ಮೆಕಲಮ್ ಆಯ್ಕೆಯ ಶ್ರೇಷ್ಠ ತಂಡದಲ್ಲಿ ಸಚಿನ್ ಗೆ ಸ್ಥಾನ

Posted By:
Subscribe to Oneindia Kannada

ಲಂಡನ್, ಜೂನ್ 28: ನ್ಯೂಜಿಲೆಂಡ್ ನ ಶ್ರೇಷ್ಠ ಕ್ರಿಕೆಟರ್ ಬ್ರೆಂಡನ್ ಮೆಕಲಮ್ ಆಯ್ಕೆಯ ಶ್ರೇಷ್ಠ ತಂಡದಲ್ಲಿ ಭಾರತದಿಂದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಾತ್ರ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್ ಅವರು ತಂಡ ನಾಯಕರಾಗಿರುವ ಈ ತಂಡದಲ್ಲಿ ಸಚಿನ್ ಜೊತೆ ಕ್ರಿಸ್ ಗೇಲ್ ಆರಂಭಿಕ ಬ್ಯಾಟ್ಸ್ ಮನ್.[ಕ್ರಿಕೆಟ್ ದೇವರಿಗೆ ಹೋಲಿಸಬೇಡಿ ಎಂದ ವಿರಾಟ್ ಕೊಹ್ಲಿ]

ಆದರೆ, ಕಿವೀಸ್ ನ ಮಾಜಿ ನಾಯಕ ಮೆಕಲಮ್ ಅವರು ನ್ಯೂಜಿಲೆಂಡ್ ನಿಂದ ಇಬ್ಬರು ಬೌಲರ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ವೇಗಿಗಳು ತಂಡದಲ್ಲಿದ್ದಾರೆ. ಗೇಲ್ ಹಾಗೂ ಸಚಿನ್ ರಿಗಿಂತ ಶ್ರೇಷ್ಠ ಆರಂಭಿಕ ಬ್ಯಾಟ್ಸ್ ಮನ್ ಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಹಾಗೂ ನಾಯಕ ವಿವಿಯನ್ ರಿಚರ್ಡ್ಸ್ ಸೂಕ್ತ ಎಂದರು. [ಸಚಿನ್‌ಗೆ ಯೋಗ ಕಲಿಸಿದ ಬೆಂಗಳೂರಿನ ಡಾ. ಓಂಕಾರ್ ಸಂದರ್ಶನ]

Sachin Tendulkar lone Indian in Brendon McCullum's all-time XI

ಆಲ್ ರೌಂಡರ್ ಆಗಿ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್ ಇದ್ದರೆ, ಸ್ಪಿನ್ ದಿಗ್ಗಜ ಶೇನ್ ವಾರ್ನ್ ಬೌಲಿಂಗ್ ಪಡೆ ನೇತೃತ್ವ ವಹಿಸಲಿದ್ದಾರೆ. ಈ ತಂಡ ಟೆಸ್ಟ್, ಏಕದಿನ ಮಾದರಿ ಎರಡರಲ್ಲೂ ನನ್ನ ಮಟ್ಟಿಗೆ ಶ್ರೇಷ್ಠ ತಂಡ ಎಂದು ಮೆಕಲಮ್ ಅವರು ಲಾರ್ಡ್ಸ್,ಆರ್ಗ್ ಗೆ ತಿಳಿಸಿದ್ದಾರೆ.[ಸಚಿನ್ ಗಿಂತ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ ಮನ್']

ಮೆಕಲಮ್ ಆಯ್ಕೆಯ ತಂಡ ಹೀಗಿದೆ: ಕ್ರಿಸ್ ಗೇಲ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ವಿವಿಯನ್ ರಿಚರ್ಡ್ಸ್(ನಾಯಕ), ಜಾಕ್ ಕಾಲಿಸ್, ಆಡಂ ಗಿಲ್ ಕ್ರಿಸ್ಟ್ (ವಿಕೆಟ್ ಕೀಪರ್), ಮಿಚೆಲ್ ಜಾನ್ಸನ್, ಶೇನ್ ವಾರ್ನ್, ಟಿಮ್ ಸೌಥಿ,ಟ್ರೆಂಟ್ ಬೌಲ್ಟ್ (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Batting icon Sachin Tendulkar is the lone Indian to find a place in former New Zealand skipper Brendon McCullum's list of all-time cricketing XI with West Indian legend Vivian Richards as the captain.
Please Wait while comments are loading...