ಅನಿಲ್ ಕುಂಬ್ಳೆಯನ್ನು ನರೇಂದ್ರ ಮೋದಿ ಹೊಗಳಿದ್ದೇಕೆ?

Posted By:
Subscribe to Oneindia Kannada

ನವದೆಹಲಿ, ನವೆಂಬರ್ 09: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನೋಟುಗಳ ನಿಷೇಧ ಆದೇಶಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೋದಿ ಅವರ ಕ್ರಮವನ್ನು ಮೆಚ್ಚಿ ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿದ್ದರು. ಕುಂಬ್ಳೆ ಟ್ವೀಟ್ ಗೆ ಪ್ರಧಾನಿ ಅವರು ಪ್ರತಿಕ್ರಿಯಿಸಿ, ಹೊಗಳಿದ್ದು ವಿಶೇಷವಾಗಿದೆ.

ಮಂಗಳವಾರ (ನವೆಂಬರ್ 8) ರ ಮಧ್ಯರಾತ್ರಿಯಿಂದಲೇ ರೂ.500, ರೂ.1000 ನೋಟುಗಳು ರದ್ದಾಗಲಿವೆ. ಕಪ್ಪು ಹಣ ಮತ್ತು ನಕಲಿ ಹಣಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Rs 500 and 1,000 notes ban :Narendra Modi praises Anil Kumble on Twitter

500 ಹಾಗೂ 2000 ರುಇ ಮುಖಬೆಲೆಯ ಹೊಸ ನೋಟುಗಳು ನವೆಂಬರ್ 10ರಿಂದ ಜಾರಿಗೆ ಬರಲಿವೆ ಎಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಮೋದಿ ಹೇಳಿದ್ದರು.

ಪ್ರಧಾನಿ ಮೋದಿ ಅವರು ಒಳ್ಳೆ ಗೂಗ್ಲಿ ಹಾಕಿದ್ದಾರೆ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದರು.


ಎಷ್ಟೋ ಬ್ಯಾಟ್ಸ್ ಮನ್ ಗಳಿಗೆ ಅಚ್ಚರಿ ಮೂಡಿಸಿದ ಭಾರತದ ಹೆಮ್ಮೆಯ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಇಲ್ಲಿದೆ ನೋಡಿ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಉಳಿದಂತೆ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಆಕಾಶ್ ಛೋಪ್ರಾ, ಕಾಮೆಂಟೆಟರ್ ಹರ್ಷ ಭೋಗ್ಲೆ ಸೇರಿದಂತೆ ಅನೇಕ ಮಂದಿ ಟ್ವೀಟ್ ಮಾಡಿ ಮೋದಿ ಹಾಗೂ ಎನ್ ಡಿಎ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi's historic decision to demonetization of Rs 500 and 1000 currency notes was lauded by several former cricketers as well. In turn Narendra Modi praises Anil Kumble on Twitter.
Please Wait while comments are loading...