ಪುಣೆ: ಡುಪ್ಲೆಸಿಸ್ ಬದಲಿಗೆ ಜಾರ್ಜ್ ಬೈಲಿ ತಂಡಕ್ಕೆ

Posted By:
Subscribe to Oneindia Kannada

ಪುಣೆ. ಮೇ 02 : ಗಾಯಗೊಂಡು ಇಂಡಿಯನ್ ಪ್ರೀಮಿಯರ್ ಲೀಗ್ 2016 ಟೂರ್ನಿಯಿಂದ ಹೊರ ಹೋಗಿರುವ ಬ್ಯಾಟ್ಸ್ ಮನ್ ಫಾಫ್ ಡುಪ್ಲೆಸಿಸ್ ಅವರ ಬದಲಿಗೆ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಜಾರ್ಜ್ ಬೈಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕಳೆದ ಐಪಿಲ್ ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವನ್ನು ಮುನ್ನಡೆಸಿದ್ದ ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಅವರು ಗಾಯಗೊಂಡು ಹೊರ ಹೋಗಿರುವ ಫಾಫ್ ಡುಪ್ಲೇಸಿಸ್ ಅವರ ಸ್ಥಾನವನ್ನು ತುಂಬಲಿದ್ದಾರೆ. [ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

ಇಂಡಿಯನ್ ಪ್ರೀಮಿಯರ್ ಲೀಗ್ 2016 ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಪುಣೆ ಸೂಪರ್ ಜೈಂಟ್ಸ್ ತಂಡ ಒಂದು ಕಡೆ ಸೋಲಿನ ಸುಳಿಗೆ ಸಿಲುಕಿಕೊಂಡರೆ ಮತ್ತೊಂದೆಡೆ ಸ್ಟಾರ್ ಬ್ಯಾಟ್ಸ್ ಮನ್ ಗಳಾದ ಕೇವಿನ್ ಪೀಟರ್ಸನ್, ಸ್ಟೀವನ್ ಸ್ಮಿತ್, ಡುಪ್ಲೇಸಿಸ್, ಶಾನ್ ಮಾರ್ಷ್ ಈ ನಾಲ್ಕು ಸ್ಫೋಟಕ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದೆ. [ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

George Bailey

ಒಟ್ಟು 14 ಪಂದ್ಯಗಳಲ್ಲಿ ಈಗಾಗಲೇ 8 ಪಂದ್ಯಗಳನ್ನು ಆಡಿ 2 ರಲ್ಲಿ ಜಯಗಳಿಸಿರುವ ಪುಣೆ ತಂಡ ಅರ್ಹತಾ ಹಂತ ತಲುಪುವ ಹಾದಿ ಕಠಿಣವಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್ 2016 ನಲ್ಲಿ ಪಾಲ್ಗೊಂಡಿರುವ ಪುಣೆ ತಂಡ ಏನೆಲ್ಲ ಪ್ಲಾನ್ ಗಳು ಮಾಡಿದರೂ ಉಲ್ಟಾ ಹೊಡೆಯುತ್ತಿವೆ. [ಪುಣೆ ತಂಡದಿಂದ ಸ್ಮಿತ್ ಹೊರಕ್ಕೆ]

ಮೊದಲು ಬ್ಯಾಟ್ ಮಾಡಿ ಹೆಚ್ಚು ರನ್ ಗಳಿಸಿ ಬೃಹತ್ ಮೊತ್ತವನ್ನ ಎದುರಾಳಿ ತಂಡಕ್ಕೆ ಟಾರ್ಗೆಟ್ ನೀಡಿದರೆ ಬೌಲಿಂಗ್ ನಲ್ಲಿ ಎಡವುತ್ತದೆ. ಇನ್ನು ಬೌಲಿಂಗ್ ನಲ್ಲಿ ಬಲಿಷ್ಠವಾಗಿದ್ದರೆ ಬ್ಯಾಟಿಂಗ್ ಕೈಕೊಡುತ್ತಿದೆ. ಇದರಿಂದ ನಾಯಕ ಧೋನಿ ಅವರಿಗೆ ಏನು ಮಾಡಬೇಕು ಎಂಬುವುದ ತಿಳಿಯದಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australian batsman George Bailey has joined the Rising Pune Supergiants squad for the rest of the IPL 2016 season, as a replacement for Faf du Plessis, who is out with a finger injury.
Please Wait while comments are loading...