಯ ತಂಡದಲ್ಲಿ ಮೂವರು ಇಂಗ್ಲೀಷ್ ಹಾಗೂ ನಾಲ್ವರು ಆಸ್ಟ್ರೇಲಿಯನ್ನರಿದ್ದಾರೆ. ನ್ಯೂಜಿಲೆಂಡ್ ನಿಂದ ಸರ್ ರಿಚರ್ಡ್ ಹ್ಯಾಡ್ಲಿ ಅವರನು ಆಯ್ಕೆ ಮಾಡಿರುವುದು ವಿಶೇಷ, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ, ಭಾರತದ ಸಚಿನ್ ತೆಂಡೂಲ್ಕರ್ , ದಕ್ಷಿಣ ಅಫ್ರಿಕಾದಿಂದ ಆಯ್ಕೆಯಾಗಿರುವ ಏಕೈಕ ಆಟಗಾರ ಜಾಕ್ ಕಾಲೀಸ್ ಮಧ್ಯ ಕ್ರಮಾಂಕದಲ್ಲಿದ್ದಾರೆ.

ಪಾಕಿಸ್ತಾನ ಹಾಗೂ ಶ್ರೀಲಂಕಾದಿಂದ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಲ್ಲ. ಲಾರ್ಡ್ಸ್ ಕ್ರಿಕೆಟ್ ನ ಯೂಟ್ಯೂಬ್ ಚಾನೆಲ್ ನಲ್ಲಿ ತಂಡ ಪ್ರಕಟಿಸಲಾಗಿದ್ದು, ಆಸ್ಟ್ರೇಲಿಯಾದ ಸ್ಪಿನ ದಿಗ್ಗಜ ಶೇನ್ ವಾರ್ನ್ ಅವರನ್ನು ಉಪನಾಯಕನಾಗಿ ಹೆಸರಿಸಲಾಗಿದೆ. ಆಸ್ಟ್ರೇಲಿಯಾದ ಗಿಲ್ ಕ್ರಿಸ್ಟ್ ಬದಲಿಗೆ ಇಂಗ್ಲೆಂಡಿನ ಮ್ಯಾಟ್ ಪಿಯರ್ ಆಯ್ಕೆ ಅಚ್ಚರಿ ಮೂಡಿಸಿದೆ. ಬ್ರಾಡ್ ಆಯ್ಕೆಯ ತಂಡ ಹೀಗಿದೆ:

Sachin Tendulkar only Indian player in Stuart Broad's all-time XI

1. ಅಲೆಸ್ಟರ್ ಕುಕ್ (ಇಂಗ್ಲೆಂಡ್-ನಾಯಕ)
2. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
4. ಸ‌ಚಿನ್ ತೆಂಡೂಲ್ಕರ್ (ಭಾರತ)
5. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
6. ಜಾಕ್ವಸ್ ಕಾಲೀಸ್ (ದಕ್ಷಿಣ ಆಫ್ರಿಕಾ)
7. ಮ್ಯಾಥ್ಯೂ ಪಿಯರ್ (ಇಂಗ್ಲೆಂಡ್- ವಿಕೆಟ್ ಕೀಪರ್)
8. ಸರ್ ರಿಚರ್ಡ್ ಹ್ಯಾಡ್ಲಿ (ನ್ಯೂಜಿಲೆಂಡ್)
9. ಶೇನ್ ವಾರ್ನ್ (ಆಸ್ಟ್ರೇಲಿಯಾ- ಉಪನಾಯಕ)
10. ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)
11.ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Senior England pacer Stuart Broad has picked up his all-time Playing XI and named current England skipper Alastair Cook as its captain.
Please Wait while comments are loading...