ಭಾರತ ವನಿತೆಯರ ಕ್ರಿಕೆಟ್ ತಂಡ ಕೊಂಡಾಡಿದ ಕೊಹ್ಲಿ, ಸೆಹ್ವಾಗ್, ಸಚಿನ್

Posted By:
Subscribe to Oneindia Kannada

ನವದೆಹಲಿ, ಜುಲೈ 21: ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಗೆ ಕಾಲಿಟ್ಟಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮಾಜಿ ಕ್ರಿಕೆಟರ್ ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಹಾಲಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್, ಪೂಜಾರ ಅವರು ಟ್ವಿಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ಯಾಲರಿ:ವಿಶ್ವಕಪ್ ಶತಕವೀರೆ ಹರ್ಮನ್‌ಪ್ರೀತ್ ಕೌರ್

ಇಂಗ್ಲೆಂಡ್ ನ ಡರ್ಬಿಯಲ್ಲಿ ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ, ಭಾರತ ತಂಡ, ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.

ಆಸ್ಟ್ರೇಲಿಯಾವನ್ನು ಬಗ್ಗುಬಡಿದು ವಿಶ್ವಕಪ್ ಫೈನಲ್ ಗೆ ಭಾರತ ಎಂಟ್ರಿ

ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 42 ಓವರ್ ಗಳಲ್ಲಿ (ಮಳೆಯಿಂದಾಗಿ ಇಳಿಸಲ್ಪಟ್ಟಿದ್ದ ಓವರ್) 4 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತ್ತು.

ಆನಂತರ, ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ, 40.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 245 ರನ್ ಮಾತ್ರ ಗಳಿಸಲು ಶಕ್ತವಾಯಿತು.

ಭಾರತದ ಪರವಾಗಿ ಅಜೇಯ 171 ರನ್ ಗಳಿಸಿದ್ದ ಹರ್ಮನ್ ಪ್ರೀತ್ ಕೌರ್ ಅವರು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ, ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.

ಭಾರತ ತಂಡದ ಈ ಗೆಲುವನ್ನು ಮೆಚ್ಚಿಕೊಂಡಿರುವ ಸೆಹ್ವಾಗ್, ಸೆಹ್ವಾಗ್ ಅವರು ತಮ್ಮ ಟ್ವೀಟ್ ನಲ್ಲಿ ಭಾರತ ತಂಡಕ್ಕೆ ಶುಭಾಷಯ ಹೇಳಿದ್ದಲ್ಲದೆ, ಹರ್ಮನ್ ಅವರ ಶತಕ ಸಾಧನೆಯನ್ನೂ ಮೆಚ್ಚಿಕೊಂಡಿದ್ದಾರೆ.

ಇನ್ನು, ಹರ್ಭಜನ್ ಸಿಂಗ್ ಅವರು, ಭಾರತದ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡನ್ನೂ ಕೊಂಡಾಡಿದ್ದಾರೆ. ಚೇತೇಶ್ವರ ಪೂಜಾರ ಅವರು, ಹರ್ಮನ್ ಅವರ ಶತಕದ ಸಾಧನೆಯನ್ನು ಕೊಂಡಾಡಿದ್ದರೆ, ವಿರಾಟ್ ಕೊಹ್ಲಿ ಸಹ ಪೂಜಾರಾ ಅವರ ಹೊಗಳಿಕೆಗೆ ದನಿಗೂಡಿಸಿದ್ದಾರೆ.

Ravi Shastri selected as head coach for Indian cricket team | Oneindia Kannada

ಇನ್ನು, ಮಾಜಿ ಕ್ರಿಕೆಟಿಗ ಸೆಹ್ವಾಗ್ ಅವರು, ವುಮನ್ಸ್ ಬ್ಲೂ ತಂಡದಿಂದ ಅದ್ಭುತ ಇನಿಂಗ್ಸ್ ಎಂದು ಕೊಂಡಾಡಿದ್ದಲ್ಲದೆ, ಇಂಗ್ಲೆಂಡ್ ವಿರುದ್ಧ ಇದೇ ಭಾನುವಾರ ನಡೆಯಲಿರುವ ಟೂರ್ನಿಯ ಫೈನಲ್ ಗೆ ಶುಭಾಷಯ ಕೋರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian former and current male cricketers expressed their happiness on the victory of Indian Eve's cricket team in the second semi final of Women's Cricket World Cup 2017. Sachin Tendulkar, Virat Kolhi, Vireder Sehwag among those who wished the Women's team.
Please Wait while comments are loading...