ಮಿಥಾಲಿಗೆ ಸಚಿನ್, ಕುಂಬ್ಳೆ ಸೇರಿ ಹಲವಾರು ಕ್ರಿಕೆಟರ ಅಭಿನಂದನೆ

Posted By:
Subscribe to Oneindia Kannada

ನವದೆಹಲಿ, ಜುಲೈ 12: ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆಗೆ ಪಾತ್ರರಾಗಿರುವ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ , ಹಾಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

ಲಂಡನ್ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಬುಧವಾರದ ಪಂದ್ಯದಲ್ಲಿ (ಜುಲೈ 12) ಆಸ್ಟ್ರೇಲಿಯಾ ತಂಡದ ವಿರುದ್ಧ 69 ರನ್ ಸಿಡಿಸಿದ ಮಿಥಾಲಿ, ಏಕದಿನ ಮಾದರಿಯ ಪಂದ್ಯದಲ್ಲಿ 6000 ರನ್ ಗಡಿ ದಾಟಿದರಲ್ಲದೆ, ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ಬರೆದ ಭಾರತದ ಮಿಥಾಲಿ ರಾಜ್

ಇದಲ್ಲದೆ, ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ 191 ಪಂದ್ಯಗಳಲ್ಲಿ 5992 ಅತ್ಯಧಿಕ ರನ್‌ ಗಳಿಸಿದ್ದ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್ ಅವರ ದಾಖಲೆಯನ್ನು ಮುರಿದರು.

ಇದೀಗ, ಅವರು 183 ಪಂದ್ಯಗಳಿಂದ (ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೂ ಸೇರಿ) 6,028 ರನ್ ಪೇರಿಸಿದ್ದಾರೆ.

ಸಾಧನೆ ಬಗ್ಗೆ ಮೆಚ್ಚುಗೆ

ಸಾಧನೆ ಬಗ್ಗೆ ಮೆಚ್ಚುಗೆ

ಅವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್, ಏಕದಿನ ಮಹಿಳಾ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಪೇರಿಸಿದ ಸಾಧನೆ ಮಾಡಿರುವುದು ದೊಡ್ಡ ವಿಚಾರವೆಂದಿದ್ದಾರೆ.

ಸಾಧನೆಗೆ ಅಭಿನಂದನೆ

ಸಾಧನೆಗೆ ಅಭಿನಂದನೆ

ಅನಿಲ್ ಕುಂಬ್ಳೆ ಸಹ ಮಿಥಾಲಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ''ಏಕದಿನ ಕ್ರಿಕೆಟ್ ನಲ್ಲಿ ಈವರೆಗೆ ಯಾರೂ ಮಾಡಿರದ ಸಾಧನೆ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು ಮಿಥಾಲಿ'' ಎಂದಿದ್ದಾರೆ.

ನಾಯಕ, ಆರಂಭಿಕರ ಶುಭಾಷಯ

ನಾಯಕ, ಆರಂಭಿಕರ ಶುಭಾಷಯ

ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ''ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಇಂದು ನೀವು (ಮಿಥಾಲಿ) ಹೊಸ ಇತಿಹಾಸ ಬರೆದಿದ್ದೀರಿ. ನಿಮಗೆ ಅಭಿನಂದನೆಗಳು'' ಎಂದಿದ್ದಾರೆ. ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಕೂಡಾ ಇದನ್ನೇ ಹೇಳಿದ್ದಾರೆ.

ಜಗತ್ತು ಮೆಚ್ಚುವ ಸಾಧನೆ ಎಂದ ಮಾಜಿ ಕ್ರಿಕೆಟಿಗ

ಜಗತ್ತು ಮೆಚ್ಚುವ ಸಾಧನೆ ಎಂದ ಮಾಜಿ ಕ್ರಿಕೆಟಿಗ

ಇನ್ನು, ಮಿಥಾಲಿ ರಾಜ್ ಅವರ ಸಾಧನೆಯನ್ನು ಹೊಗಳಿರುವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ''ಮಿಥಾಲಿಯವರ ಬೆಳವಣಿಗೆಯನ್ನು ನಾನು ಹತ್ತಿರದಿಂದ ಬಲ್ಲೆ. ಆಕೆ ತನ್ನ 10ನೇ ವಯಸ್ಸಿನಿಂದಲೇ ಕ್ರಿಕೆಟ್ ಗುಂಗು ಹಚ್ಚಿಸಿಕೊಂಡಿದ್ದವಳು. ಇಂದು ಜಗತ್ತೇ ಮೆಚ್ಚುವ ಸಾಧನೆ ಮಾಡಿದ್ದಾರೆ. ಅವರೀಗ ನಮ್ಮ ಹೆಮ್ಮೆ'' ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian cricket stars such as Sachin Tendulkar, Virat Kohli, Shikhar Dhanwan, Anil Kumble, VVS Lakshman congratulated Indian Woman's cricket team captain Mithali Raj, who completes 6000 runs in ODIs thus making a new world record of Highest run scorer this format.
Please Wait while comments are loading...