ಕೋಟ್ಯಂತರ ಮಂದಿಗೆ ಸಚಿನ್ ಜೀವನಗಾಥೆ ಸ್ಫೂರ್ತಿ : ಮೋದಿ

Posted By:
Subscribe to Oneindia Kannada

ನವದೆಹಲಿ, ಮೇ 19 : ಸಚಿನ್ ಜೀವನ ಕುರಿತ ಚಿತ್ರ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ನಿರ್ಮಾಣಗೊಂಡಿದ್ದು, ದೇಶದ ಜನತೆ ಚಿತ್ರ ಬಿಡುಗಡೆ ಆಗುವುದನ್ನು ನಿರೀಕ್ಷಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಈ ಕುರಿತಂತೆ ಪ್ರಧಾನಿ ಮೋದಿ ಅವರ ಜತೆ ಸಚಿನ್ ಅವರು ಶುಕ್ರವಾರದಂದು ಮಾತುಕತೆ ನಡೆಸಿದರು.

ಸಚಿನ್ ಅವರ ಜೀವನಗಾಥೆ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಮೋದಿ ಹೊಗಳಿದರು. ಸಚಿನ್ ಅವರ ಜೀವನಗಾಥೆಯನ್ನು ಹೊಂದಿರುವ 'ಸಚಿನ್: ಎ ಬಿಲಿಯನ್ ಡ್ರೀಮ್ಸ್ ' ಚಿತ್ರ ಮೇ 26ರಂದು ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಚಿನ್ ಅವರು ಶುಕ್ರವಾರದಂದು ಪತ್ನಿ ಅಂಜಲಿ ಹಾಗೂ ಚಿತ್ರ ತಂಡದೊಡನೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.

ಜೇಮ್ಸ್ ಎರ್ ಸ್ಕಿನ್ ನಿರ್ದೇಶನದ ಚಿತ್ರವು ಸಚಿನ್ ತೆಂಡೂಲ್ಕರ್ ಅವರ ಜೀವನದ ಈವರೆಗಿನ ಪಯಣವನ್ನು ಅನಾವರಣಗೊಳಿಸಲಿದೆ. ಅಲ್ಲದೆ, ಸಚಿನ್ ಬಗ್ಗೆ ಈವರೆಗೆ ತಿಳಿಯದಿರುವ ಕೆಲವಾರು ಆಪ್ತ ವಿಚಾರಗಳನ್ನೂ ಹೇಳಲಾಗಿದೆ.

ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ನೀಡಿದ್ದಾರೆ. ರವಿ ಭಗಚಂದ್ರ ಎಂಬ ನಿರ್ಮಾಪಕರು 200 ನಾಟೌಟ್ ಎಂಬ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಶುಭ ಹಾರೈಸಿದ ಮೋದಿ

ಚಿತ್ರಕ್ಕೆ ಶುಭ ಹಾರೈಸಿದ ಮೋದಿ

ಜೇಮ್ಸ್ ಎರ್ ಸ್ಕಿನ್ ನಿರ್ದೇಶನದ ಚಿತ್ರವು ಸಚಿನ್ ತೆಂಡೂಲ್ಕರ್ ಅವರ ಜೀವನದ ಈವರೆಗಿನ ಪಯಣವನ್ನು ಅನಾವರಣಗೊಳಿಸಲಿದೆ. ಅಲ್ಲದೆ, ಸಚಿನ್ ಬಗ್ಗೆ ಈವರೆಗೆ ತಿಳಿಯದಿರುವ ಕೆಲವಾರು ಆಪ್ತ ವಿಚಾರಗಳನ್ನೂ ಹೇಳಲಾಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಮೋದಿ ಶುಭಹಾರೈಸಿದ್ದಾರೆ

ರಾಜ್ಯಸಭೆಗೂ ಬನ್ನಿ

ರಾಜ್ಯಸಭಾ ಸದಸ್ಯ ಸಚಿನ್ ಅವರಿಗೆ ಚಿತ್ರದ ಪ್ರಚಾರಕ್ಕೆ ಸಮಯವಿರುತ್ತದೆ ಆದರೆ, ರಾಜ್ಯಸಭೆ ಕಲಾಪಕ್ಕೆ ಬರಲು ಸಮಯ ಸಿಗುವುದಿಲ್ಲವೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕಾಲ್ಪನಿಕ ಸಂಭಾಷಣೆ

ರಾಜ್ಯಸಭಾ ಸದಸ್ಯರಾಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಬಂದ ಸಚಿನ್ ಹಾಗು ಮೋದಿ ಅವರ ನಡುವೆ ಹೀಗೊಂದು ಕಾಲ್ಪನಿಕ ಸಂಭಾಷಣೆ ನಡೆದಿರಬಹುದು.

ಅಮೀರ್ ಖಾನ್ ರಿಂದ ಶುಭಹಾರೈಕೆ

ಸಚಿನ್ ಅವರ ಚಿತ್ರಕ್ಕೆ ಶುಭಹಾರೈಸಿದ ನಟ ಅಮೀರ್ ಖಾನ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Indian cricketer and Rajya Sabha member, Sachin Tendulkar met Prime Minister Narendra Modi today(May 19).
Please Wait while comments are loading...