ರಾಯಲ್ ಚಾಲೆಂಜರ್ಸ್ ಬೆಂಗಳೂರು #PlayBold ಜರ್ಸಿ ಅನಾವರಣ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ಟೀಂ ಇಂಡಿಯಾದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ #PlayBold ಜರ್ಸಿ ಗಳನ್ನು ಗುರುವಾರ ಸಂಜೆ ಅನಾವರಣಗೊಳಿಸಲಾಯಿತು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಹೊಸ ಜರ್ಸಿ ಅನಾವರಣಕ್ಕೂ ಮುನ್ನ 2008ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ನ ವಿವಿಧ ಶೇಡ್ ಗಳಲ್ಲಿ ಆರ್ ಸಿಬಿ ಜರ್ಸಿಗಳನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಪ್ರದರ್ಶಿಸಲಾಯಿತು. ಅಭಿಮಾನಿಗಳನ್ನು ಹಳೆ ಜರ್ಸಿ ಜೊತೆ ಸೆಲ್ಫಿ ಚಿತ್ರಗಳಿಗಾಗಿ @RCBTweets ಮನವಿ ಮಾಡಿತ್ತು. [ವಿರಾಟ್ ಕೊಹ್ಲಿ ಹಾಗೂ ಜಾನ್ಸನ್ ವೈರತ್ವದ ರಹಸ್ಯ ಲೀಕ್!]

Royal Challengers Bangalore (RCB) Launch

ಈಗಾಗಲೇ ಫೇಸ್ ಬುಕ್ ನಲ್ಲಿ #PlayBold ಫ್ರೊಫೈಲ್ ಚಿತ್ರಗಳು ರಾರಾಜಿಸುತ್ತಿವೆ.

ಸಮಾರಂಭ ತಡವಾಗಿ ಆರಂಭವಾಗಿದ್ದಕ್ಕೆ ಸ್ಸಾರಿ ಕೇಳಿದ ಆರ್ ಸಿಬಿ ತಂಡದ ಮ್ಯಾನೇಜ್ಮೆಂಟ್ ಹೊಸ ಜರ್ಸಿ ಅನಾವರಣ ಕಾರ್ಯಕ್ರಮದ ಕ್ಷಣ ಕ್ಷಣ ಅಪ್ಡೇಟ್ಸ್ ನೀಡಿತು.

ಮೊಟ್ಟಮೊದಲ ಬಾರಿಗೆ ಜರ್ಸಿಯಲ್ಲಿ ಆಟಗಾರರ ಹೆಸರಿಗೆ ಬದಲಿಗೆ ಅಡ್ಡ ಹೆಸರು/ನಿಕ್ ನೇಮ್ ಬಳಸಲು ಆರಂಭಿಸಿದ್ದು ಆರ್ ಸಿಬಿ ತಂಡವೇ,

ಜೊತೆಗೆ ಹಸಿರು ಜರ್ಸಿ ಧರಿಸಿ ಗಿಡ ನೆಡಿ ಎಂದು ಅಭಿಯಾನ ಕೂಡಾ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Virat Kohli and ABD

ಹೇಗಿದೆ ಹೊಸ ಜರ್ಸಿ: ಈ ಮುಂಚಿನ ಹಳದಿ ಹಾಗೂ ಕೆಂಪು ಬಣ್ಣದ ವಿನ್ಯಾಸವನ್ನು ಕೈಬಿಡಲಾಗಿದೆ. ಬದಲಿಗೆ ಕಪ್ಪು ಮಿಶ್ರಿತ ಕೆಂಬಣ್ಣದ ದಿರಿಸು ಆಟಗಾರರಿಗೆ ಸಿಕ್ಕಿದೆ.[ಬ್ರಾಥ್ ವೈಟ್ ಈಗ ಡೆಲ್ಲಿ ಸರದಾರ!]


ತವರು ಪಿಚ್ ಗಳಿಗೆ ಒಂದು ವಿನ್ಯಾಸ ಹಾಗೂ ಬೇರೆ ಮೈದಾನಗಳಲ್ಲಿ ಆಡುವಾಗ ಬೇರೆ ವಿನ್ಯಾಸದ ಜರ್ಸಿ ಹಾಗೂ ಪ್ಯಾಂಟ್ ಧರಿಸುವ ಆಡುವ ಅವಕಾಶ ಆರ್ ಸಿಬಿ ತಂಡ ಮಾತ್ರ ಒದಗಿಸುತ್ತಿದೆ.

ಆರ್ ಸಿಬಿ ಲೋಗೋ ಕೂಡಾ ಬದಲಾಗಿದ್ದು, ಹಳದಿ ,ಕೆಂಪು ಬದಲಿಗೆ ಕಪ್ಪು, ಕೆಂಬಣ್ಣದಲ್ಲಿ ಆರ್ ಸಿಬಿ ಕಾಣಿಸುತ್ತಿದ್ದು, ಸಿಂಹ ಮೇಲಕ್ಕೆ ಹಾರಿರುವ ಲೋಗೋ #PlayBold ಎನ್ನುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) Launch their Jersy for IPL 2016 on Thursday evening (April 07). All RCB players will turn up in new jerseys and trousers. RCB was the first ever team to have players' twitter handles instead of their names at the back of their jerseys
Please Wait while comments are loading...